Advertisement

10ರಂದು ಬಾಬೂಜೀ ಜಯಂತಿ-ಭಿತ್ತಿ ಪತ್ರ ಬಿಡುಗಡೆ

03:09 PM Apr 30, 2022 | Team Udayavani |

ಶಹಾಪುರ: ಕಾಯಕ ಯೋಗಿ ಶಿವಶರಣ ಮಾದಾರ ಚನ್ನಯ್ಯನವರ ಮತ್ತು ಡಾ| ಬಾಬು ಜಗಜೀವನರಾಂ ಅವರ 115ನೇ ಜಯಂತ್ಯುತ್ಸವ ಸಮಿತಿ ಆಶ್ರಯದಲ್ಲಿ ನಗರದಲ್ಲಿ ಮೇ 10ರಂದು ಬೃಹತ್‌ ಸಮಾರಂಭ ಆಯೋಸಿದ್ದು, ಕುಂಭ ಹೊತ್ತ ಸಾವಿರ ಮಹಿಳೆಯರು ಸೇರಿದಂತೆ ಅಂದಾಜು 5 ಸಾವಿರ ಜನ ಸೇರುವ ನಿರೀಕ್ಷೆ ಇದೆ ಎಂದು ಸಮಿತಿ ಅಧ್ಯಕ್ಷ ರುದ್ರಪ್ಪ ಹುಲಿಮನಿ ತಿಳಿಸಿದರು.

Advertisement

ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಪೂರ್ವಭಾವಿ ಸಭೆ ಹಾಗೂ ಭಿತ್ತಿಪತ್ರ ಬಿಡುಗಡೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ತಾಲೂಕಿನಾದ್ಯಂತ ಈ ಸಮಾರಂಭ ಕುರಿತು ಈಗಾಗಲೇ ಜಾಗೃತಿ ಮೂಡಿಸಲಾಗುತ್ತಿದ್ದು, ಸಮಾರಂಭ ಯಶಸ್ವಿಗಾಗಿ ನೂರಾರು ಯುವಕರು ಮತ್ತು ಪ್ರಮುಖರು ಶ್ರಮಿಸುತ್ತಿದ್ದಾರೆ. ಸಮಾರಂಭ ಅರ್ಥಪೂರ್ಣವಾಗಿ ಆಚರಿಸಲು ತನು, ಮನ ಮತ್ತ ಧನದಿಂದ ಎಲ್ಲರೂ ಕಂಕಣ ಬದ್ಧರಾಗಿ ನಿಂತಿದ್ದು, ಸಮಾಜದ ಬಂಧುಗಳೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಅಂದು ಆಗಮಿಸಿ ಕಾರ್ಯಕ್ರಮಕ್ಕೆ ಶೋಭೆ ತರಬೇಕಾಗಿ ವಿನಂತಿಕೊಂಡರು. ಅಲ್ಲದೇ ಅಂದಿನ ಕಾರ್ಯಕ್ರಮವನ್ನು ಕೇಂದ್ರ ಸಾಮಾಜಿಕ ನ್ಯಾಯ ಸಬಲೀಕರಣ ರಾಜ್ಯ ಸಚಿವ ಎ. ನಾರಾಯಣ ಸ್ವಾಮಿ ಉದ್ಘಾಟಿಸಲಿದ್ದಾರೆ. ಮಾಜಿ ಸಚಿವ ಎಚ್‌. ಆಂಜನೇಯ ಅವರು ಸೇರಿದಂತೆ ಸ್ಥಳೀಯ ಶಾಸಕರಾದ ಶರಣಬಸಪ್ಪಗೌಡ ದರ್ಶನಾಪುರ, ಸುರಪುರ ಶಾಸಕ ರಾಜೂಗೌಡ, ಯಾದಗಿರಿ ಶಾಸಕ ವೆಂಕಟರಡ್ಡಿ ಮುದ್ನಾಳ ಮತ್ತು ಮಾಜಿ ಶಾಸಕ ಗುರು ಪಾಟೀಲ್‌ ಶಿರವಾಳ, ಎಂಎಲ್ಸಿ ಆರ್‌.ಬಿ. ತಿಮ್ಮಾಪುರ, ದಂಡೋರದ ಎಂ. ಶಂಕ್ರಪ್ಪ ಸೇರಿದಂತೆ ಗಣ್ಯರು, ಸಮಾಜದ ಪ್ರಮುಖರು ಭಾಗವಹಿಸಲಿದ್ದು, ಚಿಗರಳ್ಳಿ ದೇವರಮಠದ ಸಿದ್ಧಬಸವ ಕಬೀರಾನಂದ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಲಿದ್ದಾರೆ ಎಂದು ತಿಳಿಸಿದರು.

ಅಂದು ಮಧ್ಯಾಹ್ನ 12ಕ್ಕೆ ನಗರದ ಡಾ| ಬಾಬು ಜಗಜೀವನರಾಮ್‌ ವೃತ್ತದಿಂದ ಬೃಹತ್‌ ಮೆರವಣಿಗೆ ಆರಂಭಗೊಳ್ಳಲಿದೆ. ಹೆಚ್ಚಿನ ಸಂಖ್ಯೆಯಲ್ಲಿ ಸಮಾಜದ ಜನತೆ ಸೇರಲಿದ್ದಾರೆ ಎಂದರು.

ಇದೇ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಸಚಿವ ಎ. ನಾರಾಯಣ ಸ್ವಾಮಿ ಅವರಿಗೆ ಮಾದಿಗ ದಂಡೋರಾ ಸಮಿತಿಯಿಂದ ವರ್ಗೀಕರಣ ಮೀಸಲಾತಿ ನ್ಯಾ| ಸದಾಶಿವ ಆಯೋಗದ ವರದಿ ಜಾರಿಗಾಗಿ ಮನವಿ ಸಲ್ಲಿಸಲಾಗುವುದು ಎಂದರು.

Advertisement

ಸಮಿತಿ ಗೌರವಾಧ್ಯಕ್ಷ ಶಾಂತಪ್ಪ ಕಟ್ಟಿಮನಿ, ಕಾರ್ಯಾಧ್ಯಕ್ಷ ಶಿವಕುಮಾರ ದೊಡ್ಡಮನಿ ಸೇರಿದಂತೆ ಪ್ರಮುಖರಾದ ಗೌಡಪ್ಪಗೌಡ, ಮರೆಪ್ಪ ಕಟ್ಟಿಮನಿ, ಲಕ್ಷ್ಮಣ ಶೆಟ್ಟಿಗೇರಾ, ಬಸವರಾಜ ನಾಯ್ಕಲ್‌, ಹಿರೇಗಪ್ಪ ಹೋತಪೇಟ, ಭೀಮರಾಯ ಕಾಂಗ್ರೆಸ್‌, ವಾಸುದೇವ ಕಟ್ಟಿಮನಿ, ರವಿಚಂದ್ರ ಎದುರಮನಿ, ಮಲ್ಲಿಕಾರ್ಜುನ ಕಟ್ಟಿಮನಿ, ವಿಜಯಕುಮಾರ ಎದುರಮನಿ, ಅಯ್ಯಣ್ಣ ಕದರಾಪುರ ಸೇರಿದಂತೆ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next