Advertisement

ಬಾಬಾ ಸಾಹೇಬ ಜ್ಞಾನದ ಸಂಕೇತ

11:21 AM Dec 07, 2021 | Team Udayavani |

ಚಿತ್ತಾಪುರ: ಡಾ| ಬಿ.ಆರ್‌. ಅಂಬೇಡ್ಕರ್‌ ಕಡು ಬಡತನ ಹಾಗೂ ಜಾತಿ ಸಂಕೋಲೆಯ ಸಂಕಷ್ಟದ ಸಮಯ ದಲ್ಲೂ ಅತ್ಯುನ್ನತ ವಿದ್ಯಾಭ್ಯಾಸ ಮಾಡಿದ್ದಲ್ಲದೇ ದೇಶದ ಸಂವಿಧಾನ ರಚಿಸಿ, ಜ್ಞಾನದ ಸಂಕೇತವಾಗಿದ್ದಾರೆ ಎಂದು ತಹಶೀಲ್ದಾರ್‌ ಉಮಾಕಾಂತ ಹಳ್ಳೆ ಹೇಳಿದರು.

Advertisement

ಪಟ್ಟಣದ ಅಂಬೇಡ್ಕರ ವೃತ್ತದಲ್ಲಿ ದಲಿತ ಸಮಾಜದ ವತಿಯಿಂದ ಹಮ್ಮಿಕೊಂಡಿದ್ದ ಸಂವಿಂಧಾನ ಶಿಲ್ಪಿ ಡಾ| ಬಿ.ಆರ್‌. ಅಂಬೇಡ್ಕರ್‌ ಮಹಾ ಪರಿನಿರ್ವಾಣ ದಿನಾಚರಣೆ ಕಾರ್ಯಕ್ರಮದಲ್ಲಿ ಬಾಬಾ ಸಾಹೇಬರ ಪುತ್ಥಳಿಗೆ ಪೂಜೆ ಸಲ್ಲಿಸಿ, ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

ಬಾಬಾ ಸಾಹೇಬರ ಕನಸಿನಂತೆ ಪ್ರತಿಯೊಬ್ಬರು ಶಿಕ್ಷಣ ಪಡೆದು, ಉನ್ನತ ಸ್ಥಾನ ಹೊಂದಬೇಕು ಎಂದರು. ಪುರಸಭೆ ಅಧ್ಯಕ್ಷ ಚಂದ್ರಶೇಖರ ಕಾಶಿ, ಸದಸ್ಯ ಮಲ್ಲಿಕಾರ್ಜುನ ಕಾಳಗಿ, ತಾಲೂಕು ಅಧಿಕಾರಿಗಳಾದ ಶ್ರೀಧರ, ಅಣ್ಣೆಪ್ಪ ಕುದರಿ, ನೀಲಗಂಗಾ ಬಬಲಾದ, ಸಿದ್ಧವೀರಯ್ಯ ರುದ್ನೂರ್‌, ಗಂಗಾಧರ, ರಾಜಕುಮಾರ ರಾಠೊಡ, ಸಿದ್ಧಣ್ಣ ಅಣಬಿ, ಸಂಜೀವ ಮಾನಕರ್‌, ಸವಿತಾ ಸಮಾಜದ ಮುಖಂಡರಾದ ಶಿವಕಾಂತ ಬೆಣ್ಣೂರಕರ್‌, ಆನಂದ ಕಲ್ಲಕ್‌, ಮಲ್ಲಿಕಾರ್ಜುನ ಬೊಮ್ಮನಳ್ಳಿಕರ್‌, ಮಹೇಶ ಜಾಯಿ, ಭೀಮಣ್ಣ ಹೋತಿನಮಡಿ, ದೇವಿಂದ್ರ ಕುಮುಸಿ, ನಾಗೇಂದ್ರ ಬುರ್ಲಿ, ಜಗದೀಶ ಸಾಗರ ಇನ್ನಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next