Advertisement

ಕೋವಿಡ್: ಶಾಸಕರಿಂದ ಜಾಗೃತಿ ಅಭಿಯಾನ

04:49 PM Apr 19, 2021 | Team Udayavani |

ಶಿರಾ: ನಗರ ಸೇರಿ ಹಲವು ಗ್ರಾಮಗಳಲ್ಲಿ ಲಸಿಕೆಅವಶ್ಯಕತೆ ಬಗ್ಗೆ ಶಾಸಕ ಡಾ. ಸಿ.ಎಂ.ರಾಜೇಶ್‌ಗೌಡ ಜನರಲ್ಲಿ ಜಾಗೃತಿ ಮೂಡಿಸಿದರು.ಈ ವೇಳೆ ಮಾತನಾಡಿದ ಅವರು,ಕೋವಿಡ್‌ 2ನೇ ಅಲೆ ಜನರಲ್ಲಿ ಆತಂಕಮೂಡಿಸಿದ್ದು, ಸಾರ್ವಜನಿಕರು ಹೆಚ್ಚು ಜಾಗೃತಿವಹಿಸಬೇಕು.

Advertisement

45 ವರ್ಷ ಮೇಲ್ಪಟ್ಟವರುಸಮೀಪದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆತೆರಳಿ ಕಡ್ಡಾಯವಾಗಿ ಲಸಿಕೆ ಹಾಕಿಸಿಕೊಳ್ಳುವಮೂಲಕ ಕೊರೊನಾ ಸೋಂಕು ನಿಯಂತ್ರಣಕ್ಕೆಸಹಕರಿಸಬೇಕೆಂದು ಮನವಿ ಮಾಡಿದರು.ಮದುವೆ ಸೇರಿದಂತೆ ಇತರೆ ಸಭೆ,ಸಮಾರಂಭಗಳು ಸರಳ ರೀತಿಯಲ್ಲಿನೆರವೇರಿಸಿಕೊಂಡು ಸರ್ಕಾರ ನೀಡುವಂತಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲನೆಮಾಡಬೇಕು.

ದೂರದ ಊರಿಗೆಹೋಗುವುದನ್ನು ಸ್ಪಲ್ಪ ದಿನ ಮುಂದುಡುವುದುಒಳ್ಳೆಯದು. ಮನೆಯಿಂದ ಹೊರಹೋಗುವಾಗ ಕಡ್ಡಾಯವಾಗಿ ಮಾಸ್ಕ್ ಹಾಕಿ,ಮನೆಗೆ ಬಂದರೆ ತಕ್ಷಣ ಸಾಬೂನುನಿಂದ ಕೈತೊಳೆಯಬೇಕು. ಇದರಿಂದ ಸೋಂಕುನಿಯಂತ್ರಣ ಸಾಧ್ಯವಾಗಲಿದೆ ಎಂದರು.ನಿಮ್ಮ ಆರೋಗ್ಯ ಕಾಪಾಡಿಕೊಳ್ಳುವುದುನಿಮ್ಮ ಜವಾಬ್ದಾರಿಯಾಗಿದ್ದು,ನಿರ್ಲಕ್ಷ್ಯವಹಿಸಿದರೆ ಆರೋಗ್ಯದ ಮೇಲೆಗಂಭೀರ ಪರಿಣಾಮ ಬೀರಲಿದೆ. ಸರ್ಕಾರನಿಯಮ ಪಾಲನೆ ಮಾಡಿ ಮುನ್ನೆಚ್ಚರಿಕೆವಹಿಸಿದರೆ ಸೋಂಕು ಹತೋಟಿಗೆ ಬರಲಿದೆಎಂದರು.

Advertisement

Udayavani is now on Telegram. Click here to join our channel and stay updated with the latest news.

Next