Advertisement

ಅಯೋಧ್ಯೆ: ದೇಗುಲ ಕೆಲಸ ಶೇ.50ರಷ್ಟು ಪೂರ್ತಿ

09:30 AM Nov 13, 2018 | Harsha Rao |

ಅಯೋಧ್ಯೆ/ಹೊಸದಿಲ್ಲಿ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗಬೇಕು ಎಂಬ ಒತ್ತಾಯ ಹೆಚ್ಚುತ್ತಿದೆ. ಅದಕ್ಕೆ ಪೂರಕವಾಗಿ ಕರಸವೇಕ ಪುರಂನಲ್ಲಿರುವ ರಾಮ ಜನ್ಮಭೂಮಿ ನ್ಯಾಸ್‌ನ ಉಸ್ತುವಾರಿಯಲ್ಲಿರುವ ಕೆಲಸದ ಸ್ಥಳದಲ್ಲಿ ಮಂದಿರ ನಿರ್ಮಾಣಕ್ಕೆ ಬೇಕಾಗಿರುವ ಶೇ.50ರಷ್ಟು ಕೆಲಸಗಳು ಪೂರ್ತಿಯಾಗಿವೆ. ಈಗಾಗಲೇ ಒಂದು ಹಂತ ತಲುಪಿರುವ ರಾಮ ಮಂದಿರದ ಮಾದರಿಯನ್ನು ಮರದಿಂದ ಕೆತ್ತಲಾಗಿದೆ. ಅವುಗಳನ್ನು ಗಾಜಿನ ಆವರಣದಲ್ಲಿ ಸಂರಕ್ಷಿಸಿ ಇರಿಸಲಾಗಿದೆ. ದೇಶದ ವಿವಿಧ ಭಾಗಗಳಿಂದ ಬರುತ್ತಿರುವ ಕುತೂಹಲಿಗರು ರಾಮ ಮಂದಿರ ನಿರ್ಮಾಣಕ್ಕೆ ಸಂಬಂಧಿಸಿದ ಕೆಲಸ ಎಷ್ಟು ಪ್ರಮಾಣದಲ್ಲಿ ಮುಗಿದಿದೆ ಎಂಬ ಬಗ್ಗೆ ಸ್ಥಳೀಯ ಪ್ರವಾಸಿ ಮಾರ್ಗದರ್ಶಕರ ಮೂಲಕ ಕರ ಸೇವಕಪುರಂಗೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ. 

Advertisement

ಕೆಲಸದ ಸ್ಥಳದ ಉಸ್ತುವಾರಿಯಾಗಿರುವ ಅನ್ನು ಭಾಯಿ ಸೋಮ್‌ಪುರ (78) ಮಾತನಾಡಿ, “ದೇಗುಲಕ್ಕೆ ಅಗತ್ಯವಾಗಿರುವ ದೊಡ್ಡ ಕಲ್ಲುಗಳ ಕೆತ್ತನೆ ಪೂರ್ತಿಯಾಗಿದೆ. ಅದನ್ನು ಆಕರ್ಷಕವಾಗಿ ಜೋಡಿಸಿ ಇರಿಸಲಾಗಿದೆ. ಯಾವಾಗ ದೇಗುಲ ನಿರ್ಮಾಣಕ್ಕೆ ಅವಕಾಶ ಸಿಗುತ್ತದೆಯೋ ಆ ಕ್ಷಣಕ್ಕೆ ಅದನ್ನು ಸ್ಥಳಕ್ಕೆ ಸಾಗಿಸಿ ಕೂಡಲೇ ಜೋಡಿಸಿದರೆ ಸಾಕು’ ಎಂದು ಹೇಳಿದ್ದಾರೆ. ಶೇ.50ರಷ್ಟು ಕೆಲಸಗಳು ಪೂರ್ತಿಯಾಗಿವೆ. ಅಂದರೆ ದೇಗುಲದ ಮೊದಲ ಮಹಡಿಯವರೆಗೆ ನಿರ್ಮಾಣಕ್ಕೆ ಬೇಕಾಗಿರುವ ಕೆಲಸಗಳು ಪೂರ್ತಿಯಾಗಿವೆ ಎಂದಿದ್ದಾರೆ. ಅಯೋಧ್ಯೆಯ ಜಮೀನು ಮಾಲೀಕತ್ವಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟಲ್ಲಿ ಹಿಂದೂಗಳ ಪರವಾಗಿಯೇ ತೀರ್ಪು ಬರಲಿದೆ ಎಂಬ ವಿಶ್ವಾಸವನ್ನೂ ಸೋಮ್‌ಪುರ ಹೊಂದಿದ್ದಾರೆ. 

