Advertisement

ಬಹ್ರೈನ್‌ ಬಿಲ್ಲವಾಸ್‌ ಗುರು ಸೇವಾ ಸಮಿತಿಯ ವಾರ್ಷಿಕ ವರ್ಧಂತ್ಯುತ್ಸವ

04:27 PM May 17, 2017 | Team Udayavani |

ಮುಂಬಯಿ: ಬಹ್ರೈನ್‌ ಬಿಲ್ಲವಾಸ್‌ ಇದರ ಗುರು ಸೇವಾ ಸಮಿತಿಯ 15 ನೇ ವಾರ್ಷಿಕ ವರ್ಧಂತ್ಯುತ್ಸವವು ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಮನಾಮದ ಶ್ರೀ ಕೃಷ್ಣ  ದೇವಾಲಯದ ಸಭಾಗೃಹದಲ್ಲಿ ಮೇ 5 ರಂದು ಹಮ್ಮಿಕೊಳ್ಳಲಾಗಿತ್ತು. ಧಾರ್ಮಿಕ ಕಾರ್ಯಕ್ರಮವಾಗಿ ಪ್ರಾರಂಭದಲ್ಲಿ ಸಾಮೂಹಿಕ ಶ್ರೀ  ಸತ್ಯನಾರಾಯಣ ಮಹಾಪೂಜೆ ಹಾಗೂ   ಬಹ್ರೈನ್‌  ಬಿಲ್ಲವಾಸ್‌ ಇದರ ಗುರು ಸೇವಾ ಸಮಿತಿಯ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ನಡೆಯಿತು.

Advertisement

ಶ್ರೀ ಸತ್ಯನಾರಾಯಣ ಕಥಾ ಪಾರಾಯಣ ಮತ್ತು ಪೂಜೆಯ ವಿಧಿ – ವಿಧಾನಗಳನ್ನು ವಿಶೇಷವಾಗಿ ಆಮಂತ್ರಿತರಾದ ಪುರೋಹಿತರಾದ ಗುರುರಾಜ್‌ ಉಡುಪ ನಿಡ್ಡೋಡಿ, ಮಂಗಳೂರು ಹಾಗು ಜಯಪ್ರಕಾಶ ಬೆಂಗ್ರೆಯವರು ನಡೆಸಿ ಕೊಟ್ಟರು. ಅಜಿತ್‌ ಬಂಗೇರ ಅವರ ಅಧ್ಯಕ್ಷತೆ ಯಲ್ಲಿ ನಡೆದ ಈ ಧಾರ್ಮಿಕ, ಸಾಂಸ್ಕೃತಿಕ, ಸಾಮಾಜಿಕ ಕಾರ್ಯಕ್ರಮದ ಯಶಸ್ಸಿಗೆ ಸಂಘದ ಇತರ ಪದಾಧಿಕಾರಿಗಳು, ಸದಸ್ಯರು ಹಾಗೂ ಸಮಿತಿಯ ಆಡಳಿತ ಮಂಡಳಿಯ ಸದಸ್ಯರ ಸಂಪೂರ್ಣವಾಗಿ ಸಹಕರಿಸಿದರು. ಈ ಸಂದರ್ಭ  ಭಜನ ಕಾರ್ಯಕ್ರಮವು ನೆರವೇರಿತು. 

ಪೂಜಾ ಕಾರ್ಯಕ್ರಮದ ಬಳಿಕ 2017-2018 ನೇ ಸಾಲಿನ ನೂತ ಆಡಳಿತ ಮಂಡಳಿ ಸದಸ್ಯರ ಪದಗ್ರಹಣ ಸಮಾರಂಭವು ನಡೆಯಿತು. ಸಮಾರಂಭದಲ್ಲಿ ಸಂಘದ ಮಾಜಿ ಅಧ್ಯಕ್ಷರುಗಳಾದ ರಾಜ್‌ಕುಮಾರ್‌, ರಾಘು ಪೂಜಾರಿ ಮತ್ತು  ಕೃಷ್ಣ ಸುವರ್ಣ, ಹಾಲಿ ಅಧ್ಯಕÏರಾದ ಅಜಿತ್‌  ಬಂಗೇರ ಮತ್ತು ಆಡಳಿತ ಮಂಡಳಿ ಸದಸ್ಯರು,  ಶ್ರೀ  ಕ್ಷೇತ್ರ ಗೆಜ್ಜೆಗಿರಿ ನಂದನ ಬಿತ್ತಿಲ್‌ನಲ್ಲಿ ಈಗಾಗಲೇ ಪ್ರಾರಂಭವಾಗಿರುವ ದೇಯಿ ಬೈದೆತಿ, ಕೋಟಿ-ಚೆನ್ನಯ ಮೂಲಸ್ಥಾನಗಳ ನಿರ್ಮಾಣ ಕಾರ್ಯಕ್ಕೆ  ಕೈ ಜೋಡಿಸಲು ವಿಜ್ಞಾಪನಾ ಪತ್ರವನ್ನು ಬಿಡುಗಡೆ ಮಾಡಿದರು.

ಇಸ್ಕಾನ್‌ ಬಹ್ರೈನ್‌ ನ ದಯಾಲ್‌ ಚಂದ್ರ ಪ್ರಭು ಅವರು ಹರಿ ನಾಮದ  ಪ್ರಾಮುಖ್ಯತೆಯ ಬಗ್ಗೆ ಪ್ರವಚನ ನೀಡಿದರು. ಪೂಜಾ ಕಾರ್ಯಕ್ರಮವು ಮಹಾ ಮಂಗಳಾರತಿ ಮತ್ತು ತೀರ್ಥಪ್ರಸಾದ ವಿತರಣೆಯೊಂದಿಗೆ ಮುಕ್ತಾಯವಾಯಿತು. ಸ್ಥಳೀಯ ವಿವಿಧ ಜಾತೀಯ ಬಾಂಧವರು, ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಉದ್ಯಮಿಗಳು, ವಿವಿಧ ಕ್ಷೇತ್ರಗಳ ಸಾಧಕರು, ಅನ್ಯಭಾಷಿಕ ಭಕ್ತಾದಿಗಳು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ನಂತರ ಮಹಾಪ್ರಸಾದ  ರೂಪದಲ್ಲಿ ಅನ್ನ ಸಂತರ್ಪಣೆ ನಡೆಯಿತು. ವಿವಿಧ ಕಾರ್ಯಕ್ರಮಗಳನ್ನು ಸಾಂಸ್ಕೃತಿಕ ಸಮಿತಿಯ  ಕಾರ್ಯದರ್ಶಿ ಪ್ರದೀಪ್‌ ಸುದೇಕರ್‌ ಹಾಗೂ ಖುಶಿ ಅಶೋಕ್‌ ಇವರು ನಿರೂಪಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next