Advertisement

ಅಲ್ಪ ತೀವ್ರತೆ ಸೋಂಕಿಗೆ ಆಯುರ್ವೇದ ಪರಿಣಾಮಕಾರಿ

11:36 AM Nov 03, 2020 | Nagendra Trasi |

ನವದೆಹಲಿ: ಸೌಮ್ಯ ಮತ್ತು ಅಲ್ಪ ತೀವ್ರತೆಯ ಕೋವಿಡ್ ಸೋಂಕನ್ನು ನಿಯಂತ್ರಿಸಲು ಆಯುರ್ವೇದ ಪರಿಣಾಮಕಾರಿ ಆಗಬಲ್ಲದು ಎಂದು ಆಯುಷ್‌ ಸಚಿವಾಲಯದ ಅಖಿಲ ಭಾರತ ಆಯುರ್ವೇದ ಸಂಸ್ಥೆ (ಎಐಐಎ) ದೃಢಪಡಿಸಿದೆ.

Advertisement

ಆಯುಷ್‌ ಕ್ವಾತಾ, ಸಂಶಮನಿ ವಟಿ, ಪಿಫ‌ಟ್ರೋಲ್‌ ಗುಳಿಗೆ ಮತ್ತು ಲಕ್ಷ್ಮಿ ವಿಲಾಸ ರಸ- ಈ ನಾಲ್ಕು ಔಷಧ ಕ್ರಮ ಅನುಸರಿಸಿದ ಸೋಂಕಿತರ ಆರೋಗ್ಯ ಸುಧಾರಿಸಿದ್ದಲ್ಲದೆ, ಕೇವಲ ಆರೇ ದಿನಗಳಲ್ಲಿ “ನೆಗೆಟಿವ್‌’ ದೃಢಪಟ್ಟಿದೆ ಎಂದು ಎಐಎಎ ಮುಖವಾಣಿ ವರದಿ ಮಾಡಿದೆ.

ಅಲ್ಪ ತೀವ್ರತೆಯ ಸೋಂಕಿಗೆ ತುತ್ತಾಗಿದ್ದ ದೆಹಲಿ ಮೂಲದ ವ್ಯಕ್ತಿ ಹೋಂ ಕ್ವಾರಂಟೈನ್‌ನಲ್ಲಿದ್ದೇ ಆಯುಷ್‌ ಕ್ವಾತಾ, ಸಂಶಮನಿ ವಟಿ, ಪಿಫ‌ಟ್ರೋಲ್‌ ಗುಳಿಗೆ ಮತ್ತು ಲಕ್ಷ್ಮಿ ವಿಲಾಸ ರಸಗಳನ್ನೊಳಗೊಂಡ ಸಂಶಮಾನಾ ಚಿಕಿತ್ಸೆ ಪಡೆದಿದ್ದರು. ಒಂದೇ ವಾರದಲ್ಲಿ ಅವರು ಸೋಂಕಿನಿಂದ ಚೇತರಿಸಿ ಕೊಂಡರು.

ಜ್ವರ, ಆಯಾಸ, ನೆಗಡಿ, ಉಸಿರಾಟ ಸಮಸ್ಯೆ, ವಾಸನೆ ಗುರುತಿಸದಿರುವಿಕೆ- ಈ ಎಲ್ಲ ಸಮಸ್ಯೆಗಳನ್ನೂ ಆಯುರ್ವೇದ ಔಷಧಗಳು ನಿವಾರಿಸಲು ಸಫ‌ಲವಾಗಿವೆ ಎಂದು ವರದಿ ಹೇಳಿದೆ.

ಸೋಂಕಿಗೆ ತಮಿಳುನಾಡು ಕೃಷಿ ಸಚಿವ ದೊರೈಕಣ್ಣು ಬಲಿ

Advertisement

ಕೋವಿಡ್  ಸೋಂಕು ದೃಢಪಟ್ಟಿದ್ದ ತಮಿಳುನಾಡು ಕೃಷಿ ಸಚಿವ ಆರ್‌.ದೊರೈಕಣ್ಣು (72) ಭಾನುವಾರ ಕೊನೆಯುಸಿರೆಳೆದಿದ್ದಾರೆ. ಅವರು ಪತ್ನಿ, ಆರು ಮಕ್ಕಳನ್ನು ಅಗಲಿದ್ದಾರೆ. ಕಾವೇರಿ ಆಸ್ಪತ್ರೆಯಲ್ಲಿ ಸೋಂಕಿನ ಹಿನ್ನೆಲೆ ಚಿಕಿತ್ಸೆ ಪಡೆಯುತ್ತಿದ್ದರು.

ತಮಿಳುನಾಡಿನಲ್ಲಿ ಸೋಂಕಿನಿಂದಾಗಿ ಅಸುನೀಗಿದ ಮೂರನೇ ಜನಪ್ರತಿನಿಧಿ ದೊರೈಕಣ್ಣು. ಡಿಎಂಕೆ ಶಾಸಕ ಜೆ.ಅನºಳಗನ್‌ ಮತ್ತು ಕನ್ಯಾಕುಮಾರಿ ಲೋಕಸಭಾ ಸದಸ್ಯ, ಕಾಂಗ್ರೆಸ್‌ ನಾಯಕ ಎಚ್‌.ವಸಂತಕುಮಾರ್‌ ಕೂಡ ಸೋಂಕಿಗೆ ಬಲಿಯಾಗಿದ್ದರು.

ದೊರೈಕಣ್ಣು ತಂಜಾವೂರು ಜಿಲ್ಲೆಯ ಪಾಪನಾಶನಮ್‌ ಕ್ಷೇತ್ರವನ್ನು 2006ರಿಂದ ಪ್ರತಿನಿಧಿಸುತ್ತಾ ಬಂದಿದ್ದರು. ಸಚಿವರ ನಿಧನಕ್ಕೆ ರಾಜ್ಯಪಾಲ ಬನ್ವರಿಲಾಲ್‌ ಪುರೋಹಿತ್‌, ಸಿಎಂ ಕೆ.ಪಳನಿಸ್ವಾಮಿ, ಡಿಸಿಎಂ ಓ.ಪನ್ನೀರ್‌ಸೆಲ್ವಂ, ಡಿಎಂಕೆ ಅಧ್ಯಕ್ಷ ಎಂ.ಕೆ.ಸ್ಟಾಲಿನ್‌ ಶೋಕ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next