Advertisement
ಆರೋಪಿಗಳು ದನ ಕಳವು ಮಾಡಲು ಉಪಯೋಗಿಸುತ್ತಿದ್ದ ಕೆಎ 01 ಎಬಿ 0832 ನಂಬರಿನ ಕೆಂಪು ಬಣ್ಣದ ಮಹೇಂದ್ರ ಕಂಪೆನಿಯ ಕಾರು ಹಾಗೂ ಇತರ ಸೊತ್ತುಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಮದಡ್ಕ ಫಾರೂಕ್ ಪೊಲೀಸರಿಂದ ತಪ್ಪಿಕೊಂಡಿದ್ದಾನೆ.
Related Articles
ಆರೋಪಿತರ ವಿರುದ್ದ ಮಂಗಳೂರಿನ ಹೊರವಲಯದ ಬಜಪೆ, ಕೊಣಾಜೆ, ಕಾವೂರು, ಮೂಡುಬಿದಿರೆ, ಮಂಗ ಳೂರು ಉತ್ತರ, ಪುಂಜಾಲಕಟ್ಟೆ, ಬಂಟ್ವಾಳ ನಗರ ಮತ್ತು ಚಿಕ್ಕಮಗಳೂರು ಜಿಲ್ಲೆಯ ಬನಕಲ್, ಬಸವನಹಳ್ಳಿ ಮತ್ತು ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಗಳಲ್ಲಿ ದನ ಕಳವು ಮತ್ತು ದರೋಡೆಗೆ ಸಂಬಂಧಿ ಸಿದ ಪ್ರಕರಣಗಳು ದಾಖಲಾಗಿರುವುದು ತನಿಖೆಯಿಂದ ತಿಳಿದುಬಂದಿದೆ.
Advertisement
ಪ್ರತಿಭಟನೆಗೆ ಸಿದ್ಧತೆ ನಡೆದಿತ್ತುಆರೋಪಿತರು ವಿಟ್ಲದ ಮಿತ್ತೂರು ಎಂಬಲ್ಲಿ ದನ ಕಳವು ಮಾಡಿದ ವಿಚಾರದಲ್ಲಿ ಸ್ಥಳಿಯ ಸಂಘ ಸಂಸ್ಥೆಗಳು ಪ್ರತಿಭಟನೆಗೂ ಸಿದ್ಧತೆ ನಡೆಸಿದ್ದವು. ಈ ನಡುವೆ ಆರೋಪಿಗಳ ಬಂಧನವಾಗಿದೆ.
ಪೊಲೀಸ್ ಆಯುಕ್ತ ಕುಲದೀಪ್ ಕುಮಾರ್ ಜೈನ್ ಅವರ ಮಾರ್ಗದರ್ಶನದಂತೆ, ಡಿಸಿಪಿ ಅಂಶುಕುಮಾರ್ ಮತ್ತು ದಿನೇಶ್ ಕುಮಾರ್ ಅವರ ನಿರ್ದೇಶನದಂತೆ ಮಂಗಳೂರು ಉತ್ತರ ಉಪ ವಿಭಾಗದ ಎಸಿಪಿ ಮನೋಜ್ ಕುಮಾರ್ ನಾಯ್ಕ ಅವರ ನೇತೃತ್ವದಲ್ಲಿ ಬಜಪೆ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕ ಪ್ರಕಾಶ್ ನೇತೃತ್ವದಲ್ಲಿ ಎಸ್‌ಐ ಪೂವಪ್ಪ, ಗುರು ಕಾಂತಿ, ಎಎಸ್‌ಐ ರಾಮಣ್ಣ ಪೂಜಾರಿ, ಸುಜನ್, ರಶೀದಾ ಶೇಖ್, ರಾಜೇಶ್, ಸಂತೋಷ್, ಸಂಜೀವ ಭಜಂತ್ರಿ, ಬಸವರಾಜ್ ಪಾಟೀಲ್, ಮೋಹನ್, ಉಮೇಶ್ ಮತ್ತು ಕೆಂಚಪ್ಪ ಅವರು ಪತ್ತೆ ಕಾರ್ಯದಲ್ಲಿ ಭಾಗಿಯಾಗಿದ್ದರು.