Advertisement

ಬೈಕಂಪಾಡಿ : ಗುಂಡಿಗೆ ಮಣ್ಣು ತುಂಬಿಸಿ ರಾಡಿ ಎಬ್ಬಿಸಿದರು!

11:49 AM Jul 27, 2018 | Team Udayavani |

ಬೈಕಂಪಾಡಿ: ಇಲ್ಲಿಯ ಪಣಂಬೂರು ಪೊಲೀಸ್‌ ಠಾಣೆ, ಬದವಿದೆ ದೇವಸ್ಥಾನ ರಸ್ತೆ ಮೃತ್ಯು ಕೂಪವಾಗಿದ್ದ ರಸ್ತೆ ಇದೀಗ ಮಣ್ಣು ತಂದು ಗುಂಡಿ ಮುಚ್ಚಿದ ಪರಿಣಾಮ ಕೆಸರು ಗದ್ದೆಯಂತಾಗಿ ರಿಕ್ಷಾ, ದ್ವಿಚಕ್ರ ವಾಹನಗಳು ಓಡಾಡದಂತಹ ಸ್ಥಿತಿ ನಿರ್ಮಾಣವಾಗಿದೆ. ಕೈಗಾರಿಕೆ ಪ್ರದೇಶಕ್ಕೂ ತೆರಳಲು ಇದು ಪ್ರಮುಖ ರಸ್ತೆಯಾಗಿದ್ದು, ಕೆಐಎಡಿಬಿ ವ್ಯಾಪ್ತಿಯ ರಸ್ತೆಗೆ ಕಾಂಕ್ರೀಟ್‌ ಹಾಕಿದ್ದಾರೆ ಆದರೆ ಇದನ್ನು ಸಂಪರ್ಕಿಸುವ ಹೆದ್ದಾರಿ ಮತ್ತು ಸರ್ವಿಸ್‌ ರಸ್ತೆಯಲ್ಲಿ ಹೊಂಡಗಳು ಸೃಷ್ಟಿಯಾಗಿತ್ತು. ಬುಧವಾರ ರಾತ್ರಿ ಈ ಹೊಂಡಗಳಿಗೆ ಮಣ್ಣು ತುಂಬಿಸಿದ್ದರಿಂದ ವಾಹನ ಸಂಚಾರಕ್ಕೆ ಕಷ್ಟಕರವಾಗಿದೆ.

Advertisement

ಸಮರ್ಪಕ ತೋಡು
ಇಲ್ಲಿ ಸಣ್ಣ ಹಾಗೂ ದೊಡ್ಡ ಕಾರ್ಖಾನೆಗಳಿದ್ದು ನಿತ್ಯ ಸಾವಿರಾರು ಕಾರ್ಮಿಕರು ಕೆಲಸಕ್ಕೆ ಬರುತ್ತಾರೆ. ದ್ವಿಚಕ್ರ ವಾಹನ, ರಿಕ್ಷಾ ಈ ರಸ್ತೆ ದಾಟದಂತ ಸ್ಥಿತಿ ಉಂಟಾಗಿದೆ. ಘನ ವಾಹನಗಳು ಓಡಾಡುವುದರಿಂದ ರಸ್ತೆ ಮಳೆಗಾಲದಲ್ಲಿ ನಿತ್ಯ ಹದೆಗೆಡುತ್ತದೆ ಎಂಬುದು ಸ್ಥಳೀಯರ ದೂರು. ಮಳೆ ನೀರು ಹರಿಯುವ ಇಲ್ಲಿಯ ತೋಡುಗಳು ಸಮರ್ಪಕವಾಗಿಲ್ಲದೆ ನೀರು ರಸ್ತೆಯಲ್ಲಿಯೇ ಹರಿದು ಹದೆಗೆಡಲು ಕಾರಣವಾಗುತ್ತಿದೆ. ನಿತ್ಯ ಕಾರು, ಬೈಕು ಮತ್ತಿತರ ವಾಹನಗಳು ಈ ಹೊಂಡದಲ್ಲಿ ಸಿಲುಕಿ ಅಪಾಯಗಳಾಗುತ್ತಿದ್ದು ತತ್‌ಕ್ಷಣ ಕ್ರಮಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಶಾಶ್ವತ ಕಾಯಕಲ್ಪ
ಇಲ್ಲಿ ಪ್ರತೀ ವರ್ಷ ರಸ್ತೆ ಹಾಳಾಗುತ್ತಿದೆ. ವಾಹನಗಳು ಈ ಹೊಂಡದಲ್ಲಿ ಓಡಾಡಿದರೆ ದುರಸ್ತಿ ಬರುವುದು ಖಚಿತ. ಇನ್ನು ಇದಕ್ಕೆ ಶಾಶ್ವತ ಕಾಯಕಲ್ಪ ನೀಡಲು ಹೆದ್ದಾರಿ ಇಲಾಖೆ ವಿಫಲವಾಗಿದೆ. ಇನ್ನಾದರೂ ಕ್ರಮಕೈಗೊಳ್ಳಿ.
 - ವಿಶ್ವೇಶ್ವರ ಭಟ್‌ ಬದವಿದೆ, ಉದ್ಯಮಿ

 ಮಳೆ ಕಡಿಯದಾಗ ದುರಸ್ತಿ
ಇಲ್ಲಿ ಘನ ಲಾರಿಗಳ ಓಡಾಟದಿಂದ ರಸ್ತೆ ಹಾಳಾಗಲು ಕಾರಣ. ಇದರ ದುರಸ್ತಿ ಕಾರ್ಯಕ್ಕೆ ಹೆದ್ದಾರಿ ಇಲಾಖೆ ಮುಂದಾಗಿದ್ದು, ಮಳೆ ಕಡಿಮೆಯಾದ ತತ್‌ಕ್ಷಣ ಆರಂಭಿಸಲಾಗುವುದು.
– ಅಜಿತ್‌ ಕುಮಾರ್‌,
ಎಂಜಿನಿಯರ್‌ ಹೆದ್ದಾರಿ ಇಲಾಖೆ 

Advertisement

Udayavani is now on Telegram. Click here to join our channel and stay updated with the latest news.

Next