Advertisement

Delhi ; ಒಂದೇ ಕುಟುಂಬದ ಮೂವರ ಬರ್ಬರ ಹ*ತ್ಯೆ

09:10 AM Dec 04, 2024 | Team Udayavani |

ನವದೆಹಲಿ: ದಕ್ಷಿಣ ದೆಹಲಿಯ ನೆಬ್ ಸರಾಯ್ ಪ್ರದೇಶದಲ್ಲಿ ಬುಧವಾರ ಬೆಳಗ್ಗೆ ಒಂದೇ ಕುಟುಂಬದ ಮೂವರನ್ನು ಬರ್ಬರವಾಗಿ ಹತ್ಯೆಗೈಯಲಾಗಿದೆ.

Advertisement

ಪತಿ, ಪತ್ನಿ ಮತ್ತು ಮಗಳನ್ನು ಚಾಕುವಿನಿಂದ ಇರಿದು ಹತ್ಯೆಗೈಯಲಾಗಿದೆ. ಹತ್ಯೆಗೀಡಾದವರು ಹರಿಯಾಣ ಮೂಲದ ರಾಜೇಶ್, ಕೋಮಲ ಮತ್ತು ಕವಿತಾ ಎಂದು ತಿಳಿದುಬಂದಿದೆ. ಕುಟುಂಬದ ನಾಲ್ಕನೇ ಸದಸ್ಯ ಪುತ್ರ ಬೆಳಗಿನ ಜಾವ ವಾಕಿಂಗ್‌ಗೆ ಹೋಗಿದ್ದ ವೇಳೆ ಕೃತ್ಯ ಎಸಗಲಾಗಿದೆ ಎಂದು ಹೇಳಲಾಗಿದೆ. ಪೊಲೀಸರು ಸ್ಥಳಕ್ಕೆ ದೌಡಾಯಿಸಿ ತನಿಖೆ ನಡೆಸುತ್ತಿದ್ದಾರೆ.

ಹೆಚ್ಚಿನ ವಿವರಗಳಿಗಾಗಿ ಕಾಯಲಾಗುತ್ತಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next