Advertisement

ಬಾಬೂಜಿ ದೇಶದ ಧೀಮಂತ ನಾಯಕ

02:30 PM Apr 06, 2017 | Team Udayavani |

ಜಗಳೂರು: ದಲಿತರ ಹಿತಕ್ಕಾಗಿ ಹೋರಾಟ ಮಾಡಿದ ಮಹಾನ್‌ ನಾಯಕರು ಅನುಭವಿಸಿದ ಕಷ್ಟ ಸುಖಗಳನ್ನು ಮತ್ತು ಅವರು ಹೇಳಿದ ಅನುಭವದ ಮಾತುಗಳನ್ನು ನಾವಿಂದು ಮರೆಯುತ್ತಿದ್ದೇವೆ ಎಂದು ಜಿಪಂ ಮಾಜಿ ಸದಸ್ಯ ಕೆ.ಪಿ.ಪಾಲಯ್ಯ ಹೇಳಿದರು. 

Advertisement

ಪಟ್ಟಣದ ಸಮಾಜಕಲ್ಯಾಣ ಇಲಾಖಾ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಮಾಜಿ ಉಪ ಪ್ರಧಾನಿ ಬಾಬು ಜಗಜೀವನರಾಂ ಅವರ 110 ನೇ ಜನ್ಮದಿನಾಚರಣೆ ಅಂಗವಾಗಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು. 

ದಲಿತರು ಹಿರಿಯ ನಾಯಕರ ತತ್ವ ಸಿದ್ಧಾಂತವನ್ನು ಮರೆತ ಇಂದಿನ ದಲಿತರ ಹೋರಾಟಗಾರರು ತಮ್ಮದೇ ದಾಟಿಯಲ್ಲಿ ಹೋರಾಟ ಮಾಡುತ್ತಿರುವುದರಿಂದ ಗುರಿ ತಲುಪುವಲ್ಲಿ ವಿಫಲವಾಗುತ್ತಿದ್ದಾರೆ. ಇದರಿಂದ ಶೋಷಿತ ಸಮಾಜಕ್ಕೆ ಅನ್ಯಾಯವಾಗುತ್ತಿದೆ ಆತಂಕ ವ್ಯಕ್ತಪಡಿಸಿದರು. 

ಮುಖಂಡ ಜಿ.ಎಚ್‌.ಶಂಭುಲಿಂಗಪ್ಪ ಮಾತನಾಡಿ, ಜಗಜೀವನ್‌ರಾಂ ದೇಶದಲ್ಲಿ ಹಸಿರು ಕ್ರಾಂತಿ ಜಾರಿಗೆ ತರುವ ಮೂಲಕ ಕೃಷಿಗೆ ವೈಜ್ಞಾನಿಕ ರೂಪ ಕೊಟ್ಟು ಆರ್ಥಿಕ ಅಭಿವೃದ್ಧಿಗೆ ಶ್ರಮಿಸಿದ ಧಿಧೀಮಂತ ನಾಯಕ. ಆದರೆ ದೇಶದ ಜಾತಿವ್ಯವಸ್ಥೆ ಅವರನ್ನು ಪ್ರಧಾನಿಯಾಗಲು ಬಿಡಲಿಲ್ಲ.

ಜಗಜೀವನ್‌ರಾಂ ಕೇವಲ ಉಪ ಪ್ರಧಾನಿಯಾಗಿ ತೃಪ್ತಿಪಟ್ಟುಕೊಳ್ಳಬೇಕಾಯಿತು ಎಂದು ಬೇಸರ ವ್ಯಕ್ತಪಡಿಸಿದರು. ನಾಗಲಿಂಗಪ್ಪ ಮಾತನಾಡಿ, ತಮ್ಮ ಜೀವಿತಾಧಿವಧಿಗೂ ಕಾಂಗ್ರೆಸ್‌ ಪಕ್ಷದ ನಿಷ್ಟಾವಂತರಾಗಿದ್ದ ಜಗಜೀವನ್‌ ರಾಂ ದಲಿತರೆಂಬ ಕಾರಣಕ್ಕಾಗಿಯೇ ಪ್ರಧಾನಿ ಪಟ್ಟ ಕೈತಪ್ಪಿತು.

Advertisement

ಆದರೂ ದೃತಿಗೇಡದೇ ತಳ ಸಮುದಾಯಗಳ ಅಭಿವೃದ್ಧಿಗೆ ಹಲವು ಕಾರ್ಯಕ್ರಮಗಳನ್ನು ಜಾರಿಗೊಳಿಸಿದರು. ಎಪಿಎಂಸಿ ನಾಮನಿರ್ದೇಶನ ಸದಸ್ಯ ಶಿವಕುಮಾರ್‌, ನಾಯಕ ಸಮಾಜದ ಕಾರ್ಯದರ್ಶಿ ಬಿ.ಲೋಕೇಶ್‌, ಸಮಾಜ ಕಲ್ಯಾಣಾಧಿಕಾರಿ ಎಸ್‌.ಕೆ. ಅಶೋಕ್‌, ವ್ಯವಸ್ಥಾಪಕ ಮಹೇಶ್‌, ದಸಂಸ ಕುಬೇಂದ್ರಪ್ಪ, ಕುಬೇರಪ್ಪ, ಮಲ್ಲಿಕಾರ್ಜುನ, ಮುರಳಾರಾಧ್ಯ, ನಾಗರಾಜ್‌ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next