Advertisement

ಡಾ. ಬಿ.ಆರ್‌.ಅಂಬೇಡ್ಕರ್‌ ನಮಗೆ ದಾರಿ ದೀಪ

03:40 PM May 17, 2022 | Team Udayavani |

ಗೌರಿಬಿದನೂರು: ದೇಶಕ್ಕೆ ಸ್ವಾತಂತ್ರ್ಯ ಬಂದು 7 ದಶಕ ಕಳೆದರೂ ಜಾತೀಯತೆ ಮುಂದುವರಿದಿದ್ದು, ಅಸ್ಪೃಶ್ಯತೆ, ಶೋಷಣೆ, ದಬ್ಟಾಳಿಕೆ ವಿರುದ್ಧ ಹೋರಾಡಲು ಅಂಬೇಡ್ಕರ್‌ ಹಾಗೂ ಅವರು ದೇಶಕ್ಕೆ ಕೊಟ್ಟಿರುವ ಸಂವಿಧಾನವೇ ದಾರಿ ದೀಪವಾಗಿದೆ ಎಂದು ಕಾರ್ಯಕ್ರಮದ ಆಯೋಜಕ ಡಾ.ಕೆ.ಕೆಂಪರಾಜು ಹೇಳಿದರು.

Advertisement

ನಗರದ ಬೈಪಾಸ್‌ ರಸ್ತೆಯ ಬದಿ ಹಮ್ಮಿಕೊಂಡಿದ್ದ ಅಂಬೇಡ್ಕರ್‌ ಜಯಂತಿಯ ಸಮಾರೋಪದಲ್ಲಿ ಅಪಾರ ಜನರನ್ನು ಉದ್ದೇಶಿಸಿ ಮಾತನಾಡಿದರು. ಅಂಬೇಡ್ಕರ್‌ ಬಾಲ್ಯದಲ್ಲಿ ಕುಡಿವ ನೀರಿಗಾಗಿ ಹೋರಾಡುವ ಸ್ಥಿತಿ ಇತ್ತು. ಅವರ ಜೀವನವೇ ಹೋರಾಟ, ಸಂಘರ್ಷಗಳಿಂದ ಕೂಡಿತ್ತು. ಅವರು

ಕೇವಲ ದಲಿತರಿಗೆ ಸೀಮಿತವಲ್ಲ. ಆದ್ದರಿಂದ ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಬೃಹತ್‌ ಮಟ್ಟದಲ್ಲಿ ಡಾ.ಬಿ.ಆರ್‌.ಅಂಬೇಡ್ಕರ್‌ ಹಾಗೂಡಾ.ಬಾಬೂ ಜಗಜೀವನ ರಾಂ ಜಯಂತಿ, ಜೈ ಭೀಮ್‌ ರಥದ ಮೂಲಕ 7 ದಿನ ಮಾಡುತ್ತಿದ್ದೇವೆ. ಪಕ್ಷಾತೀತವಾಗಿ ಜನ ಬೆಂಬಲಿಸಬೇಕು ಎಂದರು.

ಸ್ವಾತಂತ್ರ್ಯದ ಕುರಿತು ಅಲೋಚಿಸಿ: ತಾಲೂಕಿನಲ್ಲಿ 60 ಸಾವಿರ ಪ. ಜಾತಿ ಹಾಗೂ 50 ಸಾವಿರ ಮಂದಿ ಪ. ಪಂಗಡದ ಸಮುದಾಯದವರಿದ್ದಾರೆ. ಆದರೆ ಅಂಬೇಡ್ಕರ್‌ ಜಯಂತಿ ಮಾಡಲು ಶಾಸಕರು ಕ್ರೀಡಾಂಗಣದಲ್ಲಿ ಅವಕಾಶ ನೀಡಲಿಲ್ಲ. ಅಂಬೇಡ್ಕರ್‌ ಮೊಮ್ಮಗ ಬಂದರೂ ಜಾಗ ನೀಡಲಿಲ್ಲ ಎಂದರೆ ತಾಲೂಕಿನಲ್ಲಿ ಸಮುದಾಯಗಳಿಗೆ ಎಷ್ಟರ ಮಟ್ಟಿಗೆ ಸ್ವಾತಂತ್ರ್ಯ ದೊರೆತಿದೆ ಯೋಚಿಸಬೇಕು. ಅಸ್ಪೃಶ್ಯತೆ ಇನ್ನೂ ಜೀವಂತವಾಗಿದೆ. ಆದ್ದರಿಂದ ಅಂಬೇಡ್ಕರ್‌ ಹೆಸರು ಹೇಳಿಕೊಂಡು ರಾಜಕೀಯ ಮಾಡುತ್ತಿರುವವರ ಬಗ್ಗೆ ಎಚ್ಚರದಿಂದಿರಿ ಎಂದರು.

