Advertisement
ಸುರತ್ಕಲ್: ಸುರತ್ಕಲ್ ಕಾನ ಬಾಳ ಎಂಆರ್‌ಪಿಎಲ್ ಕಾರ್ಗೊಗೇಟ್ ವರೆಗೆ ಡಿವೈಡರ್ ಮಧ್ಯೆ ಬೀದಿ ದೀಪ ಅಳವಡಿಸುವ ಪ್ರಕ್ರಿಯೆ ಕಳೆದ ಜನವರಿಯಲ್ಲಿ ಆರಂಭಗೊಂಡಿದ್ದರೂ ವಿದ್ಯುತ್ ಸಂಪರ್ಕ ಸಿಗದೆ ಒಂದು ವರ್ಷ ಸಮೀಪಿಸುತ್ತಿದೆ. ಹಾಕಲಾಗಿರುವ ಕಂಬಗಳು ವಾಹನ ಸವಾರರನ್ನು ಅಣಕಿಸುವಂತಿದೆ.
Related Articles
ಬೃಹತ್ ಟ್ಯಾಂಕರ್‌ಗಳ ಓಡಾಟದ ಕೇಂದ್ರವಾಗಿರುವ ಕಾನಾ ಬಾಳ ಪ್ರದೇಶದಲ್ಲಿ ಕತ್ತಲೆ ಪ್ರಯಾಣ ಭೀತಿ ಹುಟ್ಟಿಸುವಂತಿದೆ.ಇಲ್ಲಿನ ನಿತ್ಯ ಸಾವಿರಾರು ಬುಲೆಟ್ ಟ್ಯಾಂಕರ್, ಲಾರಿ ಓಡಾಟ ಹೆಚ್ಚಿರುವುದರಿಂದ ಪ್ರಖರ ಹೆಚ್ಚಿರುವ ಎಲ್‌ಇಡಿ ಲೈಟ್ ಆಳವಡಿಸ ಬೇಕಾದ ಅಗತ್ಯವಿದೆ. ಒಂದು ಹಂತದ ವಿದ್ಯುತ್ ವ್ಯವಸ್ಥೆಗೆ ಅಂದಾಜು 10 ಲಕ್ಷ ರೂ.ಗಳ ವೆಚ್ಚ ಮಾಡಲಾಗಿದೆ. ಕಾನಾ ಬಳಿ ದ್ವಿಪಥ ಕಾಮಗಾರಿ ಶೇ. 90ರಷ್ಟು ಪೂರ್ಣಗೊಂಡಿದೆ. ಎರಡೂ ಕಡೆಗಳಲ್ಲಿ ಚರಂಡಿ ಕಾಮಗಾರಿ, ಕಾನಾ ಬಳಿ ಸ್ವಲ್ಪ ಭಾಗ ಕಾಂಕ್ರೀಟ್ ಕೆಲಸ ಉಳಿದುಕೊಂಡಿದೆ. ಈ ಹಿಂದೆ ಇದ್ದ ಟ್ಯೂಬ್ ಲೈಟ್ ವ್ಯವಸ್ಥೆಯೂ
ನಿರ್ವಹಣೆಯಿಲ್ಲದೆ ಕೆಲವು ಕಡೆಗಳಲ್ಲಿ ಉರಿಯುತ್ತಿಲ್ಲ.
Advertisement
ತುರ್ತಾಗಿ ಬೇಕಾಗಿದೆಲಾರಿ, ಕಂಟೈನರ್‌ಗಳು ಖಾಸಗಿ ಸ್ಥಳ, ಕಾಂಕ್ರೀಟ್ ರಸ್ತೆಯ ಎರಡೂ ಕಡೆಗಳಲ್ಲಿ ಪಾರ್ಕಿಂಗ್ ಮಾಡಲಾಗುತ್ತಿದ್ದು ರಸ್ತೆ ಬದಿ ಸುರಕ್ಷತೆಯ ನಿಟ್ಟಿನಲ್ಲಿ ಹೈ ಮಾಸ್ಟ್ ದೀಪದ ಅಗತ್ಯವಿದೆ ಎಂಬ ಸಾರ್ವಜನಿಕ ಅಭಿಪ್ರಾಯವೂ ಕೇಳಿ ಬಂದಿದೆ. ರಾತ್ರಿ ವೇಳೆ ಅನೈತಿಕ ಚಟುವಟಿಕೆ ಈ ಭಾಗದಲ್ಲಿ ನಡೆಯದಂತೆ ಸೂಕ್ತ ಕ್ರಮ ಜರಗಿಸುವ ಸಲುವಾಗಿಯೂ ಬೀದಿ ದೀಪದ ವ್ಯವಸ್ಥೆಯನ್ನು ತುರ್ತಾಗಿ ಮಾಡಬೇಕಿದೆ. ಪಾಲಿಕೆ ಹಾಗೂ ಬಾಳ ಗ್ರಾಮ ಗ್ರಾಮ ಪಂಚಾಯತ್ ಗಡಿ ವ್ಯಾಪ್ತಿಯೂ ಇಲ್ಲಿ ಇರುವುದರಿಂದ ದ್ವಿಪಥ ರಸ್ತೆಯ ಸೌಲಭ್ಯ ಪಂಚಾಯತ್‌ಗೂ ಸಿಗುವಂತೆ ಲೋಕೋಪಯೋಗಿ ಇಲಾಖೆ ಯಿಂದಲೇ ಮಾಡಿಸಲಾಗಿದೆ. ಬೀದಿದೀಪ ವ್ಯವಸ್ಥೆ ಮಾತ್ರ ಪಾಲಿಕೆ ಹಾಗೂ ಬಾಳ ಪಂಚಾಯತ್‌ನಿಂದ ಆಗಬೇಕಿದೆ.