Advertisement

ಕೋವಿಡ್: ಹಲವೆಡೆ ಜಾಗೃತಿ ಜಾಥಾ

03:45 PM May 16, 2021 | Team Udayavani |

ದೊಡ್ಡಬಳ್ಳಾಪುರ: ಕೋವಿಡ್  ಸೋಂಕುಗ್ರಾಮೀಣ ಪ್ರದೇಶಗಳಲ್ಲಿಯೂಹರಡುತ್ತಿದ್ದು, ರೈತರ ಬದುಕನ್ನು ತೀವ್ರಸಂಕಷ್ಟಕ್ಕೆ ಸಿಲುಕಿದೆ.ಗ್ರಾಮೀಣ ಪ್ರದೇಶಗಳಲ್ಲಿ ಸೋಂಕುಹರಡದಂತೆ ತಡೆಯಲು ರಚಿತವಾಗಿರುವಗ್ರಾಪಂ ಕಾರ್ಯಪಡೆ ಕಾರ್ಯಾರಂಭ ಮಾಡಲಾರಂಭಿಸಿದ್ದು, ಸೋಂಕು ತಡೆಗಟ್ಟಲುಕೈಗೊಳ್ಳಬೇಕಾದ ಮಾರ್ಗೋಪಾಯಗಳಕುರಿತು ಸಭೆ ನಡೆಸಲಾಗುತ್ತಿದೆ.

Advertisement

ಗ್ರಾಮದಲ್ಲಿನಚರಂಡಿಗಳ ಸ್ವತ್ಛತೆ, ಕುಡಿಯುವ ನೀರಿನಕೊಳಾಯಿಗಳ ಸಮೀಪ ಸೇರಿದಂತೆ ಅಗತ್ಯಇರುವ ಕಡೆಗಳಲ್ಲಿ ಸ್ವತ್ಛತೆಗೆ ಪ್ರಥಮ ಆದ್ಯತೆನೀಡಲಾಗಿದ್ದು, ಸದಸ್ಯರು ಹಾಗೂ ಗ್ರಾಪಂಸಿಬ್ಬಂದಿ ಗ್ರಾಮಗಳಲ್ಲಿ ಜಾಗೃತಿ ಪ್ರಚಾರಆಂದೋಲನಗಳನ್ನು ನಡೆಸುತ್ತಿದ್ದಾರೆ.

ಹೋಬಳಿ ಕೇಂದ್ರವಾಗಿರುವ ತೂಬಗೆರೆಗ್ರಾಮದಲ್ಲಿ ಸ್ವತ್ಛತೆ, ಆರೋಗ್ಯದ ಬಗ್ಗೆವಹಿಸಬೇಕಾದ ಕನಿಷ್ಟ್ ಎಚ್ಚರಿಕೆಗಳ ಕುರಿತಂತೆ ಇಡೀ ಗ್ರಾಮದಲ್ಲಿ ಪ್ರಚಾರ ನಡೆಸಲಾಗಿದೆ.ಜನರು ಸಾಧ್ಯವಾದಷ್ಟು ಮನೆಗಳಲ್ಲಿಯೇಇರುವ ಕಡೆಗೆ ಪ್ರಥಮ ಆದ್ಯತೆ ನೀಡುವುದುಅನಿವಾರ್ಯವಾಗಿದೆ ಎಂದು ಗ್ರಾಪಂ ಸದಸ್ಯರವಿಸಿದ್ದಪ್ಪ ತಿಳಿಸಿದರು.ರೈತರು ಸೋಂಕಿಗೆ ಒಳಗಾಗುತ್ತಿರುವುದುಆತಂಕಕಾರಿ ಬೆಳವಣಿಗೆ. ರೈತರು ಅಸ್ವಸ್ಥರಾದರೆ ಜಾನುವಾರುಗಳಿಗೂ ತೊಂದರೆ, ಕೃಷಿ ಚಟುವಟಿಕೆಗೂ ತೊಂದರೆ ಹೀಗಾಗಿಮುಂಜಾಗ್ರತಾ ಕ್ರಮ ಪಾಲಿಸಬೇಕೆಂದುಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next