Advertisement

2 ತಿಂಗಳಲ್ಲಿ 4ನೇ ಬಾರಿ ವಿಮಾನ ಇಂಧನ ಬೆಲೆಯೇರಿಕೆ!

09:23 PM Feb 16, 2022 | Team Udayavani |

ನವದೆಹಲಿ: ಕಳೆದ ಎರಡು ತಿಂಗಳಲ್ಲಿ ನಾಲ್ಕನೇ ಬಾರಿಗೆ ವಿಮಾನಗಳ ಇಂಧನ ಬೆಲೆಯನ್ನು ಏರಿಸಲಾಗಿದೆ! ಈ ಬಾರಿಯಂತೂ ಜೆಟ್‌ ಇಂಧನ (ಏವಿಯೇಷನ್‌ ಟರ್ಬೈನ್‌ ಫ್ಯೂಯೆಲ್‌) ಬೆಲೆಯನ್ನು ಒಂದು ಕಿ.ಲೀ.ಗೆ ಶೇ.5.2 ಏರಿಸಲಾಗಿದೆ.

Advertisement

ಅಂದರೆ 4,481.63 ರೂ. ಬೆಲೆಯೇರಿಕೆಯಾಗಿದೆ. ಒಟ್ಟಾರೆ ಒಂದು ಕಿ.ಲೀ.ಗೆ ಬೆಲೆ ಇದೀಗ 90,519.79 ರೂ. ಇದಕ್ಕೆ ಕಾರಣ ಅಂತಾರಾಷ್ಟ್ರೀಯ ಕಚ್ಚಾತೈಲಗಳ ಬೆಲೆಯೇರಿಕೆಯಾಗಿರುವುದು.

ವಿಶೇಷವೆಂದರೆ ಪೆಟ್ರೋಲ್‌, ಡೀಸೆಲ್‌ ಬೆಲೆಗಳಲ್ಲಿ ಮಾತ್ರ ಯಾವುದೇ ವ್ಯತ್ಯಯವಾಗಿಲ್ಲ.

ಸತತ 103ನೇ ದಿನವೂ ಈ ಬೆಲೆಗಳು ಯಥಾಸ್ಥಿತಿಯಲ್ಲೇ ಮುಂದುವರಿದಿವೆ. ಇದಕ್ಕೆ ಕಾರಣ ಉತ್ತರಪ್ರದೇಶ, ಪಂಜಾಬ್‌ನಲ್ಲಿ ವಿಧಾನಸಭೆ ನಡೆಯುತ್ತಿರುವುದು ಎಂದು ವಿಶ್ಲೇಷಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next