Advertisement

Bahrain; ಮುತ್ತುಗಳ ದ್ವೀಪದಲ್ಲಿ ಮತ್ತೆ ವಿಜೃಂಭಿಸಲಿರುವ ಕರಾವಳಿಯ ಗಂಡು ಕಲೆ

08:11 PM May 28, 2024 | Team Udayavani |

ಬಹರೇನ್‌: ಯಕ್ಷಗಾನಕ್ಕೂ ಹಾಗು ಬಹರೇನ್‌ ಕನ್ನಡ ಸಂಘಕ್ಕೂ ಸುಮಾರು ನಾಲ್ಕು ಅವಿನಾಭಾವ ಸಂಭಂದವಿದೆ . ಪ್ರಪ್ರಥಮವಾಗಿ ಯಕ್ಷಗಾನವನ್ನು ಸೀಮೋಲಂಘನ ಮಾಡಿಸಿದ ಕೀರ್ತಿಯ ಜೊತೆಗೆ ಸಂಪೂರ್ಣ ಹಿಮ್ಮೇಳ ಮುಮ್ಮೇಳ ವನ್ನು ಹೊಂದಿರುವ ಕೀರ್ತಿ ಕೂಡ ಬಹರೈನ್‌ ದ್ವೀಪ ರಾಷ್ಟ್ರಕ್ಕೆ ಸಲ್ಲುತ್ತದೆ. ಹಾಗಾಗಿ ದ್ವೀಪ ರಾಷ್ಟ್ರದಲ್ಲಿ ಆಗಾಗ್ಗೆ ಅಲ್ಲಲ್ಲಿ ಲಯಬದ್ಧವಾದ ಚೆಂಡೆಯ ಸದ್ದು ಕೇಳಿಸುತ್ತಲೇ ಇರುತ್ತದೆ.

Advertisement

ಇದೀಗ ನೂತನವಾಗಿ ನಿರ್ಮಿಸಿರುವ ಕನ್ನಡ ಭವನವು ಯಕ್ಷೋಪಾಸನ ಯಕ್ಷಗಾನ ಅಧ್ಯಯನ ಕೇಂದ್ರವೊಂದನ್ನು ಹೊಂದಿದ್ದು ಈ ಅಧ್ಯಯನ ಕೇಂದ್ರದಲ್ಲಿ ನೂರಾರು ವಿದ್ಯಾರ್ಥಿಗಳು ನಾಟ್ಯಗುರು ದೀಪಕ್‌ ರಾವ್‌ ಪೇಜಾವರ ಇವರ ನಿರ್ದೇಶನದಲ್ಲಿ ಯಕ್ಷಗಾನ ಅಭ್ಯಾಸ ಮಾಡುತ್ತಿದ್ದಾರೆ . ಕಳೆದ ವರುಷ ಈ ಯಕ್ಷಗಾನ ಕೇಂದ್ರದ ವಿದ್ಯಾರ್ಥಿಗಳು ಯಶಸ್ವಿಯಾಗಿ ಯಕ್ಷಗಾನ ಪ್ರದರ್ಶನವನ್ನು ನೀಡಿ ದ್ವೀಪದ ಯಕ್ಷ ಪ್ರೇಮಿಗಳ ಮನಸೂರೆಗೊಂಡಿದ್ದು ಈ ವರ್ಷ ಮತ್ತೆ “ಅಸಿಕಾ ಪರಿಣಯ -ಜಾಂಬವತಿ ಕಲ್ಯಾಣ ” ಎಂಬ ಯಕ್ಷಗಾನ ಪ್ರದರ್ಶನವನ್ನು ನೀಡಲು ಸಜ್ಜಾಗಿದ್ದು ಈ ಯಕ್ಷಗಾನ ಪ್ರದರ್ಶನ ಮೇ 31 (ಶುಕ್ರವಾರ) ಸಂಜೆ 5. 30ಕ್ಕೆ ಸರಿಯಾಗಿ ಮನಾಮದಲ್ಲಿರುವ ಕನ್ನಡ ಭವನದ ಸಭಾಂಗಣದಲ್ಲಿ ನಡೆಯಲಿದೆ.

