Advertisement

B.S.Y.; ವೀರಶೈವ ಮಹಾಸಭಾ ಮೂರು ಕುಟುಂಬಗಳ ಆಸ್ತಿಯಂತಾಗಿದೆ: ಯತ್ನಾಳ್ ಕಿಡಿ

06:25 PM Jun 23, 2024 | Team Udayavani |

ವಿಜಯಪುರ : ವೀರಶೈವ ಮಹಾಸಭಾ ಎಂದರೆ ಬಿ.ಎಸ್.ವೈ. 3 ಕುಟುಂಬ ಆಸ್ತಿಯಾಗಿದೆ. ರಾಜ್ಯದ ಲಿಂಗಾಯತರು ಈ ಮೂವರು ಕುಟುಂಬಗಳ ಮನೆಯಲ್ಲಿ ಕಸ ಹೊಡೆಯುವ ಕೆಲಸ ಮಾಡಬೇಕಿದೆ ಎಂದು ಲಿಂಗಾಯತ ಸಮುದಾಯದ ಬಿಜೆಪಿ ಹಿರಿಯ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ವಾಗ್ದಾಳಿ ನಡೆಸಿದ್ದಾರೆ.

Advertisement

ಭಾನುವಾರ ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ವೀರಶೈವ ಮಹಾಸಭಾ ಮೂರು ಕಟುಂಬಗಳ ಆಸ್ತಿಯಾಗಿದೆ. ಬಿಎಸ್‍ವೈ ಎಂದರೆ ಬಿ-ಭೀಮಣ್ಣ ಖಂಡ್ರೆ,, ಎಸ್.-ಶಾಮನೂರು ಶಿವಶಂಕ್ರಪ್ಪ, ವೈ-ಯಡಿಯೂರಪ್ಪ ಕುಟುಂಬದ ಆಸ್ತಿಯಾಗಿದೆ ಎಂದುರು.

ಈ ಮೂರು ಕುಟುಂಬದವರ ಹೆಂಡತಿ, ಮಕ್ಕಳು, ಸೊಸೆ, ಎಂಎಲ್‍ಎ, ಎಂಎಲ್‍ಸಿ, ಎಂಪಿ ಆಗಲಿ. ನಾವು ಕರ್ನಾಟಕದ ಲಿಂಗಾಯತರು ಈ ಮೂರು ಕುಟುಂಬಗಳ ಮನೆಯ ಕಸ ಹೊಡೆದುಕೊಂಡು ಇರುತ್ತೇವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ರಾಹುಲ್ ಗಾಂಧಿ ಹಂಗ ಕಸ ಹೊಡಿಯ ಬೇಕಾಗುತ್ತದೆ. ಗಜಕೇಸರಿ (ಸಂಯುಕ್ತಾ ಪಾಟೀಲ ಹೇಳಿಕೆಗೆ ವ್ಯಂಗ್ಯವಾಗಿ) ಅಂತಾ ಇದ್ದಾರಲ್ಲ ಎಂದು ಪರೋಕ್ಷವಾಗಿ ಸಚಿವ ಶಿವಾನಂದ ಪಾಟೀಲ ಪುತ್ರಿಯೂ ಆಗಿರುವ ಬಾಗಲಕೋಟೆ ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಸಂಯುಕ್ತಾ ಪಾಟೀಲ ಹೇಳಿಕೆಯನ್ನು ಉಲ್ಲೇಖಿಸಿ ವ್ಯಂಗ್ಯವಾಡಿದರು.

ಇಂಥವೆಲ್ಲ ನನ್ನ ಬಳಿ ಕೇಳಬೇಡಿ

Advertisement

ಸೂರಜ್ ಪ್ರಕರಣ ಸೇರಿದಂತೆ ಇಂಥ ವಿಷಯಗಳ ಕುರಿತು ನನ್ನನ್ನು ಕೇಳಬೇಡಿ ಎಂದು ಮಾಧ್ಯಮಗಳ ವಿರುದ್ಧ ಹರಿಹಾಯ್ದರು. ಇಂಥದ್ದೆಲ್ಲ ಕೇಳಲು ನಿಮಗೆ ಕೆಲಸವಿಲ್ಲವೇ (ಮಾಧ್ಯಮದವರಿಗೆ), ದೇವೇಗೌಡ, ರೇವಣ್ಣ ಅವರ ಕುಟುಂಬವನ್ನು ಗುರಿಯಾಗಿಸಲಾಗುತ್ತಿದೆ ಎಂಬ ಪ್ರಶ್ನೆಗೂ ಅಸಮಾಧಾನ ವ್ಯಕ್ತಪಡಿಸಿ, ರಾಜಕೀಯದ ಹೊರತಾಗಿ, ಸರ್ಕಾರದ ವೈಫಲ್ಯದ ಬಗ್ಗೆ ಮಾತ್ರ ಕೇಳಿ ಹೇಳುತ್ತೇನೆ. ಇಂಥವೆಲ್ಲ ನನ್ನ ಬಳಿ ಕೇಳಬೇಡಿ ಎಂದರು.

