Advertisement

ವನ್ಯಪ್ರಾಣಿಗಳ ಸಂರಕ್ಷಣೆಗೆ ಎಲ್ಲರ ಸಹಕಾರ ಅಗತ್ಯ

03:16 PM Nov 21, 2020 | Suhan S |

ಮಂಡ್ಯ: ಪ್ರಸ್ತುತ ದಿನಗಳಲ್ಲಿ ವನ್ಯ ಜೀವಿಗಳುನಾಡಿನತ್ತ ಬರುವಂತಹ ಸನ್ನಿವೇಶಗಳನ್ನು ಮನುಷ್ಯ ಸೃಷ್ಟಿಸಿದ್ದಾನೆ. ಆದ್ದರಿಂದ ವನ್ಯ ಪ್ರಾಣಿಗಳ ಸಂರಕ್ಷಣೆಗೆ ಎಲ್ಲರೂ ಸಹಕಾರ ನೀಡಬೇಕು ಎಂದು ಮಿಮ್ಸ್‌ ನಿರ್ದೇಶಕ ಡಾ.ಎಂ.ಆರ್‌.ಹರೀಶ್‌ ಹೇಳಿದರು.

Advertisement

ನಗರದ ರೈತ ಸಭಾಂಗಣ ಆವರಣದಲ್ಲಿರುವ ನಿತ್ಯ ಸಚಿವ ಕೆ.ವಿ.ಶಂಕರಗೌಡ ಪ್ರತಿಮೆ ಬಳಿ ರೋಟರಿ3190ರ ಸಹಕಾರದಲ್ಲಿ ಅಂತಾರಾಷ್ಟ್ರೀಯ ಫೆಲೋಶಿಪ್‌ ಆಫ್ ಸೈಕಲಿಂಗ್‌ ರೋಟರಿಯನ್‌ (ಐಎಪ್‌ಸಿಆರ್‌) ಸದಸ್ಯರಿಂದ ವನ್ಯಜೀವಿ ಸಂರಕ್ಷಣೆ ಹಾಗೂ ಕೋವಿಡ್‌-19ರ ಬಗ್ಗೆ ಜಾಗೃತಿ ಮೂಡಿಸಲು ಮಂಡ್ಯ ನಗರದಿಂದ ಬಂಡೀಪುರದವರೆಗೆ ಸೈಕಲ್‌ ಜಾಥಾಗೆ ಚಾಲನೆ ನೀಡಿ ಮಾತನಾಡಿದರು.

ದುರಾಸೆಗೆ ಕಾಡು ನಾಶ: ಕಾಡಿನ ಪ್ರಾಣಿಗಳು ನಾಡಿನತ್ತ ಮುಖ ಮಾಡಿವೆ. ಕಾಡಿನಲ್ಲಿ ಹಸಿರು, ನೀರು, ಆಹಾರ ಸಿಗದಂತೆ ಮನುಷ್ಯರೇ ಸೃಷ್ಟಿಸಿದ್ದಾರೆ. ಅತಿ ದುರಾಸೆಗೆ ಒಳಗಾಗಿರುವ ಮನುಷ್ಯ ಕಾಡುಗಳನ್ನು ಆವರಿಸುತ್ತಿರುವುದರಿಂದ ಪ್ರಾಣಿಗಳು ವಾಸಿಸಲು ಎಲ್ಲಿಗೆ ಹೋಗಲು ಸಾಧ್ಯ. ಆದ್ದರಿಂದ ನಾಡಿನತ್ತ ಬರುತ್ತಿವೆ. ವನ್ಯಜೀವಿಗಳ ಸಂರಕ್ಷಣೆ ನಮ್ಮೆಲ್ಲರ ಕರ್ತವ್ಯವಾಗಿದೆ. ಅವುಗಳ ನೆಮ್ಮದಿಗೆಭಂಗವನ್ನುಂಟು ಮಾಡಿದರೆ, ಅನಾಹುತಗಳನ್ನು ಎದುರಿಸಬೇಕಾಗುತ್ತದೆ. ಇದು ಮನುಷ್ಯ ಮಾಡಿ ಕೊಂಡಿರುವ ಅವಘಡವಾಗಿದೆ. ಇನ್ನಾದರೂ ಜಾಗೃತಿ ಮೂಡಿಸಿಕೊಂಡು ಎಚ್ಚೆತ್ತುಕೊಳ್ಳಬೇಕಿದೆ ಎಂದರು.

