Advertisement

ಬಿಜೆಪಿ ಅಧಿಕಾರದಲ್ಲಿ ಬೆಂಗಳೂರಿಗೆ ಕೆಟ್ಟ ಹೆಸರು: ಹರಿಪ್ರಸಾದ್‌ ಆರೋಪ

10:01 PM Mar 09, 2022 | Team Udayavani |

ವಿಧಾನಪರಿಷತ್ತು: ಬಿಜೆಪಿ ಅಧಿಕಾರಕ್ಕೆ ಬಂದಾಗಲೆಲ್ಲ ಬೆಂಗಳೂರು ಹಾಳಾಗಿದೆ, ನಗರಕ್ಕೆ ಕೆಟ್ಟ ಹೆಸರು ಬಂದಿದೆ ಎಂದು ಪ್ರತಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್‌ ಆರೋಪಿಸಿದ್ದಾರೆ.
ಬಜೆಟ್‌ ಮೇಲಿನ ಚರ್ಚೆಯಲ್ಲಿ ಮಾತನಾಡಿದ ಅವರು, ಈ ಹಿಂದೆ ಬಿಜೆಪಿ ಅಧಿಕಾರಕ್ಕೆ ಬಂದಾಗ ಬೆಂಗಳೂರು ಗಾರ್ಬೇಜ್ ಸಿಟಿ ಆಗಿತ್ತು. ಈಗ ಪಾಟ್‌ಹೋಲ್ಸ್‌ (ರಸ್ತೆ ಗುಂಡಿ) ಸಿಟಿಯಾಗಿದೆ. ರಾಷ್ಟ್ರಮಟ್ಟದಲ್ಲಿ ನೋಡಿದರೆ ಬಿಬಿಎಂಪಿ ದೇಶದಲ್ಲಿ ಉತ್ತಮ ಪಾಲಿಕೆ. ಆದರೆ, ರಾಜ್ಯ ಮಟ್ಟದಲ್ಲಿ ನೋಡಿದರೆ ಅತ್ಯಂತ ಕೆಟ್ಟ ಪಾಲಿಕೆಯಾಗಿದೆ ಎಂದರು.

Advertisement

ರಸ್ತೆಗುಂಡಿಗಳ ವಿಚಾರದಲ್ಲಿ ಹೈಕೋರ್ಟ್‌ ಚಾಟಿ ಬೀಸುತ್ತಿದೆ, ಛೀಮಾರಿ ಹಾಕುತ್ತಿದೆ. ಆಯುಕ್ತರನ್ನು ಜೈಲಿಗೆ ಕಳಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರೂ ಸರ್ಕಾರಕ್ಕೆ ಇನ್ನೂ ಬುದ್ದಿ ಬಂದಿಲ್ಲ. ಬಿಬಿಎಂಪಿ ಇಂಜಿಯರ್‌ಗಳ ಮೇಲೆ ಎಸಿಬಿ ದಾಳಿ ನಡೆಯಿತು. ಮುಂದೇನಾಯಿತು ಗೊತ್ತಿಲ್ಲ. ಕೋಟ್ಯಾಂತರ ರೂ. ತೆರಿಗೆ ವಂಚನೆ, ಜಾಹಿರಾತು, ಗಾರ್ಬೇಜ್ ಮಾಫಿಯಾ, ಈ ರೀತಿ ಸಾಲು-ಸಾಲು ಅಕ್ರಮ, ಅವ್ಯವಹಾರ, ಹಗರಣಗಳು ಬಿಬಿಎಂಪಿಯಲ್ಲಿ ನಡೆಯುತ್ತಿವೆ ಎಂದು ಹರಿಪ್ರಸಾದ್‌ ವಾಗ್ಧಾಳಿ ನಡೆಸಿದರು.

ಬೆಂಗಳೂರು ಟಿಪ್ಪು ಸುಲ್ತಾನ್‌ ಕಾಲದಲ್ಲಿ ಸಿಲ್ಕ್ ಸಿಟಿ ಆಗಿತ್ತು, ಐಐಎಸ್ಸಿ ಸ್ಥಾಪನೆಯಿಂದ ಸೈನ್ಸ್‌ ಸಿಟಿ ಆಯಿತು. ಸ್ವಾತಂತ್ರ್ಯ ನಂತರ ಐಟಿಐ, ಎಚ್‌ಎಎಲ್‌, ಡಿಆರ್‌ಡಿಒ ಸೇರಿ 50ಕ್ಕೂ ಹೆಚ್ಚು ಉದ್ದಿಮೆಗಳು ಬಂದಿದ್ದರಿಂದ ಕೈಗಾರಿಕಾ ನಗರಿ ಆಯಿತು. ಡೈರಿ ಸ್ಥಾಪನೆಯಿಂದ ಮಿಲ್ಕ್ ಸಿಟಿ ಎಂದೂ ಕರೆಯಲಾಯಿತು, ಐಟಿ ಕಂಪೆನಿಗಳಿಂದಾಗಿ ಸಿಲಿಕಾನ್‌ ಸಿಟಿ ಖ್ಯಾತಿ ಪಡೆಯಿತು. ಸಿಲ್ಕ್ ಸಿಟಿಯಿಂದ ಸಿಲಿಕಾನ್‌ ಸಿಟಿ ಖ್ಯಾತಿಗಳನ್ನು ಹೊಂದಿರುವ ಬೆಂಗಳೂರು ನಗರಕ್ಕೆ ಬಿಜೆಪಿ ಕೆಟ್ಟ ಹೆಸರು ತಂದಿದೆ. ಬೆಂಗಳೂರಿನ ಸಮಗ್ರ ಅಭಿವೃದ್ಧಿಯ ಯೋಜನೆಗಳು ಬಜೆಟ್‌ನಲ್ಲಿ ಕೇವಲ ಪ್ರಸ್ತಾವನೆ ರೂಪದಲ್ಲಿವೆ ಎಂದು ಹರಿಪ್ರಸಾದ್‌ ಹರಿಹಾಯ್ದರು.

ಇದನ್ನೂ ಓದಿ : ನಾರಾಯಣ ಗುರುಗಳ ಸಮುದಾಯಕ್ಕೆ ಮೆಡಿಕಲ್‌ ಕಾಲೇಜು ಕೊಡಿ: ಹರಿಪ್ರಸಾದ್‌

Advertisement

Udayavani is now on Telegram. Click here to join our channel and stay updated with the latest news.

Next