Advertisement

Jharkhand CM ಮುಖ್ಯಮಂತ್ರಿ ಹೇಮಂತ್‌ ಸೊರೇನ್‌ಗೆ ಜಾಮೀನು ಕೊಟ್ಟದ್ದು ಸರಿ ಇದೆ: ಸುಪ್ರೀಂ

12:21 AM Jul 30, 2024 | Team Udayavani |

ಹೊಸದಿಲ್ಲಿ: ಝಾರ್ಖಂಡ್‌ ಮುಖ್ಯಮಂತ್ರಿ ಹೇಮಂತ್‌ ಸೊರೇನ್‌ ಅವರಿಗೆ ಸುಪ್ರೀಂ ಕೋರ್ಟ್‌ ನಲ್ಲಿ ರಿಲೀಫ್ ಸಿಕ್ಕಿದೆ. ಸೊರೇನ್‌ಗೆ ಜಾಮೀನು ನೀಡಿ ಝಾರ್ಖಂಡ್‌ ಹೈಕೋರ್ಟ್‌ ಜೂ.28ರಂದು ನೀಡಿದ ಆದೇಶ ಸಮ ರ್ಪ ಕ ವಾಗಿದ್ದು, ಇದರಲ್ಲಿ ನಾವು ಮಧ್ಯ ಪ್ರವೇಶಿಸಲು ಇಚ್ಛಿಸುವುದಿಲ್ಲ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ. ಈ ಮೂಲಕ ಭೂ ಒತ್ತುವರಿಗೆ ಸಂಬಂಧಿಸಿದ ಹಣ ಕಾಸು ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಸೊರೇನ್‌ಗೆ ಝಾರ್ಖಂಡ್‌ ಹೈಕೋರ್ಟ್‌ ನೀಡಿದ್ದ ಜಾಮೀನು ಪ್ರಶ್ನಿಸಿ ಇ.ಡಿ. ಸಲ್ಲಿಸಿದ್ದ ಅರ್ಜಿಯನ್ನು ಸೋಮವಾರ ಸುಪ್ರೀಂ ಕೋರ್ಟ್‌ ವಜಾ ಮಾಡಿದೆ. ಅಲ್ಲದೆ, ಒಂದು ವೇಳೆ, ನಾವು ಹೆಚ್ಚು ಪರಿಶೀಲಿಸಲು ಹೊರಟರೆ ನಿಮಗೇ (ಇ.ಡಿ.) ಸಮಸ್ಯೆ ಎದುರಾಗಬ ಹುದು ಎಂದು ನ್ಯಾ.ಬಿ.ಆರ್‌.ಗವಾಯಿ ಮತ್ತು ನ್ಯಾ.ಕೆ.ವಿ.ವಿಶ್ವನಾಥನ್‌ ಅವರಿದ್ದ ನ್ಯಾಯಪೀಠ ಹೇಳಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next