ಆಕರ್ಷಕ ಕೇಂದ್ರ ಬಿಂದು: ಸಭಿಕರ ಬೃಹತ್‌ ಗ್ಯಾಲರಿ ಹಾಗೂ ಎಲ್ ಇಡಿ ಪರದೆಯ ಆಕರ್ಷಕ ವೇದಿಕೆ ಯಲ್ಲಿ ಕೇಂದ್ರ ಬಿಂದುವಾಗಿದ್ದು, ಅಂಬೇಡ್ಕರ್‌ ಮೊಮ್ಮಗ ಭೀಮರಾವ್‌ ಯಶವಂತ ಅಂಬೇಡ್ಕರ್‌ ಹಾಗೂ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮಹಾ  ನಾ ಯಕ ಡಾ.ಬಿ.ಆರ್‌.ಅಂಬೇಡ್ಕರ್‌ ಧಾರವಾಹಿಯ ಬಾಲಕ ಅಂಬೇಡ್ಕರ್‌ ಪಾತ್ರದಾರಿ ಆಯುದ್‌ ಬಾನು ಶಾಲಿ ಮಾತನಾಡಿ, ಕರ್ನಾಟಕದ ಜನ ನನಗೆ ಹೆಚ್ಚಿನ ಪ್ರೀತಿ ಗೌರವ ತೋರಿಸುತ್ತಿದ್ದಾರೆ ಎಂದರು.

Advertisement

ಅಂಬೇಡ್ಕರ್‌ ಮೊಮ್ಮಗ ಭೀಮರಾವ್‌ ಯಶವಂತ ಅಂಬೇಡ್ಕರ್‌ ಮಾತನಾಡಿ, ನಾನು ಯಾವುದೇ ರಾಜಕೀಯ ಪಕ್ಷಗಳ ಕಾರ್ಯಕ್ರಮಕ್ಕೆ ಹೋಗುವುದಿಲ್ಲ. ಆದರೆ ಕೆಂಪರಾಜು ಅವರು ದೀನ ದಲಿತರಿಗೆ

ಮಾಡುತ್ತಿರುವ ಸೇವೆ, ಕಳಕಳಿ, ವಿಭಿನ್ನ ಕಾರ್ಯಕ್ರಮಗಳು, ದೂರದೃಷ್ಟಿ ಚಿಂತನೆಗಳನ್ನು ಅರಿತು ಈ ಕಾರ್ಯಕ್ರಮಕ್ಕೆ ಬಂದಿದ್ದೇನೆ, ಇಂದು ನನ್ನಿಂದ ಅಂಬೇಡ್ಕರ್‌ ಅವರ ಪ್ರತಿಮೆಗಳನ್ನು ಅನಾವರಣಗೊಳಿಸಿ ದ್ದಾರೆ ಎಂದರು. ವಿವಿಧ ಗ್ರಾಪಂ ಅಧ್ಯಕ್ಷರು, ಸದಸ್ಯರು, ಹಾಗೂ ಮುಖಂಡರು ಹಾಜರಿದ್ದರು.

ಮನೆಮಗನಾಗಿ ದುಡಿಯುವೆ :  ಒಂದು ವರ್ಷದಲ್ಲಿ 110 ಮಂದಿ ಗ್ರಾಪಂ ಸದಸ್ಯರು ಹಾಗೂ 10 ಗ್ರಾಪಂಗಳಲ್ಲಿ ನಮ್ಮವರು ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ನಿಮ್ಮ ಮಕ್ಕಳ ಭವಿಷ್ಯಕ್ಕಾಗಿ ನೀವು ನನಗೆ ಒಮ್ಮೆ ಅಧಿಕಾರ ನೀಡಿ. ನಿಮ್ಮ ಮನೆ ಮಗನಾಗಿ ದುಡಿಯುತ್ತೇನೆ. ನಿಮ್ಮ ಮನೆ ಬಾಗಿಲಿಗೆ ಸೇವೆ ಒದಗಿಸುತ್ತೇನೆ. ಕ್ಷೇತ್ರವನ್ನು ಗುಡಿಸಲು ಮುಕ್ತ ಮಾಡುತ್ತೇನೆ. ಆದ್ದರಿಂದ ಕಾಂಗ್ರೆಸ್‌, ಜೆಡಿಎಸ್‌, ಬಿಜೆಪಿ ಎನ್ನದೇ ಎಲ್ಲರೂ ನನ್ನೊಂದಿಗೆ ಪಕ್ಷಾತೀತವಾಗಿ ಕೈಜೋಡಿಸಿ ಎಂದು ಕೆಂಪರಾಜು ಮನವಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next