ಇಂದೋರ್: ಮಹಿಳೆಯೊಬ್ಬರು ಎರಡು ತಲೆ, ಮೂರು ಕೈಗಳು ಮತ್ತು ಎರಡು ಕಾಲುಗಳಿರುವ ಮಗುವಿಗೆ ಜನ್ಮ ನೀಡಿದ ಘಟನೆ ಮಧ್ಯಪ್ರದೇಶದ ರತ್ಲಾಮ್ ನಲ್ಲಿ ನಡೆದಿದೆ.
ನವಜಾತ ಶಿಶುವನ್ನು ಇಂದೋರ್ ನ ಖಾಸಗಿ ಆಸ್ಪತ್ರೆಗೆ ಕಳುಹಿಸಲಾಗಿದೆ. ಪ್ರಸ್ತುತ ಶಿಶುವೈದ್ಯ ವಿಭಾಗದ ಐಸಿಯುಗೆ ದಾಖಲಿಸಲಾಗಿದ್ದು, ಅಲ್ಲಿ ಶಿಶುವಿಗೆ ಚಿಕಿತ್ಸೆ ನೀಡಲಾಗುತ್ತಿದೆ.
“ಇದು ದಂಪತಿಗೆ ಮೊದಲ ಮಗು, ಮೊದಲು ಸೋನೋಗ್ರಫಿ ವರದಿಯಲ್ಲಿ ಇಬ್ಬರು ಮಕ್ಕಳಿದ್ದಾರೆ ಎಂದು ತಿಳಿದು ಬಂದಿದೆ. ಇದು ಅಪರೂಪದ ಪ್ರಕರಣವಾಗಿದೆ” ಎಂದು ಮಗುವಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯ ಡಾ ಬ್ರಜೇಶ್ ಲಹೋಟಿ ಸುದ್ದಿ ಸಂಸ್ಥೆ ಎಎನ್‌ಐಗೆ ತಿಳಿಸಿದ್ದಾರೆ.
ಇದನ್ನೂ ಓದಿ:ಬುದ್ದಿಜೀವಿಗಳು ದೇಶದ ಬಗ್ಗೆ ಯೋಚನೆ ಮಾಡುವುದಿಲ್ಲ: ಆರಗ ಜ್ಞಾನೇಂದ್ರ
“ಮಗುವಿನ ದೇಹದ ಮೇಲಿನ ಭಾಗವು ಸಾಮಾನ್ಯವಾಗಿದೆ. ಮಗುವಿಗೆ ಎರಡು ಬೆನ್ನುಹುರಿಗಳು ಮತ್ತು ಒಂದು ಹೊಟ್ಟೆ ಇದೆ. ಇದು ತುಂಬಾ ಸಂಕೀರ್ಣವಾದ ಸ್ಥಿತಿಯಾಗಿದೆ. ಮಗುವಿಗೆ ಡೈಸೆಫಾಲಿಕ್ ಪ್ಯಾರಾಪಾಗಸ್ ಎಂಬ ಸ್ಥಿತಿಯನ್ನು ಹೊಂದಿದೆ” ಎಂದು ಅವರು ಹೇಳಿದ್ದಾರೆ.
ಮಗು ಸುಮಾರು 3 ಕೆಜಿ ತೂಕವಿದ್ದು, ಮಗುವಿನ ದೇಹದಲ್ಲಿ ಚಲನೆ ಇದೆ ಎಂದು ವೈದ್ಯರು ತಿಳಿಸಿದ್ದಾರೆ.