Advertisement

ಪಾಕ್‌ ಮಾಜಿ ಪ್ರಧಾನಿ ಇಮ್ರಾನ್‌ಗೆ ಜಾಮೀನು

09:04 PM Apr 28, 2023 | Team Udayavani |

ಇಸ್ಲಾಮಾಬಾದ್‌: ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್‌ಖಾನ್‌ ವಿರುದ್ಧ ದಾಖಲಾಗಿರುವ ವಿವಿಧ ಪ್ರಕರಣಗಳಲ್ಲಿ ಇಸ್ಲಾಮಾಬಾದ್‌ ಹೈಕೋರ್ಟ್‌, ಮೇ3ರವರೆಗೆ ರಕ್ಷಣಾತ್ಮಕ ಜಾಮೀನು ಮಂಜೂರುಗೊಳಿಸಿದೆ. ಪಾಕಿಸ್ತಾನ ಗುಪ್ತಚರ ಸಂಸ್ಥೆ ಐಎಸ್‌ಐ ಸೇರಿದಂತೆ ಸರ್ಕಾರದ ಹಲವು ಸಂಸ್ಥೆಗಳ ಬಗ್ಗೆ ಸುಳ್ಳು ಆರೋಪ, ದ್ವೇಷಭಾಷಣ, ಗಲಭೆ ಉತ್ತೇಜಿಸುವ ಹೇಳಿಕೆ ನೀಡಿರುವುದು ಸೇರಿದಂತೆ ಹಲವು ಆರೋಪಗಳನ್ನು ಖಾನ್‌ ಎದುರಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಪ್ರಕರಣ ಸಂಬಂಧಿಸಿದಂತೆ ಎಫ್ಐಆರ್‌ ಕೂಡ ದಾಖಲಿಸಲಾಗಿತ್ತು. ಈ ಪ್ರಕರಣಗಳಲ್ಲಿ ಖಾನ್‌ ಜಾಮೀನು ಕೋರಿದ್ದರು. ಈ ಹಿನ್ನೆಲೆ ಸರ್ಕಾರ 1 ಲಕ್ಷ ರೂ. ಜಾಮೀನು ಬಾಂಡ್‌ ಪಡೆದು, ಜಾಮೀನು ಮಂಜೂರುಗೊಳಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next