Advertisement

ಬೆಳ್ಳಿ ಪರದೆ ಮೇಲೆ ‘ಭಜರಂಗಿ-2’ ಅಬ್ಬರಕ್ಕೆ ಮುಹೂರ್ತ ಫಿಕ್ಸ್  

12:25 PM Sep 26, 2021 | Team Udayavani |

ಕರುನಾಡ ಚಕ್ರವರ್ತಿ ಶಿವರಾಜ ಕುಮಾರ ಅಭಿನಯದ ಬಹುನಿರೀಕ್ಷಿತ ಭಜರಂಗಿ-2 ಸಿನಿಮಾ ಬಿಡುಗಡೆಗೆ ಮುಹೂರ್ತ ನಿಗದಿಯಾಗಿದೆ. ಬರುವ ಅಕ್ಟೋಬರ್ ತಿಂಗಳಿನಲ್ಲಿ ಚಿತ್ರಮಂದಿರಗಳಲ್ಲಿ ಭರ್ಜರಿಯಾಗಿ ಭಜರಂಗಿ ಎಂಟ್ರಿ ಕೊಡಲಿದ್ದಾನೆ.

Advertisement

ಹಾಗೆ ನೋಡಿದ್ರೆ ಸೆಪ್ಟೆಂಬರ್ ನಲ್ಲಿಯೇ ಈ ಸಿನಿಮಾ ತೆರೆಗೆ ತರಲು ಚಿತ್ರತಂಡ ಸಿದ್ಧವಾಗಿತ್ತು. ‘ಭಜರಂಗಿ 2’  ಸಿನಿಮಾ ಸೆ.10ರಂದು ಬಿಡುಗಡೆಯಾಗಲು ಸಜ್ಜಾಗಿತ್ತು. ಆದರೆ ಕೋವಿಡ್ ಭೀತಿ ಹಾಗೂ ಚಿತ್ರಮಂದಿರಗಳಲ್ಲಿ 100 % ಸೀಟು ಭರ್ತಿಗೆ ಅವಕಾಶ ಇಲ್ಲದಿದ್ದರಿಂದ ಚಿತ್ರತಂಡ ತನ್ನ ನಿರ್ಧಾರ ಬದಲಿಸಿತು. ಇದೀಗ ಹೊಸ ದಿನಾಂಕ ಘೋಷಣೆಯಾಗಿದ್ದು, ಅಕ್ಟೋಬರ್29 ರಂದು ರಾಜ್ಯಾದ್ಯಂತ ಬೆಳ್ಳಿ ಪರದೆ ಮೇಲೆ ಭರ್ಜರಿ ಸಿನಿಮಾ ರಾರಾಜಿಸಲಿದೆ.

ಎ. ಹರ್ಷ ನಿರ್ದೇಶನದ ಈ ಚಿತ್ರಕ್ಕೆ ಜಯಣ್ಣ ಮತ್ತು ಭೋಗೇಂದ್ರ ಬಂಡವಾಳ ಹೂಡಿದ್ದಾರೆ. ‘ಭಜರಂಗಿ’ ಸೂಪರ್​ ಹಿಟ್​ ಆಗಿದ್ದರಿಂದ ‘ಭಜರಂಗಿ 2’ ಮೇಲೆ ಜನರಿಗೆ ಹೆಚ್ಚು ನಿರೀಕ್ಷೆ ಇದೆ.

ಇನ್ನು ರಾಜ್ಯಾದ್ಯಂತ ಸಿನಿಮಾ ಮಂದಿರಗಳಲ್ಲಿ ಪೂರ್ಣ ಪ್ರಮಾಣದ ಸೀಟು ಭರ್ತಿಗೆ ಸರ್ಕಾರ ಅನುಮತಿ ನೀಡಿದೆ. ಇದರಿಂದ ಕನ್ನಡದ ಸ್ಟಾರ್ ನಟರುಗಳ ಸಿನಿಮಾಗಳ ಬಿಡುಗಡೆಗೆ ಮುಹೂರ್ತ ಕೂಡಿ ಬಂದಿದ್ದು, ರಿಲೀಸ್ ಡೇಟ್ ಅನೌನ್ಸ್ ಆಗುತ್ತಿವೆ.

Advertisement

Udayavani is now on Telegram. Click here to join our channel and stay updated with the latest news.

Next