ಜನರಲ್ಲಿ ಜಾಗೃತಿ ಅಗತ್ಯ: ಜನರಲ್ಲಿ ಜಾಗೃತಿ ಮಾಡಿಸುವುದು ಅವಶ್ಯಕವಿದೆ. ಕೋವಿಡ್‌-19ರ ನಿಯಂತ್ರಣಕ್ಕಾಗಿ ರೋಟರಿ ಸಂಸ್ಥೆಯು ತನ್ನದೇ ಆದ ಸೇವೆ ಸಲ್ಲಿಸುತ್ತಿದೆ. ಮಾಸ್ಕ್, ವಿವಿ ಪ್ಯಾಟ್‌ಗಳನ್ನು ಮಿಮ್ಸ್‌ಗೆ ನೀಡಿದೆ. ಸಾರ್ವಜನಿಕರಿಗೂ ಜಾಗೃತಿ ಮೂಡಿಸುತ್ತಿರುವುದು ಶ್ಲಾಘನೀಯ ಎಂದರು.

ಇದನ್ನೂ ಓದಿ : ಬಿ.ಎಲ್. ಸಂತೋಷರನ್ನು ರಮೇಶ್ ಜಾರಕಿಹೊಳಿ ಭೇಟಿ ಆಗಿದ್ದು ಅಪರಾಧವಲ್ಲ: ಸಚಿವ ಸುಧಾಕರ್

Advertisement

ಸರ್ಕಾರಕ್ಕೆ ನೆರವಾಗಿ: ಐಎಫ್ಸಿಆರ್‌ ಅಧ್ಯಕ್ಷ ಗಣಪತಿ ಮಾತನಾಡಿ, ವನ್ಯ ಪ್ರಾಣಿಗಳ ರಕ್ಷಣೆಗಾಗಿ ಸರ್ಕಾರಕ್ಕೆ ಸಂಘ ಸಂಸ್ಥೆಗಳ ನೆರವು ಅಗತ್ಯವಿದೆ. ಕಾಡು ಪ್ರಾಣಿಗಳು ನಾಡಿಗೆ ಬರದಂತೆ ವೈಜ್ಞಾನಿಕ ರೂಪುರೇಷಗಳನ್ನು ಸಿದ್ಧಪಡಿಸಿ ಕಾರ್ಯರೂಪಕ್ಕೆ ತರಬೇಕು. ಇದಕ್ಕೆ ಎಲ್ಲರ ಸಹಕಾರ ಬೇಕು ಎಂದು ತಿಳಿಸಿದರು.

ರೋಟರಿ ಸಂಸ್ಥೆ ಅಧ್ಯಕ್ಷ ಜಗದೀಶ್‌, ವಿನ್ಸೆಂಟ್‌, ಐಎಫ್ಸಿಆರ್‌ ಅಧ್ಯಕ್ಷ ಗಣಪತಿ, ಪ್ರದೀಪ್‌, ಶುಭಾ, ಸೋಮಶೇಖರ್‌, ಅರ್ಚನಾ, ಶ್ರೀಪಾದ್‌, ಶ್ರೀಕುಮಾರ್‌ ಅವರು ಬೈಸಿಕಲ್‌ ಮೂಲಕ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಬಂಡೀಪುರದತ್ತ ತೆರಳಿದರು.

ರೋಟರಿ ಅಧ್ಯಕ್ಷ ಲೋಕೇಶ್‌, ಮಾಜಿ ಅಧ್ಯಕ್ಷ ರಮೇಶ್‌, ಕಾರ್ಯದರ್ಶಿ ಪ್ರತೀಕ್‌, ನಿವೃತ್ತ ದೈಹಿಕ ತರಬೇತಿದಾರ ಶಿವಲಿಂಗಯ್ಯ, ರೋಟರಿ ಪದಾಧಿಕಾರಿಗಳಾದ ಮಹೇಂದ್ರಬಾಬು, ಆನಂತ ಕುಮಾರ್‌, ಶಂಕರನಾರಾಯಣ ಶಾಸ್ತ್ರೀ, ಸೋಮಶೇಖರ್‌, ಸುರಾಜ್‌, ಲಕ್ಷ್ಮೀ ನಾರಾಯಣ್‌ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next