ಭೂಮಿತಾಯಿಯ ನೀರಿನ ದಾಹವನ್ನು ತೀರಿಸಿ ಎಲ್ಲರನ್ನೂ ಕಾಪಾಡಿದಳು. ಅಲ್ಲದೇ ತನ್ನ ತನುವಿನ ಶಾಖದಿಂದ ಕಾಯಿಪಲ್ಲೆ ಸೃಷ್ಟಿಸಿ ಜನರ ಸಂಕಷ್ಟಗಳನ್ನು ನೀಗಿಸಿದಳಂತೆ. ಹೀಗಾಗಿ ಈ ದೇವಿಗೆ ಶಾಕಾಂಬರಿ ಎನ್ನುವ ಹೆಸರು ಬಂತೆಂದು ಹೇಳಲಾಗುತ್ತಿದೆ. ಇವಿಷ್ಟೇ ಅಲ್ಲದೇ ಈ ಪ್ರದೇಶದಲ್ಲಿ ಹರಿದ್ರಾತೀರ್ಥ, ತೈಲತೀರ್ಥ, ಪದ್ಮತೀರ್ಥ, ಕ್ಷಮಾತೀರ್ಥ ಹೀಗೆ ಸಾಕಷ್ಟು ತೀರ್ಥಕೊಳಗಳನ್ನು ಸೃಷ್ಟಿ ಮಾಡಿದಳಂತೆ. ಅಂದಿನಿಂದ ಈ ಪ್ರದೇಶ ನಂದನವನವಾಗಿ ಹಸಿರಿನಿಂದ ಕಂಗೊಳಿಸುತ್ತಿದೆ. ಈ ಊರಿನ ಸುತ್ತ ದಟ್ಟವಾದ ಅರಣ್ಯಪ್ರದೇಶವಿದ್ದು ತೆಂಗು, ಬಾಳೆ ಮತ್ತು ವೀಳೆÂದೆಲೆಯ ತೋಟಗಳಿವೆ ಹಾಗೂ ಹತ್ತಿರದಲ್ಲಿಯೇ ಸರಸ್ವತಿ ಹೊಳೆಯೂ ಹರಿಯುತ್ತಿದೆ. ಈ ಕಾರಣದಿಂದಲೂ ಈ ದೇವಿಗೆ ಬನಶಂಕರಿ, ವನಶಂಕರಿ (ಬನದ ದೇವತೆ) ಎಂಬ ಹೆಸರು ಬಂದಿದೆ ಎನ್ನಲಾಗುತ್ತಿದೆ.
Advertisement
ಸುಂದರವಾದ ಕೋಟೆಯಂತೆ ಕಾಣಿಸುವ ಪ್ರವೇಶ ದ್ವಾರ, ಎದುರುಗಡೆ ಸುಮಾರು 360 ಅಡಿಗಳ ಚೌಕಾಕಾರದ ಕಲ್ಯಾಣಿ ನಮಗೆ ಕಾಣಸಿಗುತ್ತದೆ. ಮಳೆಗಾಲದಲ್ಲಿ ಮಾತ್ರ ತುಂಬಿ ಹರಿಯುವ ಈ ಕಲ್ಯಾಣಿಯನ್ನು ನೋಡಲು ಎರಡು ಕಣ್ಣೂ ಸಾಲದು. ಇನ್ನು ಈ ಕಲ್ಯಾಣಿಯ ಸೊಬಗನ್ನು ನೋಡುತ್ತಾ ಮುಂದೆ ಸಾಗಿದರೆ ನಮಗೆ ಸಿಗುವುದು 7 ನೇ ಶತಮಾನದಲ್ಲಿ ಕಲ್ಯಾಣಿ ಚಾಲುಕ್ಯರ ಅರಸನಾದ 1 ನೇ ಜಗದೇಕಮಲ್ಲನ ಕಾಲದಲ್ಲಿ ನಿರ್ಮಾಣವಾದ ಸುಂದರವಾದ ಬನಶಂಕರಿ ದೇವಾಲಯ. ಕ್ರಿ.ಶ. 603ರಲ್ಲಿ ಬನಶಂಕರಿ ದೇವಿಯ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಗಿದೆ ಎಂಬುದನ್ನು ಇಲ್ಲಿ ಕೆಲವು ಶಾಸನಗಳು ಸಾರುತ್ತವೆ. ದೇವಾಲಯದ ಆವರಣದಲ್ಲಿರುವ ಸ್ತಂಭಗಳ ಮೇಲೆ ಮಾಡಿದ ಕುಸುರಿ ಕೆಲಸ ಚಾಲುಕ್ಯರ ವಾಸ್ತುಶಿಲ್ಪಕ್ಕೆ ಕೈಗನ್ನಡಿಯಾಗಿದೆ. ಈ ದೇವಸ್ಥಾನವನ್ನು 18ನೇ ಶತಮಾನದಲ್ಲಿ ಮರಾಠರ ದಳವಾಯಿಗಳು ಪುನರ್ ನಿರ್ಮಾಣ ಮಾಡಿದರೆಂಬ ಉಲ್ಲೇಖವೂ ಇದೆ. ಇನ್ನು ಗರ್ಭಗುಡಿಯಲ್ಲಿ ಗರ್ಜಿಸುತ್ತಿರುವ ಸಿಂಹದ ಮೇಲೆ ವಿರಾಜಮಾನಳಾಗಿರುವ ಪಾರ್ವತಿಯ ಸುಂದರ ಮೂರ್ತಿಯಿದೆ. ಈ ದೇವಿಗೆ ಶರಣು ಹೋದರೆ ತಮ್ಮೆಲ್ಲ ಅಭಿಷ್ಟೆಗಳೂ ಈಡೇರುತ್ತವೆ ಎಂಬುದೇ ಭಕ್ತರ ನಂಬಿಕೆ. ಪ್ರತಿವರ್ಷ ಪುಷ್ಯ ಮಾಸದಲ್ಲಿ ನಡೆಯುವ ಬನಶಂಕರಿ ಜಾತ್ರೆ ಜಗದ್ವಿಖ್ಯಾತವಾಗಿದೆ. ಬನಶಂಕರಿ ಜಾತ್ರೆಯು ಹುಣ್ಣಿಮೆಯ ಹತ್ತು ದಿನಗಳ ಮುಂಚಿತವಾಗಿ ಪ್ರಾರಂಭವಾಗುತ್ತದೆ. ಈ ಜಾತ್ರೆ ಅನೇಕ ವಿಶೇಷತೆಗಳನ್ನೊಳಗೊಂಡಿದೆ. ಈ ಬನಶಂಕರಿ ಜಾತ್ರೆಗೆ ಸುಮಾರು 200 ವರ್ಷಗಳ ಇತಿಹಾಸವೇ ಇದೆ. ಬರೀ ಕರ್ನಾಟಕ ಮಾತ್ರವಲ್ಲ ನೆರೆಯ ಮಹಾರಾಷ್ಟ್ರದಿಂದಲೂ ಸಾವಿರಾರು ಭಕ್ತ ಸಾಗರವೇ ಈ ದೇವಿಯ ದರ್ಶನಕ್ಕೆ ಹರಿದು ಬರುತ್ತದೆ.
Related Articles
ಬೆಂಗಳೂರಿನಿಂದ 425 ಕಿ.ಮೀ ಅಂತರದಲ್ಲಿರುವ ಬಾದಾಮಿ ತಲುಪಲು ರೈಲು, ಬಸ್ಸುಗಳ ವ್ಯವಸ್ಥೆಯೂ ಇದೆ. ಬಾದಾಮಿಗೆ ಬೆಂಗಳೂರು, ಬಿಜಾಪುರ, ಬಾಗಲಕೋಟೆ, ಹುಬ್ಬಳ್ಳಿ – ಧಾರವಾಡ, ಗದಗ ಮುಂತಾದ ಕಡೆಗಳಿಂದ ಬಸ್ ವ್ಯವಸ್ಥೆ ಇದೆ. ಅಲ್ಲದೇ ಗದಗ – ಸೊಲ್ಲಾಪುರ ರೈಲು ಮಾರ್ಗವೂ ಬಾದಾಮಿಯನ್ನು ಹಾಯ್ದು ಹೋಗುತ್ತದೆ. ಬಾದಾಮಿ ರೈಲು ನಿಲ್ದಾಣದಿಂದ ಕೇವಲ 10 ನಿಮಿಷಗಳಲ್ಲಿ ಬನಶಂಕರಿ ದೇವಸ್ಥಾನವನ್ನು ನಾವು ತಲುಪಬಹುದು. ಇನ್ನು ಇಡೀ ಭಾರತದ ಸಂಸ್ಕೃತಿಗಳ ಮೇಲೆ ತಮ್ಮ ಅಚೊÂàತ್ತಿದ್ದ ಚಾಲುಕ್ಯರ ರಾಜಧಾನಿ ಬಾದಾಮಿ ಸರ್ವಥಾ ಪ್ರೇಕ್ಷಣೀಯ ಮತ್ತು ಸರ್ವಥಾ ಆದರಣೀಯ ಕ್ಷೇತ್ರವಾಗಿದೆ.
Advertisement
ಆಶಾ ಎಸ್. ಕುಲಕರ್ಣಿ