Advertisement

ಅಗಣಿತ ಗುಣಗಣ ಪೂಜಿತ ರಾಮ; ಐತಿಹಾಸಿಕ ಕ್ಷಣಕ್ಕೆ ಸಂಭ್ರಮದ ಪೂಜೆ

10:00 AM Aug 06, 2020 | mahesh |

ಬೆಂಗಳೂರು: ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿದ ಐತಿಹಾಸಿಕ ಕ್ಷಣವನ್ನು ರಾಜ್ಯದಲ್ಲೂ ಜನ ಹಾಗೂ ರಾಜಕೀಯ ಪಕ್ಷಗಳ ಮುಖಂಡರು, ಗಣ್ಯರು ವಿಶೇಷ ಪೂಜೆ ಮಾಡಿ, ಸಿಹಿ ಹಂಚಿಕೊಳ್ಳುವ ಮೂಲಕ ಸಂಭ್ರಮಿಸಿದರು. ರಾಜ್ಯ ಬಿಜೆಪಿ ಕಚೇರಿಯಲ್ಲಿ ಶ್ರೀರಾಮನಿಗೆ ವಿಶೇಷ
ಪೂಜೆ ನಡೆದರೆ, ಉಪಮುಖ್ಯಮಂತ್ರಿಗಳು, ಸಚಿವರು ನಾನಾ ದೇವಾಲಯಗಳಿಗೆ ತೆರಳಿ ವಿಶೇಷ ಪೂಜೆ ಜತೆಗೆ ಪ್ರಾರ್ಥನೆ ಸಲ್ಲಿಸಿದರು. ಹಲವು ಸಚಿವರು,

Advertisement

ಗಣ್ಯರು ಅಪೂರ್ವ ಕ್ಷಣದ ಸಂತಸ ಹಂಚಿಕೊಂಡರು. ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ನಡೆದ ಅಂಗವಾಗಿ ರಾಜ್ಯ
ಬಿಜೆಪಿ ಕಾರ್ಯಾಲಯ “ಜಗನ್ನಾಥ ಭವನ’ದಲ್ಲಿ ಬುಧವಾರ ಶ್ರೀರಾಮನಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ರಾಜ್ಯ ಬಿಜೆಪಿ ಸಂಘಟನಾ ಪ್ರಧಾನ ಕಾರ್ಯ
ದರ್ಶಿ ಅರುಣ್‌ ಕುಮಾರ್‌. ಪ್ರಧಾನ ಕಾರ್ಯದರ್ಶಿ ಅಶ್ವತ್ಥ ನಾರಾಯಣ, ಮಾಧ್ಯಮ ವಕ್ತಾರ ಕ್ಯಾಪ್ಟನ್‌ ಗಣೇಶ್‌ ಕಾರ್ಣಿಕ್‌, ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ
ಅಧ್ಯಕ್ಷ ಮುಜಾಮಿಲ್‌ ಅಹಮದ್‌ ಬಾಬು, ಕಾರ್ಯಾಲಯ ಕಾರ್ಯದರ್ಶಿ ಲೋಕೇಶ್‌ ಅಂಬೇಕಲ್ಲು, ಸಿಬ್ಬಂದಿ, ಕಾರ್ಯಕರ್ತರು ಪಾಲ್ಗೊಂಡಿದ್ದರು.

ಗಾಂಧೀಜಿಗೆ ಪ್ರಿಯವಾದ “ರಾಮ ನಾಮ’: ಶಾಂತಿ  ಮತ್ತು ಸೌಹಾರ್ದತೆಯ ವಾತಾವರಣದಲ್ಲಿ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣ ಕಾರ್ಯಗಳು ಆರಂಭವಾಗುತ್ತಿರುವುದು ನಾಡಿನ ಜನತೆಗೆ ಸಮಾಧಾನ ತಂದಿದೆ. ಈ ಅಪೂರ್ವ ಸಮಾರಂಭ ರಾಷ್ಟ್ರಪಿತ ಶಾಂತಿದೂತ ಮಹಾತ್ಮ ಗಾಂಧೀಜಿಯವರ
ಜೀವನ- ಸಂದೇಶಗಳ ಸಂದ ರ್ಭವೂ ಆಗಿದೆ. ಗಾಂಧೀಜಿಯವರು ಶ್ರೀರಾಮನ ಅನನ್ಯ ಮತ್ತು ಅಂತರಂಗದ ಭಕ್ತರಾಗಿದ್ದರು. ಜೀವಿತದ ಕೊನೆಯ
ಗಳಿಗೆಯಲ್ಲೂ “ರಾಮ ರಾಮ’ ಎಂದು ಜಪಿಸಿ ದೇವರಲ್ಲಿ ಜೀವ ಅರ್ಪಿಸಿಕೊಂಡ ಮಹಾನ್‌ ಭಕ್ತರು ಗಾಂಧೀಜಿ. ಅಯೋಧ್ಯೆಯ ಸಮಾ ರಂಭಗಳು
ಮಹಾತ್ಮನ ಶಾಂತಿ- ಸೌಹಾರ್ದತೆ ಸಂದೇಶವನ್ನು ಬೀರಲಿ ಎಂದು ಆಸಿಸುವುದಾಗಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದ್ದಾರೆ.

