Advertisement

Ayodhya Ram Mandir: ಅಯೋಧ್ಯೆ ಅರ್ಚಕರಿಗೆ ವಸ್ತ್ರ ಸಂಹಿತೆ, ಮೊಬೈಲ್‌ ಬಳಕೆಗೂ ನಿಷೇಧ

10:41 AM Jul 04, 2024 | Team Udayavani |

ಅಯೋಧ್ಯಾ: ಅಯೋಧ್ಯಾ ರಾಮಮಂದಿರದಲ್ಲಿ ಪೂಜೆ ಮಾಡುವ ಅರ್ಚಕರಿಗೆ ನೂತನ ವಸ್ತ್ರ ಸಂಹಿತೆ ಜಾರಿಗೊಳಿಸಲಾಗಿದೆ. ಈ ಮೊದಲು ಅರ್ಚಕರು ಕೇಸರಿ, ಹಳದಿ ಉಡುಪು ಧರಿಸುತ್ತಿದ್ದರು.

Advertisement

ಇನ್ನು ಮುಂದೆ ಅರ್ಚಕರು ಪೇಟ, ಪೂರ್ಣ ತೋಳಿನ ಕುರ್ತಾ, ಧೋತಿ ಧರಿಸಲಿದ್ದಾರೆ. ಈ ಎಲ್ಲ ಉಡುಪು ಸಂಪೂರ್ಣ ಹಳದಿ ಬಣ್ಣದ್ದಾಗಿದ್ದು, ಪ್ರಧಾನ ಅರ್ಚಕರು, 4 ಸಹಾಯಕ ಅರ್ಚಕರು ಹಾಗೂ ತರಬೇತಿ ಪಡೆಯುತ್ತಿರುವ 20 ಅರ್ಚಕರು ಎಲ್ಲರೂ ಇದೇ ಸಮವಸ್ತ್ರ ಧರಿಸಲಿದ್ದಾರೆ. ಜತೆಗೆ ಅರ್ಚ ಕರಿಗೆ 5 ಗಂಟೆಗಳ ಪಾಳಿ ಅವಧಿ ನಿಗದಿಪಡಿಸಲಾಗಿದ್ದು, ಗರ್ಭಗುಡಿಯಲ್ಲಿ ಮೊಬೈಲ್‌ ಬಳಸಲು ನಿಷೇಧಿಸಲಾಗಿದೆ ಎಂದು ಸಹಾಯಕ ಅರ್ಚಕ ಸಂತೋಷಕುಮಾರ್‌ ತಿವಾರಿ ತಿಳಿಸಿದ್ದಾರೆ.

ಇದನ್ನೂ ಓದಿ: Mass Wedding: ರಿಲಯನ್ಸ್‌ನಿಂದ 50 ಜೋಡಿಗೆ ವಿವಾಹಭಾಗ್ಯ: ತಲಾ 1ಲಕ್ಷ ಸ್ತ್ರೀ ಧನ

Advertisement

Udayavani is now on Telegram. Click here to join our channel and stay updated with the latest news.

Next