Advertisement

BAFTA Film Awards: ಸೀರೆ ತೊಟ್ಟು ಮಿಂಚಿದ ದೀಪಿಕಾ ಪಡುಕೋಣೆ

12:39 AM Feb 20, 2024 | Team Udayavani |

ಲಂಡನ್‌: ಲಂಡನ್‌ನ ರಾಯಲ್‌ ಫೆಸ್ಟಿವಲ್‌ ಹಾಲ್‌ನಲ್ಲಿ ನಡೆದ ಪ್ರತಿಷ್ಠಿತ ಬ್ರಿಟಿಶ್‌ ಅಕಾಡೆಮಿ ಆಫ್ ಫಿಲ್ಮ್ ಆ್ಯಂಡ್‌ ಟೆಲಿವಿಷನ್‌ ಆರ್ಟ್ಸ್ (ಬಿಎಎಫ್ಟಿಎ) 2024 ಪ್ರಶಸ್ತಿ ಪ್ರದಾನ ಸಮಾರಂಭ ದಲ್ಲಿ ಬಾಲಿವುಡ್‌ ತಾರೆ ದೀಪಿಕಾ ಪಡುಕೋಣೆ ನಿರೂಪಕಿಯಾಗಿ ಪಾಲ್ಗೊಂಡಿದ್ದರು.

Advertisement

ದೀಪಿಕಾ ಪಡುಕೋಣೆ ಅವರು ಈ ಸಮಾರಂಭದಲ್ಲಿ ಭಾಗಿಯಾದ ಏಕೈಕ ಭಾರತೀಯರಾಗಿದ್ದರು. ವಿಶೇಷ ವೆಂದರೆ, ಭಾರತೀಯ ಸಂಸ್ಕೃತಿಯಂತೆ ಚಿನ್ನದ ಬಣ್ಣದ ಸೀರೆ ಧರಿಸಿ ಕಂಗೊಳಿಸುತ್ತಿದ್ದ ಅವರು, ಇಂಗ್ಲಿಷ್‌ಯೇತರ ಸಿನೆಮಾಗಳ ವಿಭಾಗದಲ್ಲಿ ಪ್ರಶಸ್ತಿಯನ್ನು ಘೋಷಿಸಿದರು. ಈ ಸೀರೆಯನ್ನು ಸವ್ಯಸಾಚಿ ಮುಖರ್ಜಿ ವಿನ್ಯಾಸಗೊಳಿಸಿದ್ದಾರೆ.

ಓಪನ್‌ಹೈಮರ್‌ಗೆ 7 ವಿಭಾಗಗಳಲ್ಲಿ ಪ್ರಶಸ್ತಿ
ಪ್ರಮುಖವಾಗಿ ಇಂಗ್ಲಿಷ್‌ ಸಿನೆಮಾಗಳ ಕ್ಯಾಟಗರಿಯಲ್ಲಿ ಖ್ಯಾತ ವಿಜ್ಞಾನಿ ಜೆ. ರಾಬರ್ಟ್‌ ಓಪನ್‌ಹೈಮರ್‌ ಅವರ ಜೀವನ ಚರಿತ್ರೆ ಆಧರಿಸಿದ, ಕ್ರಿಸ್ಟೋಫ‌ರ್‌ ನೋಲನ್‌ ನಿರ್ದೇಶಿಸಿದ “ಓಪನ್‌ಹೈಮರ್‌’ ಸಿನಿಮಾ ಏಳು ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ಬಾಚಿಕೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next