Advertisement
ವಿಲೇವಾರಿ ಮಾಡಿದರೂ ಅಷ್ಟೇ !ಇಲ್ಲಿ ಕಸ ವಿಲೇವಾರಿ ವಾಹನ ಪ್ರತಿ ದಿನ ಬರುತ್ತದೆ. ಅವರು ತುಂಬಿಸಿಟ್ಟ ತ್ಯಾಜ್ಯಗಳನ್ನು ಮಾತ್ರ ಸಾಗಿಸುತ್ತಾರೆ. ಅದರಲ್ಲೂ ಕೆಲವು ಆಯ್ದ ಕಸವನ್ನು ಮಾತ್ರ ಕೊಂಡೊಯ್ಯುತ್ತಾರೆ ಎನ್ನುವ ಆರೋಪವಿದೆ. ಉಳಿದಂತೆ ಇಲ್ಲಿನ ಕಸ ವಿಲೇವಾರಿಯಾಗುವುದೇ ಇಲ್ಲ.
ಸದ್ಯ ತಾಲೂಕಿನ ವಿವಿಧ ಭಾಗಗಳಲ್ಲಿ ಡೆಂಗ್ಯೂ, ಮಲೇರಿಯಾ ಬಾಧೆ ಹೆಚ್ಚಾಗುತ್ತಿದೆ. ಬಜಗೋಳಿಯಲ್ಲೂ ಇದರ ಬಗ್ಗೆ ಕಿಂಚಿತ್ತೂ ಕಾಳಜಿ ತೋರಿದಂತಿಲ್ಲ. ಮಳೆಗಾಲಕ್ಕೂ ಮೊದಲೇ ಅಲ್ಲಿ ಬಿದ್ದಂತಹ ಕಸ ತ್ಯಾಜ್ಯಗಳು ಇನ್ನೂ ಹಾಗೆಯೇ ಇದ್ದು, ಸೊಳ್ಳೆ ಉತ್ಪತ್ತಿ ಕೇಂದ್ರದಂತಿದೆ. ಪೇಟೆಯ ಆಸುಪಾಸಿನ ಜನತೆ ಸಾಂಕ್ರಾಮಿಕ ರೋಗದ ಭೀತಿಯಲ್ಲಿದ್ದಾರೆ. ಬಜಗೋಳಿ ಪೇಟೆಯಲ್ಲಿ ಒಳಚರಂಡಿ ವ್ಯವಸ್ಥೆ ಪ್ರಾರಂಭಿಸಿ ಐದಾರು ತಿಂಗಳುಗಳೇ ಕಳೆದು ಹೋಗಿದೆ. ಅದಿನ್ನೂ ನಿಧಾನವಾಗಿ ಸಾಗುತ್ತಿದ್ದು ಪ್ರಗತಿ ಕಂಡಿಲ್ಲ. ಹೀಗಾಗಿ ಒಳಚರಂಡಿ ವ್ಯವಸ್ಥೆಗೆಂದು ಅಗೆದು ಹಾಕಿರುವ ಮಣ್ಣಿನಿಂದಾಗಿ ಪೇಟೆ ಮತ್ತಷ್ಟು ಮಲೀನಗೊಳ್ಳುತ್ತಿದೆ ಎಂಬುದು ಸ್ಥಳೀಯರ ದೂರು.
Related Articles
ಬಜಗೋಳಿ ಪೇಟೆಯಲ್ಲಿ ದಿನದಿಂದ ದಿನಕ್ಕೆ ಮಲೀನ ಹೆಚ್ಚಾಗುತ್ತಿದೆ. ಸ್ಥಳೀಯ ಪಂಚಾಯತ್ ಸ್ವಚ್ಛತೆಗೆ ಆದ್ಯತೆ ನೀಡಿ ಕ್ರಮ ಕೈಗೊಳ್ಳಬೇಕು. ಪೇಟೆಯಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳುವುದು ಎಲ್ಲರ ಜವಾಬ್ದಾರಿಯಾಗಿದೆ.
– ಪ್ರವೀಣ್, ಸ್ಥಳೀಯ ನಿವಾಸಿ
Advertisement
ಇಡೀ ಪೇಟೆ ಸ್ವಚ್ಛವಾಗಲಿ ಅಂಗಡಿಗಳ ಮುಂಭಾಗದಲ್ಲಿದ್ದ ಕಸವನ್ನು ಮಾತ್ರ ವಿಲೇವಾರಿ ಮಾಡಿದರೆ ಸಾಕಾಗುವುದಿಲ್ಲ. ಸ್ವತ್ಛತೆ ಮಳೆ ಬರುವ ಮೊದಲೇ ಮಾಡಿದ್ದರೆ ಒಳ್ಳೇದಿತ್ತು. ನಂತರ ಕಸ ವಿಲೇವಾರಿ ಸರಿಯಾಗಿ ಮಾಡಿದರೆ ಸ್ವಚ್ಛತೆ ಕಾಪಾಡಿಕೊಳ್ಳಬಹುದು. ಅಂಗಡಿಯ ಕಸ ಸಂಗ್ರಹಣೆಗೆ ತಿಂಗಳಿಗೆ 150 ರೂ. ಪಾವತಿಸುತ್ತೇವೆ.
– ಸ್ಥಳೀಯ ಅಂಗಡಿ ಮಾಲಕ