ಬೀದರ್ : ಜಾತಿ ರಾಜಕಾರಣದ ಮೂಲಕ ಮತದಾರರ ಕಣ್ಣಿಗೆ ಮಣ್ಣೆರಚುತ್ತಿದ್ದ ಪಕ್ಷಗಳಿಗೆ ಶಿರಾ ಮತ್ತು ಆರ್‌ಆರ್ ನಗರ ಉಪ ಚುನಾವಣೆ ಫಲಿತಾಂಶದಿಂದ ತಕ್ಕ ಉತ್ತರ ಸಿಕ್ಕಿದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರ ಹೇಳಿದರು.
ಬಸವಕಲ್ಯಾಣದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಕಾರ್ಯಕರ್ತರ ಶಕ್ತಿ ಮೇಲೆ ನಡೆಯುವಂಥ ಪಕ್ಷವೇ ಹೊರತು ವ್ಯಕ್ತಿ ಆಧಾರಿತವಲ್ಲ. ದೆಹಲಿ ನಾಯಕರ ಆಶೀರ್ವಾದಿಂದ ನಮ್ಮ ಪಾರ್ಟಿ ಮುನ್ನಡೆಯಲ್ಲ. ಬಿಜೆಪಿ ಅಭ್ಯರ್ಥಿಗಳ ಗೆಲುವಿಗೆ ನಾನೊಬ್ಬನೇ ಕಾರಣನಲ್ಲ, ಪಕ್ಷದ ಎಲ್ಲರ ಪರಿಶ್ರಮವೂ ಸೇರಿದೆ ಎಂದು ತಿಳಿಸಿದರು.
ಬಸವಕಲ್ಯಾಣ ಮತ್ತು ಮಸ್ಕಿ ಉಪ ಚುನಾವಣೆಯೂ ಬಿಜೆಪಿಗೆ ದೊಡ್ಡ ಸವಾಲಾಗಿದ್ದು, ಪಕ್ಷ ಗಂಭೀರವಾಗಿ ತೆಗೆದುಕೊಂಡಿದೆ.
ಇದನ್ನೂ ಓದಿ :11 ಮತಗಳ ಅಂತರದಿಂದ ಅರಿಜೊನಾ ಗೆದ್ದ ಬೈಡೆನ್: ಕೊನೆಗೂ ಅಭಿನಂದನೆ ಸಲ್ಲಿಸಿದ ಚೀನಾ
ರಾಜ್ಯಾಧ್ಯಕ್ಷರು ಕೊಡುವ ಗುರಿ, ಕೆಲಸವನ್ನು ಉಪಾಧ್ಯಕ್ಷನಾಗಿ ಮಾಡುತ್ತೇನೆ. ಬಸವಕಲ್ಯಾಣ ಚುನಾವಣೆಯಲ್ಲಿ ತಾವು ಸ್ಪರ್ಧಿಸುತ್ತಿಲ್ಲ ಎಂದು ಮತ್ತೊಮ್ಮೆ ಸ್ಪಷ್ಟಪಡಿಸಿದ ವಿಜಯೇಂದ್ರ, ಗೆಲ್ಲುವ ಕುದರೆಯನ್ನೇ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಲಾಗುವುದು. ಎಲ್ಲ ಆಕಾಂಕ್ಷಿಗಳನ್ನು ಒಗ್ಗೂಡಿಸಿ ಅರ್ಹರನ್ನು ಆಯ್ಕೆ ಮಾಡಲಾಗುವುದು ಎಂದು ಹೇಳಿದರು.