ಗುರು ದೀಪಕ್‌ ರಾವ್‌ ಪೇಜಾವರ ಅವರ ನಿರ್ದೇಶನದಲ್ಲಿ ಯಕ್ಷಗಾನ ಪ್ರದರ್ಶನ ಮೂಡಿಬರಲಿದ್ದು, ಅತಿಥಿ ಭಾಗವತರಾಗಿ ಸೌದಿ ಅರೇಬಿಯಾದ ರೋಶನ್‌ ಎಸ್‌. ಕೋಟ್ಯಾನ್‌ , ಹಿಮ್ಮೇಳದಲ್ಲಿ ಮದ್ದಳೆ ವಾದಕರಾಗಿ ಹರೀಶ್‌ ಸಾಲಿಯಾನ್‌ ,ಚೆಂಡೆಯಲ್ಲಿ ಗಣೇಶ್‌ ಕಟೀಲು ,ಚಕ್ರತಾಳದಲ್ಲಿ ಜೀವಿತೇಶ್‌ ಪೂಂಜಾರವರು ಸಹಕರಿಸಲಿದ್ದಾರೆ.

ಮುಮ್ಮೇಳದಲ್ಲಿ ಯಕ್ಷೋಪಾಸನ ಕೇಂದ್ರದ ವಿದ್ಯಾರ್ಥಿಗಳು ತಮ್ಮ ಕಲಾ ಪ್ರೌಢಿಮೆಯನ್ನು ಮೆರೆಯಲಿದ್ದಾರೆ . ಈ ಯಕ್ಷಗಾನ ಪ್ರದರ್ಶನದ ನಿರ್ವಹಣೆಯಲ್ಲಿ ಹಿರಿಯ ಕಲಾವಿದರಾದ ಮೋಹನ್‌ ಎಡನೀರ್‌ರವರು ಸಹಕರಿಸುತ್ತಿದ್ದಾರೆ.

ವೇಷ ಭೂಷಣ ಹಾಗು ಸಮಗ್ರ ನಿರ್ವಹಣೆ ರಾಮ್‌ ಪ್ರಸಾದ್‌ ಅಮ್ಮೆನಡ್ಕ ನೀಡಲಿದ್ದು, ಹಿರಿಯ ಯಕ್ಷಗಾನ ಗುರು ಕೆ ಮೋಹನ ಬೈಪಡಿತ್ತಾಯರನ್ನು ಯಕ್ಷರಂಗಕ್ಕೆ ನೀಡಿರುವ ಅನನ್ಯ ಕೊಡುಗೆಯನ್ನು ಪರಿಗಣಿಸಿ ಸಮ್ಮಾನಿಸಲಾಗುತ್ತಿದೆ.

Advertisement

ಯಕ್ಷಗಾನ ಪ್ರದರ್ಶನದ ನಂತರ ಭೋಜನದ ವ್ಯವಸ್ಥೆ ಮಾಡಲಾಗಿದ್ದು ದ್ವೀಪದ ಯಕ್ಷಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಈ ಯಕ್ಷಗಾನವನ್ನು ಚೆಂದಗಣಿಸಕೊಡಬೇಕೆಂದು ಯಕ್ಷ ಗುರು ದೀಪಕ್‌ ಪೇಜಾವರ ಅವರು ವಿನಂತಿಸಿಕೊಂಡಿದ್ದಾರೆ. ಪ್ರದರ್ಶನದ ಬಗೆಗಿನ ಹೆಚ್ಚಿನ ಮಾಹಿತಿಗಾಗಿ ರಾಮ್‌ ಪ್ರಸಾದ್‌ ಅಮ್ಮೆನಡ್ಕ ರವರನ್ನು ದೂರವಾಣಿ ಸಂಖ್ಯೆ 33946655 ಮೂಲಕ ಸಂಪರ್ಕಿಸಬಹುದಾಗಿದೆ.

ವರದಿ-ಕಮಲಾಕ್ಷ ಅಮೀನ್‌

Advertisement

Udayavani is now on Telegram. Click here to join our channel and stay updated with the latest news.

Next