ದೇಗುಲ ಹೇಗಿರಲಿದೆ?: ನಿರ್ಮಾಣವಾಗಲಿರುವ ರಾಮ ಮಂದಿರದ ವಿವರಣೆ ನೀಡಿರುವ ಅವರು ಕೆಲಸ ಪೂರ್ತಿಯಾದ ಬಳಿಕ ಅದರ ಉದ್ದ 268 ಅಡಿ, 140 ಅಡಿ ಅಗಲ, 128 ಅಡಿ ಎತ್ತರ, ಮೇಲ್ಭಾಗದಲ್ಲಿ ಗೋಪುರವನ್ನು ಹೊಂದಲಿದೆ. 212 ಕಂಬಗಳು ಇರಲಿವೆ ಎಂದಿದ್ದಾರೆ. ಪ್ರತಿ ಮಹಡಿಯಲ್ಲಿ 106 ಕಂಬಗಳು ಇರಲಿದ್ದು, ಪ್ರತಿಯೊಂದರಲ್ಲಿಯೂ 16 ಮೂರ್ತಿಗಳು ಕೆತ್ತಲಾಗಿದೆ. ಅದಕ್ಕೆ ಬೇಕಾಗಿರುವ ವೆಚ್ಚವನ್ನು ವಂತಿಗೆಯಿಂದ ಸಂಗ್ರಹಿಸಲಾಗಿದೆ ಎಂದಿದ್ದಾರೆ. ಸದ್ಯ 150 ಮಂದಿ  ಬೆಳಗ್ಗೆ 7 ರಿಂದ ಸಂಜೆ 5ರ ವರೆಗೆ ಕೆಲಸ ಮಾಡುತ್ತಿದ್ದಾರೆ ಎಂದರು.

ಐದು ವರ್ಷ ಬೇಕು: ದೇಗುಲ ನಿರ್ಮಾಣಕ್ಕೆ ಒಮ್ಮೆ ಭೂಮಿ ಪೂಜೆ ನೆರವೇರಿದರೆ, 4-5 ವರ್ಷಗಳಲ್ಲಿ ಕೆಲಸ ಪೂರ್ತಿಯಾಗಲಿದೆ. ಮತ್ತಿನ ಮಹಡಿಯ ಕೆಲಸವನ್ನು ಸ್ಥಳದಲ್ಲಿಯೇ ಮುಂದುವರಿಸ ಬಹುದಾಗಿದೆ ಎಂದು ಅವರು ಹೇಳಿದ್ದಾರೆ. ರಾಜ ಸ್ಥಾನದ ಬನ್ಸಿ ಪಹ್ರಾಪುರ್‌ನಿಂದ ಗ್ರಾನೈಟ್‌ ಶಿಲೆಗಳನ್ನು ತರಲಾಗಿದ್ದು, ಅದರಲ್ಲಿ “ಶ್ರೀರಾಮ್‌’ ಎಂದು ಕೆತ್ತಲಾಗಿದೆ. ಅದನ್ನು ಬಾಗಿಲುಗಳ ಫ್ರೆàಮ್‌ಗಳಲ್ಲಿ ಬಳಸಲಾಗುತ್ತದೆ ಎಂದಿದ್ದಾರೆ. ಆಗ್ರಾ ಮತ್ತು ಪಿಂದ್ವಾರ ಎಂಬಲ್ಲಿ ಕೆಲಸಗಳು ನಡೆಯುತ್ತಿದ್ದದ್ದು, ಈಗ ಸ್ಥಗಿತವಾಗಿದೆ ಎಂದಿದ್ದಾರೆ. ಕರಸೇವಕಪುರಂನಲ್ಲಿ ಕೆತ್ತನೆ ಕೆಲಸದ ಜತೆಗೆ “ಸೀತಾ ರಾಮ್‌’ ಎಂಬ ಘೋಷಣೆ 1990ರಿಂದ ನಿರಂತರವಾಗಿ ನಡೆಯುತ್ತಿದೆ ಎಂದಿದ್ದಾರೆ.

ಜನವರಿಯಲ್ಲೇ ಕೇಸು ವಿಚಾರಣೆ : ಸುಪ್ರೀಂ
ವಿವಾದಿತ ಜಮೀನು ಯಾರಿಗೆ ಸೇರಿದ್ದು ಎಂಬ ಬಗ್ಗೆ ಶೀಘ್ರವೇ ವಿಚಾರಣೆ ನಡೆಸ ಬೇಕು ಎಂದು ಕೋರಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಸೋಮವಾರ ಸುಪ್ರೀಂಕೋರ್ಟ್‌ ತಿರಸ್ಕರಿಸಿದೆ. ಸಿಜೆಐ ರಂಜನ್‌ ಗೊಗೊಯ್‌ ಮತ್ತು ನ್ಯಾ| ಎಸ್‌.ಕೆ.ಕೌಲ್‌ ಅವರನ್ನೊಳಗೊಂಡ ನ್ಯಾಯಪೀಠ “ಸೂಕ್ತ ನ್ಯಾಯಪೀಠ ಜನವರಿಯಲ್ಲಿ ಈ ಬಗ್ಗೆ ವಿಚಾರಣೆ ನಡೆಸಲಿದೆ. ಈ ಬಗ್ಗೆ ನಾವು ಈಗಾಗಲೇ ಆದೇಶ ನೀಡಿದ್ದೇವೆ. ಹೀಗಾಗಿ, ಈ ಅರ್ಜಿಯನ್ನು ವಜಾಗೊಳಿಸಲಾಗಿದೆ’ ಎಂದು ಹೇಳಿತು. 

Advertisement
Advertisement

Udayavani is now on Telegram. Click here to join our channel and stay updated with the latest news.

Next