ಲಾಹೋರ್: ತವರಿನಲ್ಲಿ ಸತತ ಸರಣಿ ಸೋತು ನಾಯಕತ್ವದ ಬಗ್ಗೆ ಟೀಕೆ ಎದುರಿಸುತ್ತಿರುವ ಪಾಕಿಸ್ಥಾನದ ನಾಯಕ ಬಾಬರ್ ಅಜಂ ವಿರುದ್ಧದ ಇದೀಗ ಗಂಭೀರ ಆರೋಪವೊಂದು ಕೇಳಿಬಂದಿದೆ. ಸೋಮವಾರ ಬೆಳಗ್ಗೆ ಬಾಬರ್ ಅಜಂಗೆ ಸಂಬಂಧಿಸಿದಂತೆ ವಿಡಿಯೋವೊಂದು ವೈರಲ್ ಆಗಿದ್ದು, ಅದರಲ್ಲಿ ಆತನ ಸಹ ಆಟಗಾರನ ಪತ್ನಿಯ ಜೊತೆ ಅಶ್ಲೀಲ ಸಂಭಾಷಣೆ ಮಾಡುವ ದೃಶ್ಯಗಳು ಇದರಲ್ಲಿದೆ.
“ಪಾಕಿಸ್ತಾನದ ಮತ್ತೊಬ್ಬ ಕ್ರಿಕೆಟಿಗನ ಗೆಳತಿಯೊಂದಿಗೆ ಬಾಬರ್ ಅಜಮ್ ಮೆಸೇಜ್ ಮಾಡಿದ್ದಾರೆ. ಆಕೆ ಸೆಕ್ಸ್ಟಿಂಗ್ ಮಾಡುವುದನ್ನು ಮುಂದುವರಿಸಿದರೆ ಆಕೆಯ ಗೆಳೆಯ (ಪಾಕಿಸ್ಥಾನಿ ಆಟಗಾರ) ತಂಡದಿಂದ ಹೊರಗುಳಿಯುವುದಿಲ್ಲ ಎಂದು ಭರವಸೆ ನೀಡುತ್ತೇನೆ” ಎಂದು ಡಾ. ನಿಮೋ ಯಾದವ್ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ:ಸೇವ್ ಮಹದಾಯಿ….; ಗೋವಾ ವಿಧಾನಸಭೆಯಲ್ಲಿ ಪ್ರತಿಪಕ್ಷಗಳಿಂದ ಕೋಲಾಹಲ
ಆದಾಗ್ಯೂ ಚಿತ್ರಗಳು ಮತ್ತು ರೆಕಾರ್ಡಿಂಗ್ ಗಳನ್ನು ಮಾರ್ಫ್ ಮಾಡಲಾಗಿದೆ, ಬಾಬಾರ್ ಅಜಂ ಅವರ ಇಮೇಜ್ ಗೆ ಮಸಿ ಬಳಿಯಲು ಈ ಕೆಲಸಗಳನ್ನು ಮಾಡಲಾಗಿದೆ ಎಂದು ಬಾಬರ್ ಅಭಿಮಾನಿಗಳು ಹೇಳುತ್ತಿದ್ದಾರೆ.
ಈ ಹಿಂದೆಯೂ ಬಾಬರ್ ಆಜಂ ಹೆಸರು ಇಂತಹ ಘಟನೆಯಲ್ಲಿ ಕೇಳಿಬಂದಿತ್ತು. ಹಮೀಜಾ ಮುಕ್ತಾರ್ ಎಂಬ ಹುಡುಗಿ ಬಾಬರ್ ಮೇಲೆ ಲೈಂಗಿಕ ದೌರ್ಜನ್ಯ, ಕಿರುಕುಳ, ಬ್ಲ್ಯಾಕ್ ಮೇಲ್ ಇತ್ಯಾದಿ ಆರೋಪಿಸಿದ್ದಳು. ಆದರೆ, ಮುಕ್ತಾರ್ ನಂತರ ಎಲ್ಲಾ ಆರೋಪಗಳನ್ನು ಹಿಂತೆಗೆದುಕೊಂಡಿದ್ದರು.