ಡಿಸಿಎಂ. ಡಿಕೆಶಿ ಶೇ.50 ಕಮಿಷನ್

ರಾಜ್ಯದಲ್ಲಿ ಗ್ಯಾರಂಟಿ ಹೆಸರಿನಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳಿಗೆ ಅನುದಾನ ನೀಡದಷ್ಟು ದಿವಾಳಿಯಾಗಿದೆ. ಸನ್ಮಾನ್ಯ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಶೇ.50 ರಷ್ಟು ಕಮಿಷನ್ ಪಡೆದು ಕಾವೇರಿ ಭಾಗದಲ್ಲಿ ಕೆಲಸ ಕೊಡುತ್ತಿದ್ದಾರೆ ಎಂದು ಆರೋಪಿಸಿದರು.

ನೀರಾವರಿ ಇಲಾಖೆಯಲ್ಲಿ ಗುತ್ತೇದಾರರು ಇರಿಸಿದ್ದ ಇಎಂಡಿ ಠೇವಣಿ ಹಣವನ್ನೇ ಮರಳಿಸುತ್ತಿಲ್ಲ. ಆಲಮಟ್ಟಿ ಭಾಗದಲ್ಲಿ ಗುತ್ತಿಗೆದಾರರು ಧರಣಿ ನಡೆಸುತ್ತಿದ್ದಾರೆ. ಹಿಂದೆ ಅನುದಾನ ಇರಿಸಿದ್ದರಿಂದ ಕೆಲಸ ನಡೆಯುತ್ತಿವೆ. ಈ ಸರ್ಕಾರ ಒಂದೂ ಹೊಸ ಕಾಮಗಾರಿಗೆ ಟೆಂಡರ್ ಕರೆದಿಲ್ಲ. ಕೃಷ್ಣಾ ಭಾಗದ ಯೋಜನೆಗಳಿಗೆ ಅನುದಾನ ನೀಡುತ್ತಿಲ್ಲ ಎಂದು ಟೀಕಿಸಿದರು.

ವಿಜಯೇಂದ್ರಗೆ ಸನ್ಮಾನ್ಯ ಮುಖ್ಯಮಂತ್ರಿ-ಸನ್ಮಾನ್ಯ ಉಪ ಮುಖ್ಯಮಂತ್ರಿ ಎನ್ನುವಂತೆ ಹೈಕೋರ್ಟ್ ಹೇಳಿದೆ, ಹೀಗಾಗಿ ಸನ್ಮಾನ್ಯ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಹಗಲು ದರೋಡೆಗೆ ಇಳಿದಿದ್ದಾರೆ. ಸನ್ಮಾನ್ಯ ಮುಖ್ಯಮಂತ್ರಿಗಳಿಗೆ ಬೆಂಗಳೂರಿನಲ್ಲಿ ಪ್ರತಿ ಸ್ಕಾಯರ್ ಫೀಟ್‍ಗೆ 75 ರೂ. ಕೊಡಬೇಕು. ಬೆಂಗಳೂರಿನಲ್ಲಿ ಶಾಸಕ ಮುನಿರಾಜು ಕೂಡ ಇದನ್ನೇ ಹೇಳಿದ್ದು, ಸನ್ಮಾನ್ಯ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಶೇ.50 ರಷ್ಟು ಲಂಚ ಪಡೆಯುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಅರಣ್ಯೀಕರಣಕ್ಕೆ ಅಗತ್ಯ ಹಣ ನೀಡಲೂ ಸಾಧ್ಯವಿಲ್ಲದಷ್ಟು ಈ ಆರ್ಥಿಕವಾಗಿ ದಿವಾಳಿಯಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಸಸಿಗಳನ್ನು ಕೊಡಿ ಎಂದರೆ ಅನುದಾನ ನೀಡಿಲ್ಲ ಎನ್ನುತ್ತಿದ್ದಾರೆ. ಇಡೀ ದೇಶದಲ್ಲೇ ಅತಿ ಕಡಿಮೆ ಇರುವ ವಿಜಯಪುರ ಜಿಲ್ಲೆಯಲ್ಲಿರುವ ಹೆಚ್ಚಿನ ಪ್ರಮಾಣದ ಜಮೀನಿನಲ್ಲಿ ಅರಣ್ಯೀಕರಣಕ್ಕೆ ಮುಂದಾಗಬೆಕು ಎಂದು ಆಗ್ರಹಿಸಿದರು.

ಈ ಕಾರಣಕ್ಕೆ ನಮ್ಮ ಸಿದ್ಧಸಿರಿ, ಎನ್‍ಟಿಪಿಸಿ ಸೇರಿದಂತೆ ಇತರೆ ಸಂಘ-ಸಂಸ್ಥೆ ಅನುದಾನ ನೀಡಿ ಸಸ್ಯಗಳನ್ನು ಬೆಳೆದು ಅರಣ್ಯೀಕರಣಕ್ಕೆ ಮುಂದಾಗಿದ್ದೇವೆ. ಭವಿಷ್ಯದಲ್ಲೂ ಜಿಲ್ಲೆಯಲ್ಲಿ ಅರಣ್ಯೀಕರಣ ಮಾಡುವುದಕ್ಕೆ ಸಂಘ ಸಂಸ್ಥೆಗಳು ಸಿದ್ಧವಿದ್ದು, ವಿಜಯಪುರ ಜಿಲ್ಲೆಯಲ್ಲಿ ಅರಣ್ಯ ಬೆಳೆಸಲು ಆದ್ಯತೆ ನೀಡಬೇಕು ಎಂದು ಆಗ್ರಹಿಸಿದರು.

ವಕ್ಫ್  ಆಸ್ತಿ ಸಚಿವ ಜಮೀರ್ ಅಹ್ಮದ್ ಅವರ ಅಪ್ಪ ಮಾಡಿದ್ದಲ್ಲ

ದೇಶದಲ್ಲಿರುವ 12 ಲಕ್ಷ ಎಕರೆ ವಕ್ಫ್ ಆಸ್ತಿಯನ್ನು ಕೇಂದ್ರ ಸರ್ಕಾರ ಸ್ವಾದೀನಕ್ಕೆ ಪಡೆಯುವಂತೆ ಆಗ್ರಹಿಸಿ ಪ್ರಧಾನ ಮಂತ್ರಿಗಳಿಗೆ ಪತ್ರ ಬರೆದಿದ್ದೇನೆ. ವಕ್ಫ್ ವಿಷಯದಲ್ಲಿ ನೆಹರು ಮಾಡಿರುವ ತಪ್ಪನ್ನು ಪ್ರಧಾನಿ ನರೇಂದ್ರರ ಮೋದಿ ತಿದ್ದುವ ಮೂಲಕ ಡಾ.ಅಂಬೇಡ್ಕರ್ ಅವರ ಕನಸು ನನಸಾಗಿಸಬೇಕು ಎಂದರು.

ವಕ್ಫ್ ಆಸ್ತಿ ಸಚಿವ ಜಮೀರ್ ಅಹ್ಮದ್ ಅವರ ಅಪ್ಪ ಮಾಡಿದ ಅಸ್ತಿಯಲ್ಲ. ನೆಹರು ಮಾಡಿದ ತಪ್ಪಿಗಾಗಿ ಪಾಕಿಸ್ತಾನ ಕೊಡಲಾಗಿದೆ. ದೇಶದಲ್ಲಿ 12 ಲಕ್ಷ ವಕ್ಫ್ ಆಸ್ತಿಯನ್ನು ಕೇಂದ್ರ ಸರ್ಕಾರ ಸ್ವಾದೀನ ಪಡೆಸಿಕೊಳ್ಳಬೇಕು. ವಶಪಡಿಸಿಕೊಂಡ ವಕ್ಫ್ ಆಸ್ತಿಯನ್ನು ರಾಜ್ಯ ಸರ್ಕಾರಗಳ ಕಂದಾಯ ಇಲಾಖೆಗೆ ಹಸ್ತಾಂತರಿಸಬೇಕು ಎಂದು ಆಗ್ರಹಿಸಿದರು.

