Advertisement

Lok Sabha Election: ಗ್ಯಾರಂಟಿಗೆ ಮೋಸ ಹೋಗದೆ ಬಿಜೆಪಿಗೆ ಮತ ನೀಡಿ: ಬಿವೈಆರ್‌

11:49 AM Apr 29, 2024 | Team Udayavani |

ಭದ್ರಾವತಿ: ದೇಶದ ಸಮಸ್ತ ನಾಗರಿಕರ ಹಾಗೂ ದೇಶದ ಭವಿಷ್ಯದ ಹಿತದೃಷ್ಟಿ ಹಾಗೂ ಅಭಿವೃದ್ಧಿಯ ಹರಿಕಾರ ಎನಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ಮತ್ತೂಮ್ಮೆ ಈ ದೇಶದ ಪ್ರಧಾನಿಯಾಗಿ ಮಾಡಲು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಮತ ಹಾಕುವುದು ಅತ್ಯವಶ್ಯಕವಾಗಿದೆ ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಹೇಳಿದರು.

Advertisement

ಭಾನುವಾರ ಬೆಳಗ್ಗೆ ತಾಲೂಕಿನ ಹಲವು ಗ್ರಾಮಗಳಿಗೆ ತೆರೆದ ವಾಹನದ ಮೂಲಕ ಪಕ್ಷದ ಕಾರ್ಯಕರ್ತರು- ಮುಖಂಡರ ಜೊತೆಗೆ ತೆರಳಿ ಅವರು ಚುನಾವಣಾ ಪ್ರಚಾರ ಭಾಷಣ ಮಾಡಿದರು.

ಪ್ರಧಾನಿ ನರೇಂದ್ರ ಮೋದಿ ಮಾಡಿರುವ ಸಾಧನೆಯನ್ನು ಗಮನಿಸಿದಾಗ ಅವರು ಜಾರಿಗೆ ತಂದಿರುವ ಎಲ್ಲಾ ಯೋಜನೆಗಳೂ ಧರ್ಮಾತೀತ, ಪಕ್ಷಾತೀತ
ಜಾತ್ಯಾತೀತವಾಗಿ ಎಲ್ಲರಿಗೂ ತಾರತಮ್ಯವಿಲ್ಲದೆ ಬದುಕು ಸಾಗಿಸಲು ತಂದವು ಎಂದು ತಿಳಿಯುತ್ತದೆ. ಆದರೆ ಕಾಂಗ್ರೆಸ್‌ ಸರ್ಕಾರ ಇದಕ್ಕೆ ವಿರುದ್ಧವಾಗಿ ತುಷ್ಟೀಕರಣ ನೀತಿ ಅನುಸರಿಸುತ್ತಾ ಬೇಧ, ಭಾವ ಮಾಡುತ್ತಾ ಜನವಿರೋಧಿ ಆಡಳಿತ ನಡೆಸುತ್ತಾ ಬಂದಿದೆ ಎಂದರು.

ಈಗ ದೇಶದ ಪ್ರತಿ ಮಹಿಳೆಗೂ ವರ್ಷಕ್ಕೆ 1ಲಕ್ಷ ರೂ. ನೀಡುವ ಭರವಸೆ ನೀಡಿರುವ ಕಾಂಗ್ರೆಸ್‌ ಮಾತಿಗೆ ಮಹಿಳೆಯರು ಪುನಃ ಮೋಸ ಹೋಗಬೇಡಿ. ಆ ಯೋಜನೆ
ಜಾರಿಗೆ ಬರಲು ಸಾಧ್ಯವಿಲ್ಲ. ಏಕೆಂದರೆ ಅದು ನಮ್ಮ ದೇಶದ ಬಜೆಟ್‌ ಗಾತ್ರಕೂ ಮೀರಿದ ಮೊತ್ತ. ಮತ ಗಳಿಸಲು ಕಾಂಗ್ರೆಸ್‌ ಜನರಿಗೆ ಮತ್ತೂಮ್ಮೆ ಸುಳ್ಳು  ಶ್ವಾಸನೆ ನೀಡುತ್ತಿದೆ ಎಂದರು.

ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದಾಗಲೆಲ್ಲ ಬರ ಬರುತ್ತದೆ. ಈ ಸರ್ಕಾರ ಹೋಗುವವರೆಗೂ ಮಳೆ ಬರುವುದಿಲ್ಲ. ಈ ಚುನಾವಣೆ ಮುಗಿದ ನಂತರ ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಬೀಳುವುದು ಖಚಿತ ಎಂದರು. ಕಾಗೇಕೋಡಮಗ್ಗೆಯಿಂದ ಆರಂಭಗೊಂಡ ಮತಯಾತ್ರೆಯು ತಳ್ಳಿಕಟ್ಟೆ,ಕೆ. ಹೊಸಹಳ್ಳಿ, ಕೂಡ್ಲಿಗೆರೆ, ಸೀತಾರಾಮಪುರ, ಅರಳಿಹಳ್ಳಿ, ವೀರಾಪುರ, ಗುಡ್ಡದನೇರಲೆಕೆರೆ, ದೇವರಹಳ್ಳಿ, ಕೆ.ಎಚ್‌.ನಗರ, ಅಂತರಗಂಗೆ, ಯರೇಹಳ್ಳಿ, ತಾಷ್ಕಂಟ್‌ನಗರ, ಮಾವಿನಕೆರೆ, ಬಾರಂದೂರು, ಹಿರಿಯೂರು, ಬೊಮ್ಮನಕಟ್ಟೆ, ಹುಡ್ಕೋ, ಕಲ್ಲಳ್ಳಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಸಂಚರಿಸಿತು. ತೆರೆದ ವಾಹನದಲ್ಲಿ ಅಭ್ಯರ್ಥಿ ಹಾಗೂ ಮುಖಂಡರು ನಿಂತು ಮತದಾರರಿಗೆ ಕೈ ಮುಗಿದು ಮತ ಯಾಚಿಸಿದರು. ಪ್ರತೀ ಹಳ್ಳಿಯಲ್ಲಿಯೂಸಹ ಅವರನ್ನು ಅಸಂಖ್ಯಾತ ನಾಗರಿಕರು ಹಾರ ಹಾಕಿ ಆರತಿ ಬೆಳಗಿ ಸ್ವಾಗಿತಿಸಿದರು.

Advertisement

ಜೆಡಿಎಸ್‌ಮುಖಂಡರಾದ ಶಾರದ ಅಪ್ಪಾಜಿ ಮಾತನಾಡಿ, ಜೆಡಿಎಸ್‌ ನಾಯಕರಾದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಬಿ.ಎಸ್‌ .ಯಡಿಯೂರಪ್ಪ ಅವರು ಏ.29ರಂದು ಸಂಜೆ 6 ಗಂಟೆಗೆ ಭದ್ರಾವತಿ ಕನಕ ಮಂಟಪ ಮೈದಾನಕ್ಕೆ ಆಗಮಿಸಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಲಿದ್ದಾರೆ ಎಂದರು.
ಚುನಾವಣಾ ಪ್ರಭಾರಿಗಳಾದ ಕೂಡ್ಲಿಗೆರೆ ಹಾಲೇಶ್‌, ಕೆ.ಎಚ್‌. ತೀರ್ಥಯ್ಯ, ಅಧ್ಯಕ್ಷ ಧರ್ಮಪ್ರಸಾದ್‌, ಧರ್ಮಣ್ಣ, ಮುಂಗೋಟೆ ರುದ್ರೇಶ್‌, ಕುಂಬ್ರಿ ಚಂದ್ರಣ್ಣ, ಜೆಡಿಎಸ್‌ ಅಧ್ಯಕ್ಷ ಆರ್‌. ಕರುಣಾಮೂರ್ತಿ, ಮಂಜುನಾಥ್‌ ಕದಿರೇಶ್‌, ಕಾ.ರ. ನಾಗರಾಜ್‌, ಕವಿತ ಇತರರು ಇದ್ದರು.

ಸುಡು ಬಿಸಿಲಿನಲೂ ಕಾದ ಜನ

ಅಭ್ಯರ್ಥಿಯ ಬರುವಿಕೆಗಾಗಿ ಗ್ರಾಮ- ಗ್ರಾಮಗಳಲ್ಲಿ ಜನರು, ಮಹಿಳೆಯರು ಸುಡು ಬಿಸಿಲನ್ನೂ ಲೆಕ್ಕಿಸದೆ ಗಂಟೆಗಟ್ಟಲೆ ಕಾದುನಿಂತು, ಅವರು ಬರುತ್ತಲೆ ಪಟಾಕಿ ಸಿಡಿಸಿ, ಹಾರಹಾಕಿ ಜಯಘೋಷ ಕೂಗುತ್ತಾ ತಮ್ಮ ಬೆಂಬಲ ವ್ಯಕ್ತಪಡಿಸಿದರು.

ಇದನ್ನೂ ಓದಿ: Chamarajanagara: ಇಂಡಿಗನತ್ತದಲ್ಲಿ ಮರುಮತದಾನ ಆರಂಭ

Advertisement

Udayavani is now on Telegram. Click here to join our channel and stay updated with the latest news.

Next