Advertisement

Big B: ಪುತ್ರಿಗೆ 50.63 ಕೋಟಿ ರೂ.ಗಳ ಬಂಗಲೆ ಗಿಫ್ಟ್ ಕೊಟ್ಟ ಬಚ್ಚನ್‌!

12:03 AM Nov 26, 2023 | Team Udayavani |

ಮುಂಬಯಿ: ಬಾಲಿವುಡ್‌ ಬಿಗ್‌ಬಿ ಅಮಿತಾಭ್‌ ಬಚ್ಚನ್‌ ಅವರು ತಮ್ಮ ಪುತ್ರಿ ಶ್ವೇತಾ ನಂದಾ ಅವರಿಗೆ 50.63 ಕೋಟಿ ರೂ. ಮೌಲ್ಯದ ಐಶಾರಾಮಿ ಬಂಗಲೆಯನ್ನು ಉಡುಗೊರೆಯಾಗಿ ನೀಡಿದ್ದಾರೆ. ಸಬ್‌ ಅರ್ಬನ್‌ ಜುಹುವಿನ ವಿಟ್ಟಲನಗರದಲ್ಲಿರುವ “ಪ್ರತೀಕ್ಷಾ” ಹೆಸರಿನ ಈ ಬಂಗಲೆಯು 50.63 ಕೋಟಿ ರೂ.ಗಿಂತಲೂ ಹೆಚ್ಚಿನ ಮೌಲ್ಯದ್ದಾಗಿದ್ದು, ಇದು ಸ್ವತಃ ಬಿಗ್‌ಬಿ ನಗರದಲ್ಲಿ ಕೊಂಡುಕೊಂಡಿದ್ದ ಮೊದಲ ಆಸ್ತಿಯೂ ಆಗಿತ್ತು.

Advertisement

ಅಲ್ಲದೇ ಇದೇ ನಗರದಲ್ಲಿ ಬಚ್ಚನ್‌ ಕುಟುಂಬ ಹೊಂದಿರುವ 3 ಬಂಗಲೆಗಳ ಪೈಕಿ ಒಂದಾಗಿತ್ತು. ಇದೀಗ ಬಚ್ಚನ್‌ ತಮ್ಮ ಮಗಳಿಗೆ ಇದನ್ನು ಉಡುಗೊರೆಯಾಗಿ ನೀಡಿದ್ದಾರೆ. 890.47 ಚ.ಮೀ. ಹಾಗೂ 674 ಚ.ಮೀ. ವ್ಯಾಪ್ತಿಯ 2 ನಿವೇಶನಗಳಲ್ಲಿ ಬಂಗಲೆ ನಿರ್ಮಾಣಗೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next