Advertisement

ಕಾಂಗ್ರೆಸ್‌ ಅಧ್ಯಕ್ಷ ಸ್ಥಾನಕ್ಕೆ ನಾನೂ ನಾಮಪತ್ರ ಸಲ್ಲಿಸಿದ್ದೆ!

11:26 AM Dec 08, 2017 | Team Udayavani |

ಹೊಸದಿಲ್ಲಿ: ಕಾಂಗ್ರೆಸ್‌ ಅಧ್ಯಕ್ಷ ಸ್ಥಾನಕ್ಕೆ ರಾಹುಲ್‌ ಗಾಂಧಿ ಒಬ್ಬರೇ ನಾಮಪತ್ರ ಸಲ್ಲಿಸಿದ್ದು ಎಂದು ಆ ಪಕ್ಷದ ನಾಯಕರು ಹೇಳಿಕೊಂಡಿದ್ದರೂ ಅದು ಸತ್ಯವಲ್ಲ ಎಂದು ಅದೇ ಪಕ್ಷದ ನಾಯಕರೊಬ್ಬರು ಹೇಳಿ ಅಚ್ಚರಿ ಮೂಡಿಸಿದ್ದಾರೆ.

Advertisement

ನಾನೂ ನಾಮಪತ್ರ ಸಲ್ಲಿಸಿದ್ದೆ. ಆದರೆ ಅದನ್ನು ತಿರಸ್ಕರಿಸಲಾಗಿದೆ ಎಂದು ಉತ್ತರ ಪ್ರದೇಶದ ಕಾಂಗ್ರೆಸ್‌ನ ನಾಯಕ ಅಯೂಬ್‌ ಅಲಿ ಆರೋಪಿಸಿದ್ದಾರೆ. ಈ ಬಗ್ಗೆ “ಟೈಮ್ಸ್‌ ನೌ’ ಸುದ್ದಿವಾಹಿನಿ ವರದಿ ಮಾಡಿದೆ. ಅಲ್ಲದೆ ಪಕ್ಷದ ಅಧ್ಯಕ್ಷ ಸ್ಥಾನದ ಚುನಾವಣೆ ಪ್ರಕ್ರಿಯೆಯನ್ನು ರಾಹುಲ್‌ ಗಾಂಧಿಗಾಗಿ ಬದಲು ಮಾಡಲಾಗಿದೆ ಎಂದು ದೂರಿದ್ದಾರೆ. ಪಕ್ಷದ ವಕ್ತಾರ ಮನೀಶ್‌ ತಿವಾರಿ ಜತೆಗಿನ ಮಾತುಕತೆ ವೇಳೆ “ದೇಶದ ಉಳಿದ ರಾಜಕೀಯ ಪಕ್ಷಗಳಂತೆ ಕಾಂಗ್ರೆಸ್‌ ಕೂಡ ನಿಗದಿತ ಕುಟುಂಬದ ಮಾಲಕತ್ವ ಹೊಂದಿದೆ’ ಎಂದಿದ್ದಾರೆ ಅಲಿ. 

ಗುಜರಾತ್‌ ಚುನಾವಣೆ ಫ‌ಲಿತಾಂಶ ಪ್ರಕಟವಾಗುವುದಕ್ಕೆ ಮೂರು ದಿನಗಳ ಮೊದಲು ಅಂದರೆ ಡಿ.15ರಂದು ರಾಹುಲ್‌ ಕಾಂಗ್ರೆಸ್‌ ಅಧ್ಯಕ್ಷ ಎಂದು ಘೋಷಣೆ ಮಾಡಲಾಗು ತ್ತದೆ. ಅದಕ್ಕೆ ಮುನ್ನವೇ ಈ ಬೆಳವಣಿಗೆ ನಡೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next