Advertisement

ಲಂಕಾ ಎದುರಿನ 3ನೇ ಟೆಸ್ಟ್‌: ಜಡೇಜ ಸ್ಥಾನಕ್ಕೆ ಅಕ್ಷರ್‌ ಪಟೇಲ್‌: ವರದಿ

12:07 PM Aug 09, 2017 | Team Udayavani |

ಹೊಸದಿಲ್ಲಿ : ಆತಿಥೇಯ ಲಂಕೆಯ ಎದುರಿನ ಮೂರನೇ ಹಾಗೂ ಅಂತಿಮ ಟೆಸ್ಟ್‌ ಪಂದ್ಯದಲ್ಲಿ, ಅಮಾನತಾಗಿರುವ ರವೀಂದ್ರ ಜಡೇಜ ಅವರ ಸ್ಥಾನಕ್ಕೆ ಅಕ್ಷರ್‌ ಪಟೇಲ್‌ ಭರ್ತಿಯಾಗುವ ಸಾಧ್ಯತೆ ಇದೆ.

Advertisement

ಮೂರು ಪಂದ್ಯಗಳ ಹಾಲಿ ಟೆಸ್ಟ್‌ ಸರಣಿಯನ್ನು ಭಾರತ 2-0 ಅಂಕಗಳ ನಿರ್ಣಾಯಕ ಅಂತರದಿಂದ ಈಗಾಗಲೇ ಜಯಿಸಿರುವ ಕಾರಣ, ವಿಶ್ವದ ನಂಬರ್‌ ಒನ್‌ ಆಲ್‌ ರೌಂಡರ್‌ ಎನಿಸಿರುವ ರವೀಂದ್ರ ಜಡೇಜ ಅವರ ಅಮಾನತಿನ ಬಗ್ಗೆ ನಾಯಕ ವಿರಾಟ್‌ ಕೊಹ್ಲಿಯಾಗಲೀ, ಕೋಚ್‌ ರವಿ ಶಾಸ್ತ್ರೀ ಯಾಗಲೀ ತಲೆ ಕೆಡಿಸಿಕೊಂಡಿಲ್ಲ. 

ಜಡೇಜ ಅವರ ಸ್ಥಾನವನ್ನು  ತಂಡದಲ್ಲಿ ಮೀಸಲು ಆಟಗಾರನಾಗಿರುವ ಚೈನಾ ಮ್ಯಾನ್‌ ಕುಲದೀಪ್‌ ಯಾದವ್‌ ಅವರು ತನ್ನಿಂತಾನೇ ತುಂಬುವರಾದರೂ ಅಕ್ಷರ್‌ ಪಟೇಲ್‌ಗೆ ಸ್ಥಾನ ಸಿಗಲಿದೆ ಎನ್ನಲಾಗಿದೆ. 

ಅಕ್ಷರ್‌ ಪಟೇಲ್‌ ಇದ್ದ ಇಂಡಿಯಾ ಎ ತಂಡ ಈಚೆಗೆ ತ್ರಿಕೋಣ ಸರಣಿಯಲ್ಲಿ ದಕ್ಷಿಣ ಆಫ್ರಿಕವನ್ನು ಸೋಲಿಸಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next