Advertisement

ಪ್ರಧಾನಿ ನರೇಂದ್ರ ಮೋದಿ ಅತ್ಯಂತ ಪ್ರಭಾವಶಾಲಿ ವ್ಯಕ್ತಿ

09:08 PM Mar 06, 2023 | Team Udayavani |

ನವದೆಹಲಿ: ನರೇಂದ್ರ ಮೋದಿ ಅವರು ಪ್ರಧಾನಿಯಾಗಿ 9 ವರ್ಷಗಳು ಪೂರೈಸುತ್ತಾ ಬಂದರೂ ಈಗಲೂ ಅವರ ಜನಪ್ರಿಯತೆ ವೃದ್ಧಿಸಿದೆ. ” ಆ್ಯಕ್ಸಿಸ್‌ ಮೈ ಇಂಡಿಯಾ ಸಿಎಸ್‌ಐ’ ಸಮೀಕ್ಷೆ ನಡೆಸಿದ ಪ್ರಕಾರ ದೇಶದಲ್ಲಿ ಶೇ.72ರಷ್ಟು ಜನರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಅತ್ಯಂತ ಪ್ರಭಾವಶಾಲಿ ವ್ಯಕ್ತಿ ಎಂಬ ಭಾವನೆಯಿದೆ.

Advertisement

ಕೊರೊನಾ ನಿರ್ವಹಣೆ, ಮೂಲಸೌಕರ್ಯ ಅಭಿವೃದ್ಧಿ ಮತ್ತು ಕಲ್ಯಾಣ ಯೋಜನೆಗಳು ಕೇಂದ್ರ ಸರ್ಕಾರದ ದೊಡ್ಡ ಸಾಧನೆಗಳಾಗಿವೆ ಎಂದು ಸಮೀಕ್ಷೆಯಲ್ಲಿ ಭಾಗವಹಿಸಿದ್ದ ಜನರು ಅಭಿಪ್ರಾಯಪಟ್ಟಿದ್ದಾರೆ.

ದೇಶದ 10,124 ನಾಗರಿಕರನ್ನು ಸಮೀಕ್ಷೆಗೆ ಒಳಪಡಿಸಲಾಗಿದ್ದು, ಈ ಪೈಕಿ ಶೇ.65ರಷ್ಟು ಗ್ರಾಮೀಣ ಭಾಗದವರಾಗಿದ್ದು, ಶೇ.35ರಷ್ಟು ನಗರ ಭಾಗದವರಾಗಿದ್ದಾರೆ.

2023ರ ಕೇಂದ್ರ ಬಜೆಟ್‌ ತೃಪ್ತಿಕರವಾಗಿದೆ ಎಂಬುದು ಶೇ.52ರಷ್ಟು ಜನರ ಅಭಿಪ್ರಾಯವಾಗಿದೆ. ಇನ್ನೊಂದೆಡೆ, ಒಟ್ಟಾರೆ ಮನೆಯ ಖರ್ಚು ಶೇ.58ಕ್ಕೆ ಏರಿಕೆಯಾಗಿದೆ. ಅದೇ ರಿತಿ ಅಗತ್ಯ ವಸ್ತುಗಳ ಬಳಕೆಯು ಶೇ.36ಕ್ಕೆ ಹಾಗೂ ಆರೋಗ್ಯ ಸಂಬಂಧಿತ ವಸ್ತುಗಳ ಬಳಕೆ ಶೇ.35ಕ್ಕೆ ಏರಿಕೆಯಾಗಿದೆ ಎಂದು ಸಮೀಕ್ಷೆ ಹೇಳಿದೆ. ಶೇ.37ರಷ್ಟು ಮಂದಿ ಒಂದು ಗಂಟೆಗಳಿಗಿಂತ ಹೆಚ್ಚು ಸಮಯ ಓಟಿಟಿಯಲ್ಲಿ ಕಳೆಯುತ್ತಿ¨ªಾರೆ ಎಂದು ಸಮೀಕ್ಷೆ ತಿಳಿಸಿದೆ.

ಸೆನ್ಸೆಕ್ಸ್‌ 70,000 ದಾಟಲಿದೆ
ಮುಂದಿನ ಮೂರು ತಿಂಗಳಲ್ಲಿ ಸೆನ್ಸೆಕ್ಸ್‌ 70,000 ದಾಟಲಿದೆ ಎಂದು ಸರ್ವೆಯಲ್ಲಿ ಭಾಗವಹಿಸಿದ್ದ ಶೇ.43ರಷ್ಟು ಮಂದಿ ಸಕಾರಾತ್ಮಕ ಆಶಯ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಶೇ.25ರಷ್ಟು ಮಂದಿ ಸೆನ್ಸೆಕ್ಸ್‌ 55,000ದಿಂದ 65,000 ಒಳಗೆ ಉಳಿಯಲಿದೆ ಎಂದು ಅಂದಾಜಿಸಿದ್ದಾರೆ. ಆದರೆ ಶೇ.15ರಷ್ಟು ಮಂದಿ ಸೆನ್ಸೆಕ್ಸ್‌ 50,000ಕ್ಕಿಂತ ಕೆಳಕ್ಕೆ ಇಳಿಯಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ ಎಂದು ಸಮೀಕ್ಷೆ ಹೇಳಿದೆ.

Advertisement

* 2023ರ ಕೇಂದ್ರ ಬಜೆಟ್‌ ತೃಪ್ತಿಕರವಾಗಿದೆ ಎಂಬುದು ಶೇ.52ರಷ್ಟು ಜನರ ಅಭಿಮತ
* ಒಟ್ಟಾರೆ ಮನೆಯ ಖರ್ಚು ಶೇ.58ಕ್ಕೆ ಏರಿಕೆ
* ಅಗತ್ಯ ವಸ್ತುಗಳ ಬಳಕೆಯು ಶೇ.36ಕ್ಕೆ ಏರಿಕೆ
* ಆರೋಗ್ಯ ಸಂಬಂಧಿತ ವಸ್ತುಗಳ ಬಳಕೆಯು ಶೇ.35ಕ್ಕೆ ಏರಿಕೆ

Advertisement

Udayavani is now on Telegram. Click here to join our channel and stay updated with the latest news.

Next