Advertisement

ಹಾಶೀಂ ಆಮ್ಲಾ, ಶಿಖರ್ ಧವನ್ ದಾಖಲೆ ಮುರಿದ ಪಾಕ್ ನಾಯಕ ಬಾಬರ್ ಅಜಂ

02:29 PM May 08, 2023 | Team Udayavani |

ಕರಾಚಿ: ಪಾಕಿಸ್ಥಾನ ತಂಡವು ನ್ಯೂಜಿಲ್ಯಾಂಡ್ ವಿರುದ್ಧದ ಏಕದಿನ ಸರಣಿಯನ್ನು ಗೆದ್ದು ಬೀಗಿದೆ. ಕೊನೆಯ ಪಂದ್ಯದಲ್ಲಿ ಸೋತರೂ 4-1 ಅಂತರದಿಂದ ಪಾಕ್ ತಂಡವು ಸರಣಿ ವಶಪಡಿಸಿಕೊಂಡಿದೆ.

Advertisement

ಈ ಪಂದ್ಯದ ವೇಳೆ ಪಾಕಿಸ್ಥಾನದ ನಾಯಕ ಬಾಬರ್ ಅಜಂ ಹೊಸ ದಾಖಲೆಯೊಂದನ್ನು ಬರೆದಿದ್ದಾರೆ. ರವಿವಾರ ನೂರನೇ ಏಕದಿನ ಪಂದ್ಯವಾಡಿದ ಬಾಬರ್ ಮೊದಲ ನೂರು ಪಂದ್ಯದಲ್ಲಿ ಅತೀ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದ್ದಾರೆ.

ರವಿವಾರದ ಪಂದ್ಯದಲ್ಲಿ ಬಾಬರ್ ಕೇವಲ ಒಂದು ರನ್ ಗೆ ಔಟಾದರು. ಒಟ್ಟು ನೂರು ಏಕದಿನ ಪಂದ್ಯದಲ್ಲಿ ಬಾಬರ್ 5089 ರನ್ ಗಳಿಸಿದ್ದಾರೆ. ನೂರು ಪಂದ್ಯದಲ್ಲಿ ಐದು ಸಾವಿರಕ್ಕೂ ಹೆಚ್ಚು ರನ್ ಗಳಿಸಿದ ಏಕೈಕ ಆಟಗಾರ ಬಾಬರ್.

100 ಏಕದಿನ ಪಂದ್ಯಗಳ ನಂತರ ಗಳಿಸಿದ ರನ್‌ ಗಳ ವಿಷಯದಲ್ಲಿ ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿ ಬಾಬರ್‌ನ ದಾಖಲೆಗಿಂತ ಬಹಳ ಹಿಂದಿದ್ದಾರೆ. ಕೊಹ್ಲಿ 100 ಪಂದ್ಯಗಳ ನಂತರ 48.89 ಸರಾಸರಿಯಲ್ಲಿ 4,107 ರನ್ ಗಳಿಸಿದ್ದರು.

ಒಟ್ಟಾರೆಯಾಗಿ ಕೊಹ್ಲಿ ಈಗ 274 ಏಕದಿನ ಪಂದ್ಯಗಳಲ್ಲಿ 57.32 ಸರಾಸರಿಯಲ್ಲಿ 46 ಶತಕಗಳು ಮತ್ತು 65 ಅರ್ಧಶತಕಗಳೊಂದಿಗೆ 12,898 ರನ್ ಗಳಿಸಿದ್ದಾರೆ. ಬಾಬರ್ 100 ಏಕದಿನ ಪಂದ್ಯಗಳಲ್ಲಿ 18 ಶತಕ ಮತ್ತು 26 ಅರ್ಧಶತಕಗಳೊಂದಿಗೆ 5,089 ರನ್ ಗಳಿಸಿದ್ದಾರೆ.

Advertisement

100 ಪಂದ್ಯಗಳ ನಂತರ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್‌ಗಳ ಪಟ್ಟಿ ಇಲ್ಲಿದೆ…

  1. ಬಾಬರ್ ಆಜಮ್ – 5,089 ರನ್
  2. ಹಾಶಿಮ್ ಆಮ್ಲ – 4,808 ರನ್
  3. ಶಿಖರ್ ಧವನ್ – 4,309 ರನ್
  4. ಡೇವಿಡ್ ವಾರ್ನರ್ – 4,217 ರನ್
  5. ಶಾಯ್ ಹೋಪ್ – 4,193 ರನ್
  6. ಗಾರ್ಡನ್ ಗ್ರೀನಿಡ್ಜ್ – 4,177 ರನ್
Advertisement

Udayavani is now on Telegram. Click here to join our channel and stay updated with the latest news.

Next