Advertisement

ಬದು ನಿರ್ಮಿಸಿಕೊಳ್ಳಲು ಅರಿವು ಮೂಡಿಸಿ: ಅನಿರುದ್ಧ್

06:36 AM May 30, 2020 | Lakshmi GovindaRaj |

ಶಿಡ್ಲಘಟ್ಟ: ಉದ್ಯೋಗ ಖಾತ್ರಿ ಯೋಜನೆಯಡಿ ರೈತರು ಬದುಗಳನ್ನು ನಿರ್ಮಿಸಿಕೊಳ್ಳಲು ಅರಿವು ಮತ್ತು ಜಾಗೃತಿ ಮೂಡಿಸಬೇಕೆಂದು ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯ ಆಯುಕ್ತ ಅನಿರುದ್ಧ್ ಶ್ರವಣ್‌  ಹೇಳಿದರು. ತಾಲೂಕಿನ ತಾತಹಳ್ಳಿ ಗ್ರಾಮದಲ್ಲಿ ತಾಲೂಕು ಪಂಚಾ ಯಿತಿಗೆ ಸೇರಿದ ಜಮೀನಿನಲ್ಲಿ ನಿರ್ಮಿಸಿರುವ ಬದುಗಳು ಮತ್ತು ಕೃಷಿ ಹೊಂಡ ಕಾಮಗಾರಿಯನ್ನು ಅನಿರೀಕ್ಷಿತ ವಾಗಿ ವೀಕ್ಷಿಸಿ ಮಾತನಾಡಿದರು.

Advertisement

ನರೇಗಾ ಯೋಜನೆ ಗ್ರಾಮೀಣಾಭಿವೃದ್ಧಿಗೆ ವರದಾನವಾಗಿದ್ದು,  ನಾಗರಿಕರು ಈ ಯೋಜನೆಯನ್ನು ಸದುಪಯೋಗ ಮಾಡಿಕೊಂಡು ಗ್ರಾಮಾಭಿವೃದ್ಧಿಗೆ ಕೈಜೋಡಿ ಸಬೇಕೆಂ ದರು. ರೈತರು ಸಹ ತಮ್ಮ ತಮ್ಮ ತೋಟಗಳಲ್ಲಿ ಬದು ಗಳನ್ನು  ನಿರ್ಮಿಸಿಕೊಂಡು ಮಳೆನೀರು ಸಂರಕ್ಷಿಸಿಕೊಂಡು ಅಂರ್ತಜಲಮಟ್ಟ ವೃದ್ಧಿಗೊಳಿಸಲು ಇಲಾಖೆಯೊಂದಿಗೆ ಕೈಜೋಡಿಸಬೇಕೆಂದರು.

ಜಿಪಂ ಸಿಇಒ ಫೌಝೀಯಾ ತರುನ್ನುಮ್‌ ಮಾತನಾಡಿ, ಜಿಲ್ಲೆಯಲ್ಲಿ ಜಲ ಮತ್ತು ಪರಿಸರ ಸಂರಕ್ಷಣೆ  ಮಾಡುವ ವಿಚಾರದಲ್ಲಿ ಚುನಾಯಿತ ಪ್ರತಿನಿಧಿಗಳು ಮತ್ತು ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಜಾಗೃತಿ ಮೂಡಿಸಲು ಕ್ರಮ ಕೈಗೊಳ್ಳಲಾಗಿದೆ. ಅಂರ್ತಜಲಮಟ್ಟ ವೃದ್ಧಿಗೊಳಿಸಲು ಆದ್ಯತೆ ನೀಡಲಾಗಿದೆ ಎಂದರು. ಪರಿಸರ  ದಿನಾಚರಣೆ ಅಂಗವಾಗಿ ತಾತಹಳ್ಳಿ ಗ್ರಾಮದಲ್ಲಿರುವ ತಾಲೂಕು ಪಂಚಾಯಿತಿಯ ಜಮೀನಿನಲ್ಲಿ ಸುಮಾರು 10 ಸಾವಿರ ಗಿಡಗಳನ್ನು ನೆಡಲು ಯೋಜನೆ ರೂಪಿಸಲಾಗಿದೆ.

ಈಗಾಗಲೇ ನರೇಗಾ ಯೋಜನೆಯಡಿ ಬದುಗಳನ್ನು  ನಿರ್ಮಿಸಿಕೊಳ್ಳಲು ಮಾಹಿತಿ ನೀಡಿ ಅರಿವು ಮೂಡಿಸ ಲಾಗಿದೆ. ಯೋಜನೆ ಯಶಸ್ವಿಗೊಳಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.ತಾಪಂ ಇಒ ಶಿವಕುಮಾರ್‌, ನರೇಗಾ ಯೋಜನೆಯ ಸಹಾಯಕ  ನಿರ್ದೇಶಕ  ಚಂದ್ರಪ್ಪ, ಕೃಷಿ ಇಲಾಖೆಯ ಅಧಿಕಾರಿ ಶ್ರೀನಿವಾಸ್‌, ಡಿಸಿಎಫ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next