Advertisement
ಸನ್ನಿಧಾನಂ ಬಳಿಗೆ ತೆರಳುವ 18 ಮೆಟ್ಟಿಲುಗಳ ಬಳಿಯೇ ಇರುವ ಸುತ್ತು ಚಪ್ಪರ (ನಡಪಂಥಲ್) ಬಳಿ 80ಕ್ಕೂ ಅಧಿಕ ಭಕ್ತರು ಸೇರಿದ್ದರು. ನಿಷೇಧಾಜ್ಞೆ ಉಲ್ಲಂ ಸಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಪಟ್ಟಣಂತಿಟ್ಟ ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾರೆ. ಭಕ್ತರು ಸುತ್ತು ಚಪ್ಪರ ಪ್ರವೇಶಿಸಲು ಮುಂದಾಗಿ ಅಲ್ಲಿ ವಿಶ್ರಮಿಸ ಬಯಸಿದ್ದರು. ಆದರೆ ರಾತ್ರಿ 10 ಗಂಟೆಯ ಬಳಿಕ ದೇಗುಲದ ಮುಖ್ಯ ಆವರಣ (ಸನ್ನಿಧಾನಂ) ಬಳಿಯಾರೂ ಇರುವಂತಿಲ್ಲ ಎಂದು ಮೊದಲೇ ಸೂಚಿಸಿದ್ದರಿಂದ ಪೊಲೀಸರು ಬಾಗಿಲು ತೆರೆಯಲು ಒಪ್ಪಲಿಲ್ಲ. ಕೋಪಗೊಂಡ ಭಕ್ತರು ಅಲ್ಲಿಗೆ ನುಗ್ಗಲು ಮುಂದಾದರು. ಈ ಸಂದರ್ಭದಲ್ಲಿ ಪೊಲೀಸರು ಅವರನ್ನು ತಡೆಯಲು ವಿಫಲರಾದ ಸಂದರ್ಭದಲ್ಲಿ ಲಾಠಿ ಪ್ರಹಾರ ನಡೆಸಿದ್ದಾರೆ ಮತ್ತು ಬಂಧಿಸಲಾಗಿದೆ. ಪೊಲೀಸರು ಭಕ್ತರ ವಿರುದ್ಧವಾಗಿ ನಡೆದುಕೊಂಡಿಲ್ಲ. ನಿಷೇಧಾಜ್ಞೆ ಉಲ್ಲಂ ಸಿದವರನ್ನು ಕಾನೂನಿನ ಅನ್ವಯ ಬಂಧಿಸಲಾಗಿದೆ ಎಂದು ಪಟ್ಟಣಂತಿಟ್ಟ ಎಸ್‌ಪಿ ಪ್ರತೀಶ್ ಕುಮಾರ್ ಹೇಳಿದ್ದಾರೆ. ಸೋಮವಾರ ಬೆಳಗ್ಗೆ 3 ಗಂಟೆಗೆ ದೇಗುಲದ ಬಾಗಿಲು ತೆರೆದಾಗ ಕೇವಲ ಬೆರಳೆಣಿಕೆಯ ಅಯ್ಯಪ್ಪ ಭಕ್ತರು ಮಾತ್ರ ಇದ್ದರು.
Related Articles
Advertisement
ಟಿಡಿಬಿಯಿಂದ ಮೇಲ್ಮನವಿ: ಎಲ್ಲಾ ವಯೋಮಿತಿಯ ಮಹಿಳೆಯರಿಗೆ ದೇಗುಲ ಪ್ರವೇಶಾವಕಾಶಕ್ಕೆ ಸೆ.28ರಂದು ಸುಪ್ರೀಂಕೋರ್ಟ್ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ತಿರುವಾಂಕೂರು ದೇವಸ್ವಂ ಮಂಡಳಿ ಸೋಮವಾರ ಮೇಲ್ಮನವಿ ಸಲ್ಲಿಸಿದೆ. ಕ್ಷೇತ್ರದಲ್ಲಿ ಮೂಲ ಸೌಕರ್ಯಗಳ ನಿರ್ಮಾಣ ಇನ್ನೂ ಬಾಕಿ ಇದೆ. ಹೀಗಾಗಿ, ತೀರ್ಪು ಅನುಷ್ಠಾನಕ್ಕೆ ಸಮಯಾವಕಾಶ ನೀಡಬೇಕು. ಈಗಾಗಲೇ ಇದ್ದ ವ್ಯವಸ್ಥೆ ಆಗಸ್ಟ್‌ನಲ್ಲಿ ಉಂಟಾಗಿದ್ದ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿದೆ ಎಂದು ಅರಿಕೆ ಮಾಡಿಕೊಳ್ಳಲಾಗಿದೆ.
“ಆಪರೇಷನ್ ಬ್ಲೂ ಸ್ಟಾರ್’ಗೆ ಸಮಶಬರಿಮಲೆ ಸನ್ನಿಧಾನಂನಲ್ಲಿ ನಡೆದ ಪೊಲೀಸರ ಕ್ರಮ “ಆಪರೇಷನ್ ಬ್ಲೂ ಸ್ಟಾರ್’ಗೆ ಸಮ ಎಂದಿದ್ದಾರೆ ಕೇರಳ ವಿಪಕ್ಷ ನಾಯಕ ರಮೇಶ್ ಚೆನ್ನಿತ್ತಲ. ಪಿಣರಾಯಿ ವಿಜಯನ್ ಅವರೇನು ಹಿಟ್ಲರ್ ಮಾದರಿ ಆಡಳಿತ ನಡೆಸುತ್ತಿದ್ದಾರೆಯೇ ಎಂದು ಪ್ರಶ್ನಿಸಿದ್ದಾರೆ. ದೇಗುಲದಲ್ಲಿದ್ದವರು ನಿಜವಾದ ಭಕ್ತರೇ ಹೊರತು ಬಿಜೆಪಿ ಕಾರ್ಯಕರ್ತರಲ್ಲ ಎಂದಿದ್ದಾರೆ. ಮಂಗಳವಾರ ಯುಡಿಎಫ್ ವತಿಯಿಂದ ಕೇರಳಾದ್ಯಂತ ನಿಷೇಧಾಜ್ಞೆ ಉಲ್ಲಂ ಸುವ ಕಾರ್ಯಕ್ರಮ ನಡೆಸಲಾಗುತ್ತದೆ ಎಂದರು ಚೆನ್ನಿತ್ತಲ. 1984ರಲ್ಲಿ ಅಮೃತಸರದ ಸ್ವರ್ಣಮಂದಿರದಲ್ಲಿ ಸಿಕ್ಖ್ ಭಯೋತ್ಪಾದಕ ಬಿಂದ್ರನ್‌ವಾಲೆ ಮತ್ತು ಸಂಗಡಿಗರನ್ನು ನಿಗ್ರಹಿಸಲು ಸೇನೆ “ಬ್ಲೂ ಸ್ಟಾರ್ ಕಾರ್ಯಾಚರಣೆ’ ನಡೆಸಿತ್ತು.