Advertisement

ಬೆಳ್ಳಿ ಒಡವೆಗಾಗಿ ನೆರೆಮನೆಯ ಮಗುವನ್ನೇ ಕೊಂದು ಬಿಟ್ಟಳು !

09:44 AM Mar 22, 2018 | Team Udayavani |

ಕೊಪ್ಪಳ: ಕೇವಲ ಬೆಳ್ಳಿಯ ಒಡವೆಗಳ ದುರಾಸೆಗಾಗಿ ಮಹಿಳೆಯೊಬ್ಬಳು ನೆರೆ ಮನೆಯ ಒಂದೂವರೆ ವರ್ಷದ ಮಗುವನ್ನು ಅಮಾನುಷವಾಗಿ ಕೊಲೆಗೈದಿರುವ ಘಟನೆ  ಯಲಬುರ್ಗಾ ತಾಲೂಕಿನ ಕುಕನೂರಿನ ಯಡಿಯಾಪುರದಲ್ಲಿ ನಡೆದಿದೆ. 

Advertisement

ಅಂಬವ್ವ ಎನ್ನುವ ಮಹಿಳೆ ಮನೆಯೆದುರು ಆಟವಾಡುತ್ತಿದ್ದ ಒಂದೂವರೆ ವರ್ಷದ ಪ್ರತಿಭಾ ಎನ್ನುವ ಮಗುವನ್ನು ತನ್ನ ಮನೆಗೆ ಕರೆದೊಯ್ದು ಕುತ್ತಿಗೆಗೆ ಉರುಳು ಹಾಕಿ ಕೊಲೆಗೈದು 4 ಸಾವಿರದಷ್ಟು ಬೆಲೆ ಬಾಳುವ ಬೆಳ್ಳಿಯ ಆಭರಣಗಳನ್ನು ತೆಗೆದಿಟ್ಟಿದ್ದಾಳೆ.

ಪ್ರತಿಭಾ ಕಾಣೆಯಾದ ಬಳಿಕ ಪೋಷಕರು ಹುಡುಕಾಟ ನಡೆಸುತ್ತಿದ್ದ ವೇಳೆ ಅಂಬವ್ವ ಅನುಮಾನಾಸ್ಪದವಾಗಿ ವರ್ತಿಸಿದ್ದು ಅನುಮಾನದಲ್ಲಿ  ಮನೆಯಲ್ಲಿ ಪರಿಶೀಲಿಸಿದಾಗ ಪ್ರತಿಭಾ ಶವವಾಗಿ ಪತ್ತೆಯಾಗಿದ್ದಾಳೆ. 

ಕುಕನೂರು ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಂಬವ್ವಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next