Advertisement

ಬಾಗಲಕೋಟೆ: ಏಳು ದಿನಗಳಿಂದ “ಸರ್ವರ್‌ ಸಮಸ್ಯೆ’ ಸಂಕಟ

05:28 PM Jun 21, 2024 | Team Udayavani |

ಉದಯವಾಣಿ ಸಮಾಚಾರ
ಗುಳೇದಗುಡ್ಡ: ಕಳೆದ ಏಳು ದಿನಗಳಿಂದ ಕಂದಾಯ ಇಲಾಖೆಯ ನಾಡಕಚೇರಿ ವೆಬ್‌ ಸೈಟ್‌ಗೆ ಸರ್ವರ್‌ ಸಮಸ್ಯೆ ಉಂಟಾಗಿದ್ದು,
ಇದರಿಂದ ಜಾತಿ ಆದಾಯ ಪಡೆಯಲು ಶಾಲಾ ವಿದ್ಯಾರ್ಥಿಗಳು, ಪೋಷಕರು ಪರದಾಡುವಂತಾಗಿದೆ. ಸರಕಾರದ ಯಾವುದೇ ಯೋಜನೆ ಪಡೆಯಲು ಜಾತಿ-ಆದಾಯ ಕಡ್ಡಾಯ. ಆದರೆ ಜಾತಿ ಆದಾಯ ಪಡೆಯಲು ತಹಶೀಲ್ದಾರ್‌ ಕಚೇರಿಗೆ ತೆರಳಿದರೆ ಸರ್ವರ್‌ ಸಮಸ್ಯೆ ಎದುರಾಗಿದೆ. ಇದರಿಂದ ಶಾಲಾ ವಿದ್ಯಾರ್ಥಿಗಳಿಗೆ, ಪೋಷಕರಿಗೆ ದಾರಿ ತೋಚದಂತಾಗಿದೆ.

Advertisement

ಏಕೆ ಸಮಸ್ಯೆ: ನಾಡಕಚೇರಿಯ ವೆಬ್‌ಸೈಟ್‌ ಅಪ್‌ಡೇಟ್‌ ಮಾಡುವ ಕೆಲಸ ನಡೆಯುತ್ತಿದ್ದು, ಹೀಗಾಗಿ ಸಮಸ್ಯೆಯಾಗುತ್ತಿದೆ ಎನ್ನುತ್ತಾರೆ ಅಧಿಕಾರಿಗಳು. ಮೇಲಧಿಕಾರಿಗಳ ಗಮನಕ್ಕೂ ತರಲಾಗಿದೆ. ಸರ್ವರ್‌ ಒಮ್ಮೊಮ್ಮೆ ಬರುತ್ತೆ ಮತ್ತೂಮ್ಮೆ ಹೋಗುತ್ತೇ ಇದೇ ರೀತಿಯಾಗುತ್ತದೆ. ಒಂದೆರಡು ದಿನದಲ್ಲಿ ಎಲ್ಲವೂ ಸರಿಯಾಗುತ್ತದೆ ಎಂಬುದು ಅಧಿಕಾರಿಗಳ ಮಾತು.

ತಹಶೀಲ್ದಾರ್‌ ಕಚೇರಿಯಲ್ಲಿ ಅರ್ಜಿ  ಸಲ್ಲಿಸಲು ಹೋದರೆ ಸರ್ವರ್‌ ಇಲ್ಲ. ಹೊರಗಡೆ ಇರುವ ನೆಟ್‌ ಸೆಂಟರ್‌ಗಳಿಗೆ ತೆರಳಿದರೆ ಅಲ್ಲೂ ಅದೇ ಸಮಸ್ಯೆ ಕಾಡುತ್ತಿದ್ದು, ಇದರಿಂದ ಮಕ್ಕಳಿಗೆ ಸಾಕಷ್ಟು ಸಮಸ್ಯೆಯಾಗಿದೆ.

