Advertisement

‘ದೂರದರ್ಶನ’ದಲ್ಲಿ ‘ಆಯಾನಾ’ ಪಯಣ; ಪೃಥ್ವಿ ಅಂಬರ್‌ ನಟನೆಯ ಚಿತ್ರ

03:38 PM Jul 03, 2022 | Team Udayavani |

“ದಿಯಾ’ ಸಿನಿಮಾ ಖ್ಯಾತಿಯ ಪೃಥ್ವಿ ಅಂಬರ್‌ ಈಗ “ದೂರದರ್ಶನ’ ಹೊತ್ತು ಬರುತ್ತಿದ್ದಾರೆ. ಇತ್ತೀಚೆಗಷ್ಟೇ ಸಿನಿಮಾದ ಟೈಟಲ್‌ ಟೀಸರ್‌ ಬಿಡುಗಡೆಯಾಗಿದ್ದು, ಸಾಕಷ್ಟು ಸದ್ದು ಮಾಡಿದೆ. ಇದೀಗ ದೂರದರ್ಶನದ ನಾಯಕಿಯ ಪಾತ್ರವನ್ನು ಚಿತ್ರತಂಡ ರಿವೀಲ್‌ ಮಾಡಿದೆ.

Advertisement

ಈ ಹಿಂದೆ “ಇಲ್ಲಿ ಇರಲಾರೆ ಅಲ್ಲಿಗೆ ಹೋಗಲಾರೆ’ ಎಂಬ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಪ್ರವೇಶಿಸಿದ್ದ ಆಯಾನಾ ದೂರದರ್ಶನ ಚಿತ್ರದಲ್ಲಿ ನಾಯಕಿಯಾಗಿ ಪೃಥ್ವಿ ಅಂಬರ್‌ಗೆ ಜೋಡಿಯಾಗಿ ನಟಿಸಿದ್ದಾರೆ.

“ದೂರದರ್ಶನ’ದ ನಿರ್ದೇಶಕ ಸುಕೇಶ್‌ ಶೆಟ್ಟಿ ಮಾತನಾಡಿ, “ನಮ್ಮ ಸಿನಿಮಾಗೆ ನಾಯಕಿ ಪಾತ್ರಕ್ಕೆ ಆಡಿಷನ್‌ ಕರೆಯಲಾಗಿತ್ತು. 30 ರಿಂದ 40 ಮಂದಿ ಪಾಲ್ಗೊಂಡಿದ್ದ ಆಡಿಷನ್‌ ನಲ್ಲಿ ಆಯಾನಾ ಆಯ್ಕೆಯಾದರು. ಆಯಾನಾ ಮೈತ್ರಿ ಎಂಬ ಪಾತ್ರದಲ್ಲಿ ಬಣ್ಣ ಹಚ್ಚಿದ್ದು, ರಿಕ್ಷಾ ಡ್ರೈವರ್‌ ಮಗಳಾಗಿ, ಅಪ್ಪನ ಆಸೆಯಲ್ಲಿ ಬೆಳೆಯುವ ಹುಡುಗಿ ಪ್ರೀತಿಯಲ್ಲಿ ಬಿದ್ದಾಗ ಮುಂದೇನು ಆಗುತ್ತೇ ಎಂಬ ತಿರುವು ನೀಡುವ ಪಾತ್ರದಲ್ಲಿ ನಟಿಸಿದ್ದಾರೆ’ ಎಂದರು.

ಇದನ್ನೂ ಓದಿ:ನೆಗೆಟಿವ್ ಶೇಡ್ ನಲ್ಲಿ ಪಾಸಿಟಿವ್ ಮೆಸೇಜ್: ‘ವೆಡ್ಡಿಂಗ್‌ ಗಿಫ್ಟ್’ ಮೇಲೆ ಸೋನು ಗೌಡ ನಿರೀಕ್ಷೆ

ಉಗ್ರಂ ಮಂಜು, ಸುಂದರ್‌ ವೀಣಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಉಳಿದಂತೆ ಹರಿಣಿ, ದೀಪಕ್‌ ರೈ ಪಾಣಾಜೆ, ರಘು ರಮಣಕೊಪ್ಪ, ಹುಲಿ ಕಾರ್ತಿಕ್‌, ಸೂರಜ್‌ ಮಂಗಳೂರು, ಸೂರ್ಯ ಕುಂದಾಪುರ ಸೇರಿದಂತೆ ಮತ್ತಿತರ ತಾರಾಗಣ ಚಿತ್ರದಲ್ಲಿದೆ.

Advertisement

ಸಂಭಾಷಣೆ ಹಾಗೂ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿ, ಹಲವು ಕಿರುಚಿತ್ರಗಳನ್ನು ನಿರ್ದೇಶನ ಮಾಡಿರುವ ಸುಕೇಶ್‌ ಶೆಟ್ಟಿ ಮೊದಲ ಬಾರಿಗೆ “ದೂರದರ್ಶನ’ ಸಿನಿಮಾ ಮೂಲಕ ಹಿರಿ ಪರದೆಗೆ ನಿರ್ದೇಶಕರಾಗಿ ಬಡ್ತಿ ಪಡೆದಿದ್ದಾರೆ. ನೈಜ ಘಟನೆ ಹಾಗೂ ಕಾಲ್ಪನಿಕತೆಯ ಕಥಾ ಹಂದರವನ್ನು ಹೊಂದಿರುವ ದೂರದರ್ಶನ ಚಿತ್ರದ ಚಿತ್ರೀಕರಣ ಮಂಗಳೂರು, ಪುತ್ತೂರು ಆರ್ಲಪದವಿನಲ್ಲಿ 38 ದಿನಗಳ ಕಾಲ ನಡೆದಿದೆ.

“ವಿಎಸ್‌ ಮೀಡಿಯಾ ಎಂರ್ಟಪ್ರೈಸಸ್‌’ ಬ್ಯಾನರ್‌ನಡಿ ರಾಜೇಶ್‌ ಭಟ್‌ ಸಿನಿಮಾಗೆ ಬಂಡವಾಳ ಹೂಡಿದ್ದು, ಎಕ್ಸಿಕ್ಯೂಟಿವ್‌ ಪ್ರೊಡ್ನೂಸರ್‌ ಜವಾಬ್ದಾರಿಯನ್ನು ಉಗ್ರಂ ಮಂಜು ಹೊತ್ತಿದ್ದಾರೆ. ವಾಸುಕಿ ವೈಭವ್‌ ಸಂಗೀತ ಸಂಯೋಜನೆ, ಅರುಣ್‌ ಸುರೇಶ್‌ ಛಾಯಾ ಗ್ರಹಣ, ನಂದೀಶ್‌ ಟಿ ಜಿ ಸಂಭಾಷಣೆ, ಪ್ರದೀಪ್‌ ಆರ್‌ ರಾವ್‌ ಸಂಕಲನವಿದೆ.

Advertisement

Udayavani is now on Telegram. Click here to join our channel and stay updated with the latest news.

Next