ಬೆಂಗಳೂರು: ಬೌರಿಂಗ್ ಇನ್‌ಸ್ಟಿಟ್ಯೂಟ್ ಕ್ಲಬ್‌ನ ಲಾಕರ್‌ನಲ್ಲಿ ಪತ್ತೆಯಾದ ನೂರಾರು ಕೋಟಿ ರೂ. ಸಂಪತ್ತಿನ ಕುರಿತು ತನಿಖೆ ಮುಂದುವರಿಸಿರುವ ಐಟಿ ಅಧಿಕಾರಿಗಳು, ಲಾಕರ್ ಬಳಕೆದಾರ ಎನ್ನಲಾದ ಉದ್ಯಮಿ ಅವಿನಾಶ್ ಅಗರ್‌ವಾಲ್ ಕುಕ್ರೇಜಾ ಅವರನ್ನು ಸೋಮವಾರ ಹೆಚ್ಚಿನ ವಿಚಾರಣೆಗೊಳಪಡಿಸುವ ಸಾಧ್ಯತೆ ಇದೆ.
ಬೌರಿಂಗ್ ಕ್ಲಬ್‌ನಲ್ಲಿ ಪತ್ತೆಯಾದ ಹಣ, ವಜ್ರಾಭರಣ, ನೂರಾರು ಕೋಟಿ ರೂ. ಮೌಲ್ಯದ ಆಸ್ತಿಪತ್ರಗಳ ಮೌಲ್ಯಮಾಪನ ಹಾಗೂ ಪಂಚನಾಮ ಪ್ರಕ್ರಿಯೆಗಳನ್ನು ಐಟಿ ಅಧಿಕಾರಿಗಳು ಶನಿವಾರ ರಾತ್ರಿ ಪೂರ್ಣಗೊಳಿಸಿದ್ದಾರೆ.
ಅಲ್ಲದೆ, ಅವಿನಾಶ್ ಅವರ ನಿವಾಸ, ಬೆಂಗಳೂರು ಸೇರಿದಂತೆ ಇನ್ನಿತರೆಡೆ ಆತನ ಉದ್ಯಮಗಳ ಕಂಪೆನಿಗಳ ಕಚೇರಿಗಳ ಬಗ್ಗೆ ಮಾಹಿತಿ ಪಡೆದಿದ್ದಾರೆ. ಅಲ್ಲದೆ, ಆತ ಸದಸ್ಯತ್ವ ಹೊಂದಿದ್ದ ಇತರೆ ಕ್ಲಬ್‌ಗಳಲ್ಲೂ ಕಾರ್ಯಾಚರಣೆ ನಡೆಸಿ ಅನೇಕ ಮಾಹಿತಿ ಸಂಗ್ರಹಿಸಿದ್ದಾರೆ.
ಈ ಮಧ್ಯೆ ಬೌರಿಂಗ್ ಕ್ಲಬ್‌ನಲ್ಲಿ ಪತ್ತೆಯಾದ ಸಂಪತ್ತಿಗೆ ಸಂಬಂಧಿಸಿದಂತೆ ಸೋಮವಾರ ಖುದ್ದು ವಿಚಾರಣೆಗೆ ಹಾಜರಾಗುವಂತೆ ಅವಿನಾಶ್ ಅಗರ್‌ವಾಲ್‌ಗೆ ಸೂಚನೆ ನೀಡಿದ್ದು, ವಿಚಾರಣೆಗಾಗಿ ಐಟಿ ಕಚೇರಿಗೆ ಅವಿನಾಶ್ ಆಗಮಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
ಈ ಮಧ್ಯೆ ಅವಿನಾಶ್ ಅಗರವಾಲ್ ಜತೆ ವ್ಯವಹಾರ ಹೊಂದಿರುವವರ ಬಗ್ಗೆಯೂ ಐಟಿ ಅಧಿಕಾರಿಗಳು ಮಾಹಿತಿ ಕಲೆಹಾಕುತ್ತಿದ್ದು, ಕೆಲವು ಗಣ್ಯರು ಆತನೊಂದಿಗೆ ಸಂಪರ್ಕ ಹೊಂದಿದ್ದಾರೆ ಎನ್ನಲಾಗುತ್ತಿದೆ. ಆದರೆ, ತನಿಖಾ ಹಂತದಲ್ಲಿ ಯಾವುದೇ ವಿಚಾರಗಳನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.