Advertisement

ಹೊಂಡಗುಂಡಿಗಳಿಂದ ತುಂಬಿದ ಬೈಲೂರು-ಪಳ್ಳಿ ರಸ್ತೆ

06:15 AM Jul 15, 2018 | |

ಕಾರ್ಕಳ: ತಾಲೂಕಿನ ಪಳ್ಳಿ- ಬೈಲೂರು ಸಂಪರ್ಕ ರಸ್ತೆಯಲ್ಲಿ ಹೊಂಡ ಗುಂಡಿಗಳೇ ತುಂಬಿ ವಾಹನ ಸಂಚಾರ ದುಸ್ತರವಾಗಿದೆ. ಪಳ್ಳಿ- ರಂಗನಪಲ್ಕೆ- ಬೈಲೂರು ಸಂಪರ್ಕಕಕ್ಕೆ ಇದೇ ಪ್ರಮುಖ ರಸ್ತೆ. 10 ಕಿ.ಮೀ. ಉದ್ದದ ಈ ರಸ್ತೆಗೆ ಮಧ್ಯದ ಮಾರುತಿ ನಗರ, ರಂಗನಪಲ್ಕೆಯಲ್ಲಿ ಕಾಂಕ್ರೀಟ್‌ ಹಾಕಲಾಗಿದೆ.  

Advertisement

ಆದರೆ ರಸ್ತೆಯ ಇಕ್ಕೆಲಗಳಲ್ಲಿ ಸರಿಯಾದ ಫಿನಿಷಿಂಗ್‌ ಕಾರ್ಯ ಆಗಿಲ್ಲ.ಪ್ರತಿನಿತ್ಯ ಈ ರಸ್ತೆಯಲ್ಲಿ ನೂರಾರು ವಾಹನಗಳು, ಸಾವಿರಾರು ಮಂದಿ ಓಡಾ ಡುತ್ತಾರೆ. ಆಳ್ವಾಸ್‌, ನಿಟ್ಟೆ, ಶಿರ್ವ ಸೇರಿದಂತೆ ಪ್ರತಿಷ್ಠಿತ ಕಾಲೇಜುಗಳ ಶಾಲಾ ವಾಹನಗಳು ಸೇರಿದಂತೆ  ಬೈಲೂರು, ಕಣಜಾರು, ಪಳ್ಳಿ ಭಾಗದಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗೆ ತೆರಳುವ ವಿದ್ಯಾರ್ಥಿಗಳು ಇದೇ ರಸ್ತೆ ಅವಲಂಬಿಸಿದ್ದಾರೆ.

ಅಲ್ಲಲ್ಲಿ ಕೆಸರುಮಯ
ಇತ್ತೀಚೆಗೆ ಸಾರ್ವಜನಿಕರು ರಸ್ತೆಯ ಗುಂಡಿಗಳನ್ನು ಮಣ್ಣುಹಾಕಿ ಮುಚ್ಚುವ ಕಾರ್ಯ ನಡೆಸಿದ್ದರು. ಆದರೆ ಎಡಬಿಡದೆ ಸುರಿಯುತ್ತಿರುವ ಮಳೆಗೆ ರಸ್ತೆ ಪೂರ್ತಿ ಈಗ ಕೆಸರುಮಯವಾಗಿದೆ.

ಮಳೆನೀರು ಹರಿದು ಹೋಗಲು ಸೂಕ್ತ ಚರಂಡಿ ವ್ಯವಸ್ಥೆಯಿಲ್ಲದೆ ಮಳೆ ನೀರು ರಸ್ತೆಯಲ್ಲಿಯೇ ಹರಿಯುತ್ತಿದೆ.ಇದರಿಂದಾಗಿ ರಸ್ತೆ ಮತ್ತಷ್ಟು ಹದಗೆಟ್ಟಿದ್ದು, ಸಂಚಾರ ಕಷಾÌಗುತ್ತಿದೆ ಎಂದು ಸ್ಥಳೀಯರು ದೂರಿದ್ದಾರೆ.

ಪಂಚಾಯತ್‌ಗೆ ಮನವಿ
ಕಳೆದ ಐದಾರು ವರ್ಷಗಳಿಂದ ರಸ್ತೆ ದುರಸ್ತಿಕಾರ್ಯವಾಗಿಲ್ಲ. ರಸ್ತೆ ಸರಿಪಡಿ ಸುವಂತೆ  ಪಂಚಾಯತ್‌ಗೆ ಮನವಿ ಮಾಡಲಾಗಿದೆ. ಆದರೆ ಅದು ಜಿಲ್ಲಾ ಪಂಚಾಯತ್‌ ರಸ್ತೆಯಾಗಿರುವುದರಿಂದ ಗ್ರಾಮ ಪಂಚಾಯತ್‌ ಕೂಡ ಸುಮ್ಮನಿದೆ  ಎನ್ನುತ್ತಾರೆ ಸ್ಥಳೀಯರು.

Advertisement

ಶೀಘ್ರ ಕೆಲಸ ಪ್ರಾರಂಭ
ಜನರಿಗೆ ಸಮಸ್ಯೆ ಯಾಗುತ್ತಿರುವುದು ಗಮನಕ್ಕೆ ಬಂದಿದೆ.. ಕೂಡಲೇ ಸ್ಪಂದಿಸುವ ನಿಟ್ಟಿನಲ್ಲಿ  11 ಕೋ.ರೂ. ಅನುದಾನ ಇಡಲಾಗಿದೆ. 5 ಕೋ.ರೂ. ಕಾಮಗಾರಿಗೆ ಟೆಂಡರ್‌ ಆಗಿದೆ. ಕೆಲಸವೂ ಪ್ರಾರಂಭವಾಗಿತ್ತು, ಆದರೆ ಮಳೆ ಜೋರಾಗಿರುವ ಕಾರಣ ಕೆಲಸ ಮಾಡಲು ಸಾಧ್ಯವಾಗಿಲ್ಲ. ಶೀಘ್ರವೇ ಕೆಲಸ ಮತ್ತೆ ಪ್ರಾರಂಭಗೊಳಿಸಲಾಗುವುದು.
 - ಸುಮಿತ್‌ ಶೆಟ್ಟಿ  ಕೌಡೂರು, ಜಿ.ಪಂ. ಸದಸ್ಯರು

ಸಂಚಾರ ಕಷ್ಟ
ರಸ್ತೆಯ ಸ್ಥಿತಿ ದುಸ್ತರವಾಗಿದ್ದು ಓಡಾಟ ಕಷ್ಟವಾಗಿದೆ. ಸಾರ್ವಜನಿಕರೇ ಅನೇಕ ಬಾರಿ ಶ್ರಮದಾನ ಮಾಡಿ ಅಲ್ಲಲ್ಲಿ  ಗುಂಡಿಮುಚ್ಚುವ ಕಾರ್ಯ ಮಾಡಿದ್ದಾರೆ. ಪೂರ್ಣ ಪ್ರಮಾಣದಲ್ಲಿ  ರಸ್ತೆ ದುರಸ್ತಿಕಾರ್ಯ ಶೀಘ್ರ ನಡೆಯಬೇಕು.
– ಪ್ರಸಿಲ್ಲಾ ಮೇಬಲ್‌ ನಜ್ರತ್‌, ರಂಗನಪಲ್ಕೆ

Advertisement

Udayavani is now on Telegram. Click here to join our channel and stay updated with the latest news.

Next