Advertisement

ಬಾಹುಬಲಿ-2 ಹಿಂದಿ ಆವೃತ್ತಿ ಮೊದಲ ದಿನವೇ ನೂರು ಕೋಟಿ ಗಳಿಕೆ ?

03:14 PM Apr 28, 2017 | Team Udayavani |

ಮುಂಬಯಿ : ಎಸ್‌ ಎಸ್‌ ರಾಜಮೌಳಿ ಅವರ ಬಹು ನಿರೀಕ್ಷೆಯ ರೋಮಾಂಚಕ ಬಾಹುಬಲಿ 2 ಚಿತ್ರವು ಹಿಂದಿ, ಮಲಯಾಳಂ, ತಮಿಳು ಹಾಗೂ ತೆಲುಗು ಭಾಷೆಗಳಲ್ಲಿ  ವಿಶ್ವಾದ್ಯಂತ ಏಕ ಕಾಲಕ್ಕೆ ತೆರೆ ಕಂಡಿದ್ದು ಕೇವಲ ಹಿಂದಿ ಆವೃತ್ತಿಯೇ ಬಿಡುಗಡೆಗೊಂಡ ಮೊದಲ ದಿನ 100 ಕೋಟಿ ರೂ. ಬಾಚಿಕೊಳ್ಳುವ ಅತ್ಯಪೂರ್ವ ಸಾಧನೆಯನ್ನು ಮಾಡೀತೇ ಎಂಬುದನ್ನು ಇದೀಗ ಕಾದು ನೋಡಲಾಗುತ್ತಿದೆ. 

Advertisement

ದೇಶಾದ್ಯಂತ ಚಿತ್ರಮಂದಿರಗಳಲ್ಲಿ ತೆರೆಕಂಡಿರುವ ಬಾಹುಬಲಿ 2 ಚಿತ್ರದ ಬಾಕ್ಸ್‌ ಆಫೀಸ್‌ ಸಂಪಾದನೆ ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಹೊಸ ದಾಖಲೆಯನ್ನು ಬರೆಯಬಹುದು ಎಂದು ವಿಶ್ಲೇಷಕರು ಈಗಲೇ ಅಂದಾಜಿಸಿದ್ದಾರೆ. 

ಅತ್ಯಂತ ರಹಸ್ಯದ “ಕಟ್ಟಪ್ಪಾ ನೇ ಬಾಹುಬಲಿಕೋ ಕ್ಯೋ ಮಾರಾ?’ ಎಂಬ ಪ್ರಶ್ನೆಗೆ ಉತ್ತರವನ್ನು ಪಡೆಯಲು ಕಾತರದಿಂದಿರುವ ಬಾಹುಬಲಿ ಚಿತ್ರ ಪ್ರೇಮಿಗಳಿಗೆ ಈಗ ಉತ್ತರ ಸಿಕ್ಕಿದೆಯಾದರೂ ಅದು ಹುಟ್ಟಿಸಿರುವ ತಳಮಳ, ನಿಗೂಢತೆ, ರೋಚಕತೆ ಮತ್ತು ರೋಮಾಂಚಕತೆ ಅನನ್ಯವಾಗಿದೆ ಎನ್ನಲೇಬೇಕು.

ಬಾಹುಬಲಿ 2ರಲ್ಲಿ ಪ್ರಭಾಸ್‌ ಮತ್ತು ರಾಣಾ ದಗ್ಗುಬತಿ ಅವರ ಅಭಿನಯವು ಅತ್ಯಮೋಘವಾಗಿ ಮೂಡಿ ಬಂದಿದೆ ಎಂದು ವೀಕ್ಷಕರು ಹೇಳುತ್ತಾರೆ. 

Advertisement

Udayavani is now on Telegram. Click here to join our channel and stay updated with the latest news.

Next