ವಕ್ಫ್ ನಿಂದ ವಶಕ್ಕೆ ಪಡೆದ ಆಸ್ತಿಯಲ್ಲಿ ದೇಶದ ದಲಿತ, ಹಿಂದುಳಿದವರಿಗೆ ಮನೆ ಕಟ್ಟಲು ಬಳಸಬೇಕು. ರಾಜ್ಯದಲ್ಲೇ 56 ಸಾವಿರ ಎಕರೆ ವಕ್ಫ್ ಆಸ್ತಿ ಇದೆ. ವಕ್ಫ್ ಆಸ್ತಿ ಹೆಸರಿನಲ್ಲಿ ದಲಿತರು ವಾಸ ಇರುವ ನೆಲೆಗಳನ್ನು ಗೂಂಡಾಗಳಿಂದ ತೆರವುಗೊಳಿಸುವ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು.

ನೆಹರು ಮಾಡಿದ ತಪ್ಪನ್ನು ತಿದ್ದುವ ಕೆಲಸವಾಗಬೇಕು. ಕಾಶ್ಮೀರ 370 ವಿಶೇಷ ಸ್ಥಾನ ರದ್ದು ಮಾಡಿರುವುದು ಹಾಗೂ ನಾಲ್ಕು ಶತಮಾನಗಳ ಕನಸಾಗಿದ್ದ ಅಯೋಧ್ಯೆ ಕಟ್ಟಿದ ಮಾದರಿಯಲ್ಲಿ ವಕ್ಫ್ ಕಾಯ್ದೆ ರದ್ದಾಗಬೇಕು. ಈ ವಿಷಯವಾಗಿಯೇ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿರುವುದಾಗಿ ಯತ್ನಾಳ ಹೇಳಿದರು.

ಸಚಿವ ಶಿವಾನಂದ, ಪಾಲಿಕೆ ಕಮಿಷನರ್ ವಿರುದ್ಧ ಹಕ್ಕುಚ್ಯುತಿ

ಓರ್ವ ಶಾಸಕನಾಗಿ ಕೇಳಿದ ದಾಖಲೆಯನ್ನು ನೀಡದ ಕಾರಣ ಸಚಿವ ಶಿವಾನಂದ, ವಿಜಯಪುರ ಪಾಲಿಕೆ ಆಯುಕ್ತರ ವಿರುದ್ಧ ಹಕ್ಕುಚ್ಯುತಿ ಮಂಡಿಸುವುದಾಗಿ ಹೇಳಿದರು.

ನಾನು ಕೇಳಿದ ದಾಖಲೆ ಕೊಡದಂತೆ ಸಚಿವ ಶಿವಾನಂದ ಪಾಟೀಲ ಅಧಿಕಾರಿಗಳನ್ನು ಅಂಜಿಸುವ ಕೆಲಸ ಮಾಡುತ್ತಿದ್ದಾರೆ. ಓರ್ವ ಶಾಕನಾಗಿ ನಾನು ಕೇಳದ ದಾಖಲೆಗಳನ್ನು 24 ಗಂಟೆಯೊಳಗೆ ಒದಗಿಸಬೇಕು. ಈ ವರೆಗೂ ನೀಡಿಲ್ಲ, ಹೀಗಾಗಿ ಸದನ್ಲದಲಿ ಹಕ್ಕುಚ್ಯುತಿ ಮಂಡಿಸುವುದಾಗಿ ಎಚ್ಚರಿಸಿದರು.

ಮಹಾನಗರ ಪಾಲಿಕೆ ಅಧಿಕಾರಿಳಿಂದ ಕೋರುವುದ ದಾಖಲೆ ಯಾವುದೆಂದು ಈಗ ಹೇಳಲ್ಲ, ಹೇಳಲ್ಲ. ಇವರ ಎಲ್ಲ ಹಗರಣ ಹೊರ ಹಾಕುತ್ತೇನೆ. ಬಾಗಲಕೋಟೆಯಲ್ಲಿ ಸೋತ ಮೇಲೂ ಶಿವಾನಂದ ಪಾಟೀಲ ಹಣ ಉಳಿಸಿಕೊಂಡಿದ್ದಾರೆ ಎಂದು ಕುಟುಕಿದರು.

Advertisement

Udayavani is now on Telegram. Click here to join our channel and stay updated with the latest news.

Next