Advertisement
ಕಳೆದ ಫೆಬ್ರವರಿಯಲ್ಲಿ ಚಾಲನೆ ನೀಡಲಾದ ಸೂರ್ಯಘರ್ ಯೋಜನೆಯಡಿ ಕೇಂದ್ರ ಸರಕಾರವು ಗೃಹಬಳಕೆದಾರರಿಗೆ 3 ಕಿ.ವ್ಯಾ. ಸಾಮರ್ಥ್ಯದವರೆಗೆ ಮನೆಯ ತಾರಸಿಯಲ್ಲಿ ಸೌರವಿದ್ಯುತ್ ಫಲಕಗಳನ್ನು ಅಳವಡಿಸಿಕೊಳ್ಳಲು ಕನಿಷ್ಠ 30 ಸಾವಿರದಿಂದ ಗರಿಷ್ಠ 78 ಸಾವಿರ ರೂ.ವರೆಗೆ ಸಬ್ಸಿಡಿ ನೀಡುತ್ತದೆ. ಜತೆಗೆ ಮಾಸಿಕ 300 ಯೂನಿಟ್‌ವರೆಗೆ ಉಚಿತ ವಿದ್ಯುತ್ ನೀಡುತ್ತದೆ. ಆದರೆ ಈಗಾಗಲೇ ಗೃಹಜ್ಯೋತಿ ಯೋಜನೆ ಅಡಿ ಯಾವುದೇ ಹೂಡಿಕೆ ಇಲ್ಲದೆ ರಾಜ್ಯ ಸರಕಾರ 200 ಯೂನಿಟ್‌ವರೆಗೆ ಎಲ್ಲ ವರ್ಗಗಳ ಗೃಹ ಬಳಕೆದಾರರಿಗೂ ಉಚಿತ ವಿದ್ಯುತ್ ಒದಗಿಸುತ್ತಿದೆ. ಹಾಗಾಗಿ, ಕೇಂದ್ರದ ಯೋಜನೆ ಕಡೆಗೆ ತಿರುಗಿಯೂ ನೋಡುತ್ತಿಲ್ಲ.
Related Articles
ಗ್ರಾಹಕರು ಯೋಜನೆ ನೋಂದಣಿಗೆ https://www.pmsuryaghar.gov.in/ ಪೋರ್ಟಲ್‌ನಲ್ಲಿ ಆರ್.ಆರ್. ನಂಬರ್ ಸಹಿತ ನೋಂದಣಿ ಮಾಡಿಕೊಳ್ಳಬೇಕು. ಆಗ ನೂತನ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯದಿಂದ ಗ್ರಾಹಕರ ಮೊಬೈಲ್‌ಗೆ ಒಂದು ನಂಬರ್ ಬರುತ್ತದೆ. ಅದನ್ನು ಗ್ರಾಹಕ ತನ್ನ ಪ್ರಸ್ತುತ ಸ್ಥಾಪಿತ ಸಾಮರ್ಥ್ಯ ಎಷ್ಟು ಎಂಬುದರ ಮಾಹಿತಿ ಒದಗಿಸಬೇಕಾಗುತ್ತದೆ. ಅದನ್ನು ಆಧರಿಸಿ ಸಚಿವಾಲಯವು ಸಂಬಂಧಪಟ್ಟ ಎಸ್ಕಾಂಗೆ ನಿರ್ದೇಶನ ನೀಡುತ್ತದೆ.
Advertisement
ಯಾರಿಗೆ ಎಷ್ಟು ಸಬ್ಸಿಡಿ?ಈ ಯೋಜನೆ ಅಡಿ 1 ಕಿ.ವಾ. ಸಾಮರ್ಥ್ಯದ ಸೌರವಿದ್ಯುತ್ ಉಪಕರಣ ಅಳವಡಿಕೆಗೆ 30 ಸಾವಿರ ರೂ. ಸಬ್ಸಿಡಿ ದೊರೆತರೆ, 2 ಕಿ.ವಾ. ಸಾಮರ್ಥ್ಯಕ್ಕೆ 60 ಸಾವಿರ ಹಾಗೂ 3 ಕಿ.ವಾ. ಸಾಮರ್ಥ್ಯದ ಉಪಕರಣಗಳ ಅಳವಡಿಕೆಗೆ 78 ಸಾವಿರ ರೂ.ವರೆಗೆ ಸಬ್ಸಿಡಿ ದೊರೆಯುತ್ತದೆ. ಅನಂತರದಲ್ಲಿ 1 ಕಿ.ವಾ. ಅಳವಡಿಸಿಕೊಂಡ ಕುಟುಂಬಕ್ಕೆ ಮಾಸಿಕ 0-150 ಯೂನಿಟ್, 2-3 ಕಿ.ವಾ. ಸಾಮರ್ಥ್ಯಕ್ಕೆ 150-300 ಯೂನಿಟ್ ಹಾಗೂ 3 ಕಿ.ವಾ.ಗೆ 300 ಯೂನಿಟ್‌ವರೆಗೆ ಉಚಿತ ವಿದ್ಯುತ್ ನೀಡಲಾಗುತ್ತದೆ. – ವಿಜಯ ಕುಮಾರ ಚಂದರಗಿ