Advertisement

ಆಯುಷಾನ್‌ ಯೋಜನೆ ಯಶಸ್ವಿಗೆ ಕಾರ್ಯಪ್ರವೃತರಾಗಿ

04:45 PM Sep 29, 2021 | Team Udayavani |

ಬಳ್ಳಾರಿ: ಆಯುಷ್ಮಾನ್‌ ಭಾರತ ಡಿಜಿಟಲ್‌ ಮಿಷನ್‌ಯೋಜನೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿಅವರು ಚಾಲನೆ ನೀಡಿದ್ದು, ಇದನ್ನು ತುರ್ತುಮತ್ತು ವಿಶೇಷ ಯೋಜನೆ ಎಂದು ಭಾವಿಸಿ ಈಯೋಜನೆಯ ಯಶಸ್ಸಿಗೆ ಎಲ್ಲ ಅಧಿಕಾರಿಗಳು ಕಾರ್ಯಪ್ರವೃತ್ತರಾಗಬೇಕು ಎಂದು ಆರೋಗ್ಯ ಸಚಿವ ಡಾ| ಕೆ. ಸುಧಾಕರ ಅಧಿ ಕಾರಿಗಳಿಗೆ ಸೂಚನೆ ನೀಡಿದ್ದಾರೆ.

Advertisement

ರಾಜ್ಯದಲ್ಲಿ ಕೋವಿಡ್‌-19 ಲಸಿಕಾಅಭಿಯಾನದ ಜಿಲ್ಲಾವಾರು ಪ್ರಗತಿ, ಗುರಿ ಸಾಧನೆಪರಿಶೀಲಿಸುವಿಕೆಗೆ ಸಂಬಂಧಿ ಸಿದಂತೆ ರಾಜ್ಯದ ಎಲ್ಲಜಿಲ್ಲೆಗಳ ಜಿಲ್ಲಾ ಧಿಕಾರಿ, ಜಿಪಂ ಸಿಇಒ ಹಾಗೂ ಡಿಎಚ್‌ಒಗಳೊಂದಿಗೆ ಮಂಗಳವಾರ ಸಂಜೆನಡೆಸಿದ ವೀಡಿಯೋ ಸಂವಾದದಲ್ಲಿ ಅವರು ಮಾತನಾಡಿದರು.

ಆಯುಷ್ಮಾನ್‌ ಭಾರತ ಡಿಜಿಟಲ್‌ ಮಿಷನ್‌(ಎಬಿಡಿಎಂ) ಯೋಜನೆಯನ್ನು ನಾವೆಲ್ಲ ವಿಶೇಷಮತ್ತು ತುರ್ತು ಯೋಜನೆ ಎಂದು ಭಾವಿಸಿರಾಜ್ಯದಾದ್ಯಂತ ವಿಸ್ತರಿಸಬೇಕಿದೆ.

ರಾಜ್ಯ ಸರ್ಕಾರಮತ್ತು ಆರೋಗ್ಯ ಇಲಾಖೆ ಈ ಯೋಜನೆಯನ್ನುರಾಜ್ಯದಲ್ಲಿ ದೊಡ್ಡ ಆಂದೋಲನದ ರೀತಿಯಲ್ಲಿ ಸ್ವೀಕರಿಸಿದೆ. ಸಾರ್ವಜನಿಕರಿಗೆ ಈ ಯೋಜನೆಯ ಸದುಪಯೋಗವನ್ನು ತಲುಪಿಸುವ ಮೂಲಕಯ ಶಸ್ವಿಗೊಳಿಸುವ ಗುರಿ ಹೊಂದಬೇಕು ಎಂದುಅವರು ಅಧಿಕಾರಿಗಳಿಗೆ ಸೂಚಿಸಿದರು.

