Advertisement

Ayodhya: ಮೇ ತಿಂಗಳಿಂದ ಮಸೀದಿ ನಿರ್ಮಾಣ ಆರಂಭ

09:01 PM Dec 17, 2023 | Pranav MS |

ಲಕ್ನೋ: ಅಯೋಧ್ಯೆಯ ಧನ್ನಿಪುರ್‌ನಲ್ಲಿ ಪ್ರಸ್ತಾವಿತ ಮಸೀದಿ ನಿರ್ಮಾಣ ಕಾರ್ಯವು ಮುಂದಿನ ವರ್ಷ ಮೇನಿಂದ ಆರಂಭವಾಗಲಿದೆ ಎಂದು ಇಂಡೋ-ಇಸ್ಲಾಮಿಕ್‌ ಕಲ್ಚರಲ್‌ ಫೌಂಡೇಶನ್‌ ಟ್ರಸ್ಟ್‌ ತಿಳಿಸಿದೆ. ಶ್ರೀರಾಮಜನ್ಮಭೂಮಿ-ಬಾಬ್ರಿ ಮಸೀದಿ ಪ್ರಕರಣದ ತೀರ್ಪಿನ ಬಳಿಕ ಅಯೋಧ್ಯೆಯ ಧನ್ನಿಪುರ್‌ನಲ್ಲಿ ಮಸೀದಿಗಾಗಿ ಸ್ಥಳ ನೀಡಲಾಗಿತ್ತು.

Advertisement

“ಮುಂದಿನ ವರ್ಷ ಫೆಬ್ರವರಿ ಮಧ್ಯ ಭಾಗದ ವೇಳೆಗೆ ಮಸೀದಿಯ ವಿನ್ಯಾಸ ಅಂತಿಮಗೊಳ್ಳಲಿದೆ. ಫೆಬ್ರವರಿಯಲ್ಲಿ ಜಮೀನಿನ ಸ್ಥಳದಲ್ಲಿ ಕಚೇರಿ ನಿರ್ಮಿಸಲಾಗುತ್ತದೆ. ಮೇನಿಂದ ಮಸೀದಿ ನಿರ್ಮಾಣ ಕಾರ್ಯವು ಆರಂಭವಾಗಲಿದೆ. 40,000 ಚದರ ಅಡಿ ಜಾಗದಲ್ಲಿ ಮಸೀದಿ ನಿರ್ಮಾಣಗೊಳ್ಳಲಿದೆ. ದೇಣಿಗೆ ಸಂಗ್ರಹಕ್ಕಾಗಿ ಪ್ರತಿ ರಾಜ್ಯದಲ್ಲಿ ಸಂಬಂಧಪಟ್ಟ ವ್ಯಕ್ತಿಗಳಿಗೆ ಜವಾಬ್ದಾರಿ ವಹಿಸಲಾಗುತ್ತದೆ’ ಎಂದು ಟ್ರಸ್ಟ್‌ನ ಮುಖ್ಯ ಟ್ರಸ್ಟಿ ಜುಫ‌ರ್‌ ಫಾರುಕಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next