Advertisement

ರಾಷ್ಟ್ರ ನಿರ್ಮಾಣಕ್ಕೆ ಪಣ ತೊಡಿ

03:38 PM Oct 12, 2018 | Team Udayavani |

ಬೈಲಹೊಂಗಲ: ರಾಷ್ಟ್ರ ಹಾಗೂ ಹಿಂದೂ ಧರ್ಮ ರಕ್ಷಣೆಗಾಗಿ ಪ್ರತಿಯೊಬ್ಬರು ನಿಸ್ವಾರ್ಥ ಸೇವೆ ಸಲ್ಲಿಸಿ ಅತ್ಯಮೂಲ್ಯ ಕೊಡುಗೆ ನೀಡಬೇಕು. ಹಿಂದೂ ರಾಷ್ಟ್ರ ನಿರ್ಮಾಣಕ್ಕೆ ಪಣ ತೊಡಬೇಕು ಎಂದು ಶಾಖಾ ಮೂರುಸಾವಿರಮಠದ ಪೀಠಾಧಿಪತಿ ಪ್ರಭುನೀಲಕಂಠ ಸ್ವಾಮೀಜಿ ಹೇಳಿದರು.

Advertisement

ಗುರುವಾರ ಪಟ್ಟಣದಲ್ಲಿ ವಿಶ್ವಹಿಂದೂ ಪರಿಷತ್‌, ಭಜರಂದಳ, ಶ್ರೀರಾಮ ಸೇನೆ ತಾಲೂಕು ಘಟಕದಿಂದ ನವರಾತ್ರಿ ದಸರಾ ಉತ್ಸವ ನಿಮಿತ್ತ ಗುರುವಾರ ಆರಂಭಗೊಂಡ ದುರ್ಗಾಮಾತಾ ದೌಡ್‌ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿ, ಭಾರತೀಯ ಹಿಂದೂ ಸನಾತನ ಧರ್ಮದ ಉಳುವಿಗಾಗಿ ಜಾಗೃತಿ ಅವಶ್ಯವಾಗಿದೆ. ಸಾಧುಗಳು, ಸಂತರು, ಮಹಾತ್ಮರು, ಶೂರರು ದೇಶದ ಪ್ರಗತಿಗೆ ನೀಡಿದ ದಾರಿಯಲ್ಲಿ ಇಂದಿನ ಯುವಶಕ್ತಿ ಮುನ್ನಡೆದು ದೇಶದ ಪ್ರಗತಿಗೆ ನೆರವಾಗಬೇಕು ಎಂದರು.

ಜವಳಿಕೂಟ ಗ್ರಾಮದೇವಿ ಮಂದಿರದಿಂದ ಆರಂಭವಾದ ದೌಡ್‌ ಮೂರುಸಾವಿರಮಠ, ಢಮ್ಮಣಗಿ ಗಲ್ಲಿ, ಕುಂಬಾರ ಗಲ್ಲಿ, ಕುರುಬರ ಗಲ್ಲಿ, ಹೊಸ ಓಣಿ, ಗುಂಡ್ಲೂರ ಚಾಳ, ಮೇದಾರ ಗಲ್ಲಿ, ಅಂಬೇಡ್ಕರ್‌ ನಗರ ಮಾರ್ಗವಾಗಿ ಗಾಳಿ ದುರ್ಗಮ್ಮ ದೇವಿ ದೇವಸ್ಥಾನಕ್ಕೆ ಬಂದು ತಲುಪಿತು. ರಸ್ತೆಯುದ್ದಕ್ಕೂ ಯುವಕರು ಜಯಘೋಷ ಮೊಳಗಿಸಿದರು. ಹೊಸ ಓಣಿಯಲ್ಲಿ ಮುಸ್ಲಿಂ ಬಾಂಧವರು ದುರ್ಗಾ ಮಾತಾ ಜ್ಯೋತಿಗೆ
ನೀರುಣಿಸಿ ಭಕ್ತಿ ಸಮರ್ಪಿಸಿದರು. 

ವಿಶ್ವಹಿಂದೂ ಪರಿಷತ್‌ ಮುಖಂಡ ಮಹಾಂತೇಶ ಹೊಸೂರ, ಭಜರಂಗದಳ ಮುಖಂಡ ಅಶೋಕ ಸವದತ್ತಿ, ಬಸವರಾಜ ಈಟಿ, ವಿವೇಕಾನಂದ ಪೂಜೇರ, ಮಡಿವಾಳಪ್ಪ ಹೋಟಿ, ಸೋಮನಾಥ ಸೊಪ್ಪಿಮಠ, ಜಗದೀಶ ಕೋತಂಬ್ರಿ, ವಿಠ್ಠಲ  ಹಂಪಿಹೊಳಿ, ಮಲ್ಲಿಕಾರ್ಜುನ ಏಣಗಿಮಠ, ವಿರೂಪಾಕ್ಷ ವಾಲಿ, ಸುಭಾಸ ತುರಮರಿ, ಅಶೋಕ ಗುಂಡ್ಲೂರ, ಶ್ರೀಶೈಲ ಹಂಪಿಹೊಳಿ, ಮೋಹನ ಕಮ್ಮಾರ, ರಾಜು ಬಡಿಗೇರ, ಬಸವರಾಜ ದೊಡಮನಿ ಸೇರಿದಂತೆ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next