Advertisement

ಸಿಂಗಾಪುರ ಓಪನ್‌: ಸಿಂಧು ಕ್ವಾರ್ಟರ್‌ಗೆ

01:26 AM Apr 14, 2017 | Karthik A |

ಸಿಂಗಾಪುರ: ವಿಶ್ವದ ಎರಡನೇ ರ್‍ಯಾಂಕಿನ ಆಟಗಾರ್ತಿ ಭಾರತದ ಪಿ.ವಿ.ಸಿಂಧು ಮತ್ತು ಬಿ.ಸಾಯಿ ಪ್ರಣೀತ್‌ ಸಿಂಗಾಪುರ ಓಪನ್‌ ಸೂಪರ್‌ ಸೀರೀಸ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದಾರೆ. ಗುರುವಾರ ನಡೆದ ಮಹಿಳೆಯರ ಎರಡನೇ ಸುತ್ತಿನ ಪಂದ್ಯದಲ್ಲಿ ಸಿಂಧು 19-21, 21-17, 21-8 ಗೇಮ್‌ಗಳಿಂದ ಇಂಡೋನೇಶ್ಯದ ಫಿಟ್ರಿಯಾನಿ ಫಿಟ್ರಿಯಾನಿ ವಿರುದ್ಧ ಜಯ ಸಾಧಿಸಿದರು. ವಿಶ್ವದ 27ನೇ ರ್‍ಯಾಂಕಿನ ಫಿಟ್ರಿಯಾನಿ ಮೊದಲ ಗೇಮ್‌ನಲ್ಲಿ ಸಿಂಧುಗೆ ಸೋಲುಣಿಸಿದ್ದರು. ಎರಡನೇ ಗೇಮ್‌ನಲ್ಲಿ ಇಬ್ಬರು ಆಟಗಾರ್ತಿಯರ ನಡುವೆ ತೀವ್ರ ಸ್ಪರ್ಧೆ ಕಂಡುಬಂತು. ಆದರೆ ಅಂತಿಮ ಹಂತದಲ್ಲಿ ಮುನ್ನಡೆ ಪಡೆಯುತ್ತ ಸಾಗಿದ ಸಿಂಧು ಗೇಮ್‌ ವಶಪಡಿಸಿಕೊಂಡರು. ನಿರ್ಣಾಯಕವಾಗಿದ್ದ ಮೂರನೇ ಗೇಮ್‌ನಲ್ಲಿ ಸಿಂಧು ಓಟ ಏಕಮುಖವಾಗಿತ್ತು. ಆರಂಭದಲ್ಲಿಯೇ ಸಿಂಧು 11-4 ರಿಂದ ಮುನ್ನಡೆ ಪಡೆದಿದ್ದರು. ಅಂತಿಮವಾಗಿ ಸಿಂಧು 21-8 ರಿಂದ ಭಾರೀ ಅಂತರದಲ್ಲಿ ಜಯ ಸಾಧಿಸಿ ಕ್ವಾರ್ಟರ್‌ಗೆ ಪ್ರವೇಶಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next