ಏನೆಲ್ಲ ಸೇವೆಗಳು ಬಂದ್‌?: ಸರ್ವರ್‌ ಸಮಸ್ಯೆಯಾಗುತ್ತಿರುವುದರಿಂದ ತಹಶೀಲ್ದಾರ್‌ ಕಚೇರಿಯಲ್ಲಿ ಸದ್ಯ ಜಾತಿ ಆದಾಯ, ಒಬಿಸಿ, ಕೃಷಿ ಸೇವೆಗಳಾದ ಬೋನೊಪೈಡ್‌ ವ್ಯವಸಾಯಗಾರರ ಪ್ರಮಾಣಪತ್ರ, ಸಣ್ಣ-ಅತಿ ಸಣ್ಣ ಹಿಡುವಳಿದಾರರ ಪ್ರಮಾಣಪತ್ರ,
ಸಾಮಾಜಿಕ ಭದ್ರತಾ ಸೇವೆಗಳು ಈ ಎಲ್ಲ ಸೇವೆಗಳು ನಾಡಕಚೇರಿ ವೆಬ್‌ಸೈಟ್‌ನಲ್ಲಿ ಬರುವುದರಿಂದ ಆ ವೆಬ್‌ಸೈಟ್‌ ಸರ್ವರ್‌
ಸಮಸ್ಯೆ ಎದುರಾಗಿರುವುದರಿಂದ ಜನರು ಪರದಾಡುವಂತಾಗಿದೆ. ಸದ್ಯ ಶಾಲೆಗಳಿಗೆ ಪ್ರವೇಶ ಪಡೆಯಲು ಜಾತಿ ಆದಾಯ ಅತಿ
ಮುಖ್ಯವಾಗಿ ಬೇಕಿದ್ದು, ಅದೇ ಸರ್ವರ್‌ ಇಲ್ಲದಿರುವುದರಿಂದ ಪಾಲಕರಲ್ಲಿ ಆತಂಕ ಹೆಚ್ಚಿದೆ. ತಹಶೀಲ್ದಾರ್‌ ಕಚೇರಿಗೆ, ನೆಟ್‌
ಸೆಂಟರ್‌ಗಳಿಗೆ ಜನರು ಅಲೆದಾಡುವಂತಾಗಿದೆ.

ಸರ್ವರ್‌ ಅಪ್‌ಡೇಟ್‌
ಮಾಡಲಾಗುತ್ತಿದೆ. ಎಲ್ಲ ಕಡೆಗಳಲ್ಲಿ ಸರ್ವರ್‌ ಸಮಸ್ಯೆಯಾಗಿದೆ. ನಡು ನಡುವೆ ಸರ್ವರ್‌ ಬರುತ್ತಿದೆ. ಆದರೆ ನಿರಂತರವಾಗಿ
ಬರುತ್ತಿಲ್ಲ. ಮೇಲಧಿಕಾರಿಗಳ ಗಮನಕ್ಕೂ ತರಲಾಗಿದೆ. ಈ ಸಮಸ್ಯೆ ರಾಜ್ಯದಲ್ಲಿದ್ದು, ಶೀಘ್ರ ಬಗೆಹರಿಯುತ್ತದೆ. ಸರ್ವರ್‌ ಬಂದ್‌
ಕೂಡಲೇ ಯಾವುದೇ ಜಾತಿ ಆದಾಯ ಅರ್ಜಿಗಳ ವಿಲೇವಾರಿ ವಿಳಂಬ ಮಾಡಲ್ಲ.
ಮಂಗಳಾ ಎಂ.,
ತಹಶೀಲ್ದಾರ್‌, ಗುಳೇದಗುಡ್ಡ

Advertisement

*ಮಲ್ಲಿಕಾರ್ಜುನ ಕಲಕೇರಿ

Advertisement

Udayavani is now on Telegram. Click here to join our channel and stay updated with the latest news.

Next