ಮಲ್ಪೆ: ಮಲ್ಪೆ ಹನುಮಾನ್ ವಿಠೊಭಾ ಭಜನಾ ಮಂದಿರವು ಕಳೆದ 50 ವರ್ಷಗಳಿಂದ ನಿರಂತರವಾಗಿ ಧಾರ್ಮಿಕ ಕಾರ್ಯಕ್ರಮದ ಜತೆಗೆ ಸಮಾಜಮುಖೀ ಸೇವೆಯಲ್ಲಿ ತೊಡಗಿಕೊಂಡು ಜನಸೇವೆಗೈಯುವ ಹಿನ್ನೆಲೆಯಲ್ಲಿ ಈ ಬಾರಿ ಜಿಲ್ಲಾಡಳಿತ ಮಂದಿರಕ್ಕೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.
ಪ್ರಶಸ್ತಿ ಪಡೆದ ಸಂಭ್ರಮದ ಅಂಗವಾಗಿ ಮಂದಿರದ ಸದಸ್ಯರು ಬುಧವಾರ ನಗರದ ಪ್ರಮುಖ ಮಾರ್ಗದಲ್ಲಿ ವೈಭವದ ಮೆರವಣಿಗೆಯನ್ನು ನಡೆಸಿದರು. ವಿವಿಧ ವಾದ್ಯಘೋಷಗಳು ಸೇರಿದಂತೆ ಜ್ಞಾನಜ್ಯೋತಿ, ಶಿವಪಂಚಾಕ್ಷರಿ, ಬಾಲಕರ ರಾಮ ಭಜನ ಮಂದಿರದ ಮಾತೃ ಮಂಡಳಿಯ ಸದಸ್ಯರು ಪಾಲ್ಗೊಂಡು ಮೆರವಣಿಗೆಗೆ ಮತ್ತಷ್ಟು ಮೆರುಗು ನೀಡಿದರು.
ಉಡುಪಿ ತಾಲೂಕು ಭಜನಾ ಮಂಡಳಿಗಳ ಒಕ್ಕೂಟದ ಉಪಾಧ್ಯಕ್ಷ ಬೋಜರಾಜ್ ಆರ್. ಕಿದಿಯೂರು ಮೆರವಣಿಗೆಗೆ ಚಾಲನೆ ನೀಡಿದರು. ಮುಖ್ಯ ಅತಿಥಿಗಳಾಗಿ ಮಲ್ಪೆ ಮೀನು ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಸಾಧು ಸಾಲ್ಯಾನ್, ಸಾಯಿಕಿಶನ್ ಎಕ್ಸ್‌ಪಾಂನ್ಶನ್ ಆಡಳಿತ ನಿರ್ದೇಶಕ ದೇವದಾಸ್ ಸಾಲ್ಯಾನ್, ಜ್ಞಾನಜ್ಯೋತಿ ಭಜನಾ ಮಂದಿರದ ಪ್ರಮುಖರಾದ ಪಾಂಡುರಂಗ ಮಲ್ಪೆ, ಶಿವಪಂಚಾಕ್ಷರಿ ಭಜನಾ ಮಂದಿರದ ಅಧ್ಯಕ್ಷ ರವಿ ಸಾಲ್ಯಾನ್, ಅಯ್ಯಪ್ಪ ಮಂದಿರ ಗುರುಸ್ವಾಮಿ ಬಾಲಕೃಷ್ಣ ಗುರುಸ್ವಾಮಿ, ಸಿದ್ದ ಸಮಾಧಿ ಯೋಗದ ಸಾಧಕ ಬಾಲಕೃಷ್ಣ ಮೆಂಡನ್, ಮಲ್ಪೆ ಮೀನುಗಾರ ಸಂಘದ ಉಪಾಧ್ಯಕ್ಷ ವಿನಯ ಕರ್ಕೇರ, ಬಾಲಕರ ಭಜನಾ ಮಂದಿರದ ಮಾಜಿ ಅಧ್ಯಕ್ಷ ಶಂಕರ ಸುವರ್ಣ, ಶರತ್ ಆರ್. ಕರ್ಕೇರ, ಸುಂದರ್ ಜತ್ತನ್, ಹಿಂದೂ ಯುವ ಸೇನೆಯ ಅಧ್ಯಕ್ಷ ಮಂಜು ಕೊಳ, ಮಂದಿರದ ಅಧ್ಯಕ್ಷ ಶೇಖರ್ ಪುತ್ರನ್, ಗೌರವಾಧ್ಯಕ್ಷ ಜಗನ್ನಾಥ್ ಮೈಂದನ್, ಉಪಾಧ್ಯಕ್ಷ ದಯಾನಂದ ಕಾಂಚನ್, ಮಾಜಿ ಅಧ್ಯಕ್ಷರಾದ ಸುಂದರ ಪಿ. ಸಾಲ್ಯಾನ್, ಮೋಹನ್ ಕುಂದರ್, ಹರೀಶ್ ಮೈಂದನ್, ತುಕಾರಾಮ ಮೈಂದನ್, ಸುರೇಶ್ ಸಾಲ್ಯಾನ್, ಕಾರ್ಯದರ್ಶಿ ಸತೀಶ್ ಬಂಗೇರ, ಜತೆ ಕಾರ್ಯದರ್ಶಿ ಧನಂಜಯ ಕಾಂಚನ್, ಭಜನಾ ಸಂಚಾಲಕರಾದ ಕಾರ್ತಿಕ್ ಸಾಲ್ಯಾನ್, ರವಿ ಕರ್ಕೇರ, ವಿಜಯ ಸುವರ್ಣ, ಮಹಿಳಾ ಮಂಡಳಿಯ ಅಧ್ಯಕ್ಷೆ ಮೋಹಿನಿ ಪ್ರಭಾಕರ, ಗೌರವಾಧ್ಯಕ್ಷೆ ವಾರಿಜಾ ಮೈಂದನ್ ಹಾಗೂ ಮಂದಿರದ ಮತ್ತು ಮಹಿಳಾ ಮಂಡಲದ ಸರ್ವ ಸದಸ್ಯರುಗಳು ಪಾಲ್ಗೊಂಡಿದ್ದರು.