ದೇಶದ ಪ್ರತಿಯೊಂದು ಕುಟುಂಬಆಯುಷ್ಮಾನ್‌ ಕಾರ್ಡ್‌ ಅನ್ನು ಪಡೆಯುವಅರ್ಹತೆಯನ್ನು ಹೊಂದಿದೆ. ಸರ್ಕಾರ 5.5 ಕೋಟಿಕಾರ್ಡ್‌ಗಳನ್ನು ನೀಡುವ ಗುರಿಯನ್ನು ಹೊಂದಿದ್ದುಕಳೆದ ಮೂರು ವರ್ಷಗಳಲ್ಲಿ 1.5 ಕೋಟಿ ಕಾಡ್‌ìಗಳನ್ನು ನೀಡಲಾಗಿದೆ ಎಂದು ತಿಳಿಸಿದರು.

Advertisement

ಆಯುಷ್ಮಾನ್‌ ಕಾರ್ಡ್‌ ವಿತರಣೆ: ರಾಜ್ಯದಲ್ಲಿಸಾರ್ವಜನಿಕರಿಗೆ ಕೋವಿಡ್‌ ಲಸಿಕೆ ನೀಡುವ ಜೊತೆಜೊತೆಗೆ ಆಯುಷ್ಮಾನ್‌ ಆರೋಗ್ಯ ಕಾರ್ಡ್‌ ಅನ್ನುವಿತರಿಸಬೇಕು. ಇನ್ನೂ ಮೂರು ತಿಂಗಳುಗಳಲ್ಲಿಗರಿಷ್ಠ ಪ್ರಮಾಣದಲ್ಲಿ ಕಾರ್ಡ್‌ಗಳನ್ನು ವಿತರಿಸುವನಿರೀಕ್ಷೆ ಇದೆ ಎಂದು ಅವರು ತಿಳಿಸಿದರು.

ಕೋವಿಶೀಲ್ಡ್‌ ಲಸಿಕೆ ಬೇಡಿಕೆ: ಬಳ್ಳಾರಿ ಜಿಲ್ಲೆಯಲ್ಲಿನಾಳೆ ಒಂದು ಲಕ್ಷ ಕೋವಿಡ್‌ ಲಸಿಕೆ ನೀಡಿಕೆಯ ಗುರಿಹೊಂದಿದ್ದು ಮತ್ತಷ್ಟು ಕೋವಿಶಿಲ್ಡ್‌ ಲಸಿಕೆ ಬೇಕಾಗಿದೆ.ಅವಶ್ಯಕವಿರುವ ಲಸಿಕೆಯನ್ನು ಪೂರೈಸುವಂತೆಜಿಲ್ಲಾಧಿಕಾರಿ ಪವನಕುಮಾರ ಮಾಲಪಾಟಿಅವರು ಸಚಿವರಲ್ಲಿ ಮನವಿ ಮಾಡಿದರು.

ಇದಕ್ಕೆಸ್ಪಂದಿಸಿದ ಸಚಿವರು ಅವಶ್ಯಕವಿರುವ ಲಸಿಕೆಯನ್ನುಶೀಘ್ರವಾಗಿ ಸರಬರಾಜು ಮಾಡಲಾಗುವುದು.ಪೂರ್ಣ ಪ್ರಮಾಣದಲ್ಲಿ ಲಸಿಕೆ ನೀಡಿ ಎಂದುಜಿಲ್ಲಾಧಿ ಕಾರಿಗಳಿಗೆ ಸೂಚನೆ ನೀಡಿದರು.ರಾಜ್ಯಾದ್ಯಂತ ಇದುವರೆಗೆ 5.5 ಕೋಟಿ ಡೋಸ್‌ಲಸಿಕೆ ವಿತರಿಸಲಾಗಿದ್ದು, 77.6% ಜನ ಮೊದಲಡೋಸ್‌ ಹಾಗೂ 32.7% ಜನ ಎರಡೂ ಡೋಸ್‌ಲಸಿಕೆ ಪಡೆದಿದ್ದಾರೆ ಎಂದು ಅವರು ತಿಳಿಸಿದರು.ಈ ಸಂದರ್ಭದಲ್ಲಿ ಜಿಪಂ ಸಿಇಒ ನಂದಿನಿ ಕೆ.ಆರ್‌,ಡಿಹೆಚ್‌ಒ ಡಾ| ಎಚ್‌.ಎಲ್‌.ಜನಾರ್ಧನ್‌ ಮತ್ತುಇತರೆ ಅಧಿ ಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next