ದೇವಾಲಯಗಳಲ್ಲಿ ವಿಶೇಷ ಪೂಜೆ: ಸಚಿವ ರಮೇಶ್‌ ಜಾರಕಿಹೊಳಿ ಅವರು ನಗರದಲ್ಲಿನ ಯದುಗಿರಿ ಯತಿರಾಜ ಮಠದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಮೂರು ಕೋಟಿ ರಾಮನಾಮ ಲೇಖನ ಯಜ್ಞದಲ್ಲಿ ಪಾಲ್ಗೊಂಡು ವಿಶೇಷ ಪೂಜೆ ಸಲ್ಲಿಸಿದರು. ನಂತರ 1990ರ ಅಯೋಧ್ಯಾ ಕರಸೇವೆಗೆ
ಮೂರ್ತ ರೂಪಕೊಟ್ಟ ನರಸಿಂಹ ರಾಜ ಕಾಲೋನಿಯ ಶ್ರೀರಾಮ ಮಂದಿರಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ ರಮೇಶ್‌ ಜಾರಕಿಹೊಳಿ ಅವರು “ರಾಮ ಕಥಾಮಂಜರಿ’ ಕೃತಿ ಬಿಡುಗಡೆ ಮಾಡಿದರು.

ಸುವರ್ಣಾಕ್ಷರದಲ್ಲಿ ದಾಖಲಾಗುವ ದಿನ
ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಅವರು ದೆಹಲಿಯ ನಿವಾಸದಲ್ಲಿ ಬುಧವಾರ ಶ್ರೀರಾಮಚಂದ್ರನಿಗೆ ವಿಶೇಷ ಪೂಜೆ ನೆರವೇರಿಸಿ ರಾಷ್ಟ್ರ ಸುಭೀಕ್ಷವಾಗಿರಲಿ ಎಂದು ಪ್ರಾರ್ಥಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಡಿ.ವಿ. ಸದಾನಂದಗೌಡ, ಅದೆಷ್ಟೋ ಕೋಟಿ ಭಾರತೀಯರು ಕಾತರದಿಂದ ಕಾದಿದ್ದ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ, ಶಿಲಾನ್ಯಾಸ ಕಾರ್ಯಕ್ರಮ ಯಶಸ್ವಿಯಾಗಿ ಸಂಪನ್ನಗೊಂಡಿದೆ.

Advertisement

ಈ ದಿನ ಇತಿಹಾಸದಲ್ಲಿ ಸುವರ್ಣಾಕ್ಷರದಲ್ಲಿ ದಾಖಲಾಗುತ್ತದೆ ಎಂದು ಸಂತಸ ವ್ಯಕ್ತಪಡಿಸಿದರು. ಈ ದಿನ ಸುಲಭವಾಗಿ ಬಂದಿಲ್ಲ. ಶ್ರೀರಾಮ ಮಂದಿರ ಪುನರ್‌ ನಿರ್ಮಾಣಕ್ಕಾಗಿ ಐದು ಶತಮಾನಗಳಿಂದ ನಡೆದ ಹೋರಾಟದಲ್ಲಿ ಸಾಕಷ್ಟು ಭಾರತೀಯರು ಬಲಿದಾನ ಮಾಡಿದ್ದಾರೆ. 20ನೇ ಶತಮಾನದ ಕೊನೆಯ ದಶಕದಲ್ಲಿ ಅಯೋಧ್ಯೆ ಆಂದೋಲನ ಉತ್ತುಂಗಕ್ಕೇರಿತ್ತು. ವಿಶ್ವ ಹಿಂದೂ ಪರಿಷದ್‌ನ ಅಂದಿನ ಅಧ್ಯಕ್ಷ ಅಶೋಕ್‌ ಸಿಂಘಾಲ್‌, ಬಿಜೆಪಿ ಹಿರಿಯ ನಾಯಕ ಎಲ್‌.ಕೆ. ಅಡ್ವಾಣಿ ಸೇರಿದಂತೆ ಸಂಘ ಪರಿವಾರದ ಹಿರಿಯ ಧುರೀಣರು ಆಂದೋಲನವನ್ನು ಮುನ್ನಡೆಸಿದರು ಎಂದು ಸ್ಮರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next