Advertisement
ಕಳೆದ ಒಂದೂವರೆ ತಿಂಗಳಿನಿಂದ ನಗರದ ಹೊರವಲಯದ ನಾಲ್ಕು ವಲಯಗಳಲ್ಲಿ ಸರ್ವೆ ನಡೆಸಿದ ಅಧಿಕಾರಿಗಳು 434 ಪ್ರಕರಣಗಳಲ್ಲಿ ರಾಜಕಾಲುವೆ ಒತ್ತುವರಿಯನ್ನು ಗುರುತಿಸಿ ಪಾಲಿಕೆಗೆ ವರದಿ ಸಲ್ಲಿಸಿದ್ದಾರೆ. ಆದರೆ, ಕಾಲುವೆಯ ನಕ್ಷೆ ಹಾಗೂ ಒತ್ತುವರಿ ಭಾಗವನ್ನು ಗುರುತಿಸದೆ ಸರ್ವೆಯರ್‌ಗಳು ಇಲಾಖೆಗೆ ವಾಪಸಾಗಿರುವುದರಿಂದ ಒತ್ತುವರಿ ತೆರವು ಕಾರ್ಯಾಚರಣೆ ಆರಂಭಿಸಲು ಸಾಧ್ಯವಾಗದಂತಾಗಿದೆ. ಪರಿಣಾಮ ಮಳೆಗಾಲದಲ್ಲಿ ಹಲವು ಪ್ರದೇಶಗಳಲ್ಲಿ ಅನಾಹುತ ಸಂಭವಿಸುವ ಆತಂಕ ಎದುರಾಗಿದೆ.
Related Articles
Advertisement
ಸರ್ವೆಯರ್ ನಿಯೋಜನೆ: ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ ಸ್ಥಗಿತಗೊಳಿಸಿದ ಪಾಲಿಕೆಯ ಕ್ರಮಕ್ಕೆ ತೀವ್ರ ಟೀಕೆಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಮತ್ತೆ ತೆರವು ಕಾರ್ಯ ಆರಂಭಿಸಲು ಪಾಲಿಕೆ ನಿರ್ಧರಿಸಿತ್ತು. ಜತೆಗೆ ಉಪಮುಖ್ಯಮಂತ್ರಿಗಳು ಸಹ ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ ಮುಂದುವರಿಸುವಂತೆ ಸೂಚಿಸದ ಹಿನ್ನೆಲೆಯಲ್ಲಿ ಕಂದಾಯ ಇಲಾಖೆಯ ಭೂ ಮಾಪನ ವಿಭಾಗದಿಂದ ಒತ್ತುವರಿಯನ್ನು ಗುರುತಿಸಲು ಸರ್ವೆಯರ್‌ಗಳನ್ನು ಪಾಲಿಕೆಗೆ ನಿಯೋಜಿಸಲಾಗಿತ್ತು.
405 ಕಡೆ ಮಾತ್ರ ತೆರವು: ಬಿಬಿಎಂಪಿ ವ್ಯಾಪ್ತಿಯ 800 ಕಿ.ಮೀ. ಉದ್ದದ ರಾಜಕಾಲುವೆಯ 1953 ಕಡೆಗಳಲ್ಲಿ ಒತ್ತುವರಿಯಾಗಿದ್ದು, ಇದನ್ನು ನಾಲ್ಕು ವರ್ಷಗಳ ಹಿಂದೆಯೇ ಅಧಿಕಾರಿಗಳು ಸರ್ವೆ ಮೂಲಕ ಗುರುತಿಸಿದ್ದಾರೆ. 2016ರಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ ಆರಂಭಿಸುವ ಮೊದಲೇ ಪಾಲಿಕೆಯ ಅಧಿಕಾರಿಗಳು 820 ಕಡೆಗಳಲ್ಲಿ ತೆರವುಗೊಳಿಸಿದ್ದರು. ಉಳಿದ 1,133 ಪ್ರಕರಣಗಳ ಪೈಕಿ ಕಳೆದ ಎರಡು ವರ್ಷಗಳಲ್ಲಿ ಕೇವಲ 405 ಕಡೆಗಳಲ್ಲಿನ ಒತ್ತುವರಿ ತೆರವುಗೊಳಿಸಿದ್ದು, ಇನ್ನೂ 728 ಕಡೆಗಳಲ್ಲಿ ಒತ್ತುವರಿ ತೆರವು ಬಾಕಿಯಿದೆ.
ಕಂದಾಯ ಇಲಾಖೆಯಿಂದ ಪಾಲಿಕೆಗೆ ಬಂದ ಸರ್ವೆಯರ್‌ಗಳು 434 ಕಡೆಗಳಲ್ಲಿ ಸರ್ವೆ ನಡೆಸಿ ವರದಿಯನ್ನು ನೀಡಿದ್ದಾರೆ. ಆದರೆ, ರಾಜಕಾಲುವೆ ನಕ್ಷೆ ಹಾಗೂ ಒತ್ತುವರಿ ಭಾಗವನ್ನು ಗುರುತು ಮಾಡಿಕೊಟ್ಟಿಲ್ಲ. ಹೀಗಾಗಿ ಒತ್ತುವರಿ ತೆರವು ಕಾರ್ಯಾಚರಣೆ ಆರಂಭಿಸಿಲ್ಲ. ಒತ್ತುವರಿ ಗುರುತು ಮಾಡಿಕೊಡುವಂತೆ ಭೂ ಮಾಪನ ಇಲಾಖೆಯ ಅಧಿಕಾರಿಗಳಿಗೆ ಪತ್ರ ಬರೆದಿದ್ದು, ಅವರು ಗುರುತು ಮಾಡಿಕೊಟ್ಟ ಕೂಡಲೇ ಕಾರ್ಯಾಚರಣೆ ಆರಂಭಿಸಲಾಗುವುದು. -ಬೆಟ್ಟೇಗೌಡ, ಮುಖ್ಯ ಎಂಜಿನಿಯರ್, ಬೃಹತ್ ಮಳೆನೀರು ಕಾಲುವೆ ವಿಭಾಗ ಸರ್ವೆ ಕಾರ್ಯ ನಡೆಸಿದ ಸ್ಥಳಗಳು
* ಮಹದೇವಪುರ ವಲಯ: ಮೇಡಹಳ್ಳಿ, ದೇವಸಂದ್ರ, ಜುನ್ನಸಂದ್ರ, ದೊಡ್ಡಕನ್ನಳ್ಳಿ, ವಿಭೂತಿಪುರ, ಕೊತ್ತನೂರು, ರಾಮಗೊಂಡನಹಳ್ಳಿ, ಹೂಡಿ, ಹಗದೂರು.
* ಬೊಮ್ಮನಹಳ್ಳಿ ವಲಯ: ಬೇಗೂರು, ತುರಹಳ್ಳಿ. ಯಲಹಂಕ ವಲಯ: ಥಣಿಸಂದ್ರ, ಹಾರೋಹಳ್ಳಿ, ವೆಂಕಟಾಲ, ಯಲಹಂಕ ಅಮಾನಿಕೆರೆ, ಯಲಹಂಕ.
* ಆರ್.ಆರ್.ನಗರ ಹಾಗೂ ದಾಸರಹಳ್ಳಿ ವಲಯಗಳು: ದೊಡ್ಡಬಿದರಕಲ್ಲು, ಸಿಡೇದಹಳ್ಳಿ, ಹಾರೋಹಳ್ಳಿ, ಬಾಗಲಗುಂಟೆ, ಕರಿಹೋಬನಹಳ್ಳಿ. * ವೆಂ.ಸುನೀಲ್‌ಕುಮಾರ್